ನಡುರಸ್ತೆಯಲ್ಲಿ ಬೈಕ್ ನಲ್ಲಿಯೇ ಚೆಲ್ಲಾಟ! ನೆಟ್ಟಿಗರು ಏನಂದ್ರು ಗೊತ್ತಾ?

ಜೋಡಿಯೊಂದು ನಡು ರಸ್ತೆಯಲ್ಲಿ ಬೈಕ್ ನಲ್ಲಿಯೇ ರೋಮ್ಯಾನ್ಸ್ ಮಾಡಿರುವ ಘಟನೆ ರಜೌರಿಯಲ್ಲಿ ನಡೆದಿದೆ. ಅಪರಿಚಿತ ಯುವ ಜೋಡಿಯೊಂದು ವಾಹನ ದಟ್ಟಣೆಯಿರುವ ರಸ್ತೆಯಲ್ಲಿ ಮಾಡಿರುವ ಸ್ಟಂಟ್ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ನೆಟ್ಟಿಗರು ಗರಂ ಆಗಿದ್ದಾರೆ.

Published: 03rd November 2019 10:37 AM  |   Last Updated: 03rd November 2019 10:43 AM   |  A+A-


Lovers_Romance1

ಯುವ ಜೋಡಿಯ ಚೆಲ್ಲಾಟ

Posted By : Nagaraja AB
Source : Online Desk

ರಜೌರಿ:  ಜೋಡಿಯೊಂದು ನಡು ರಸ್ತೆಯಲ್ಲಿ ಬೈಕ್ ನಲ್ಲಿಯೇ ರೋಮ್ಯಾನ್ಸ್ ಮಾಡಿರುವ ಘಟನೆ ರಜೌರಿಯಲ್ಲಿ ನಡೆದಿದೆ. ಅಪರಿಚಿತ ಯುವ ಜೋಡಿಯೊಂದು ವಾಹನ ದಟ್ಟಣೆಯಿರುವ ರಸ್ತೆಯಲ್ಲಿ ಮಾಡಿರುವ ಸ್ಟಂಟ್ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ನೆಟ್ಟಿಗರು ಗರಂ ಆಗಿದ್ದಾರೆ.

ಬೈಕ್ ನ ಪೆಟ್ರೋಲ್ ಟ್ಯಾಂಕ್ ಮೇಲೆ ಕುಳಿತಿರುವ ಯುವತಿ, ಯುವಕನನ್ನು ತಬ್ಬಿಕೊಂಡು ಅವನನ್ನು ಚುಂಬಿಸುತ್ತಾ ನಡು ರಸ್ತೆಯಲ್ಲೇ, ಸರಸವಾಡುತ್ತಾ ಸಾಗಿದ್ದಾರೆ. 

ಐಪಿಎಸ್ ಅಧಿಕಾರಿ ಹೆಚ್. ಪಿ. ಎಸ್ . ದಲಿವಾಲ್ ಈ ಜೋಡಿಯ ಆಟಗಳ ವಿಡಿಯೋವನ್ನು ಟ್ವೀಟರ್ ನಲ್ಲಿ ಶೇರ್ ಮಾಡಿದ್ದು, ಪೊಲೀಸರು ಅವರ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ.

 

ಇಂತಹ ಚೆಲ್ಲಾಟ ತೆಡೆಗೆ ಮೋಟಾರು ವಾಹನ ಉಲ್ಲಂಘನೆಯ ಕಾಯ್ದೆಗೆ ನೂತನ ಸೆಕ್ಷನ್ ಗಳನ್ನು ಸೇರಿಸುವ ಅಗತ್ಯವಿದೆ ಎಂದು ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Stay up to date on all the latest ರಾಷ್ಟ್ರೀಯ news with The Kannadaprabha App. Download now
facebook twitter whatsapp