ವಿಶ್ವದಾದ್ಯಂತ ಟ್ವಿಟರ್ ನಲ್ಲಿ ಟಾಪ್ ಒನ್ ಟ್ರೆಂಡ್ ಆದ ಅಯೋಧ್ಯೆ ತೀರ್ಪು

ಹಲವು ದಶಕಗಳ ಹಳೆಯದಾದ ಅಯೋಧ್ಯೆ ಭೂ ವಿವಾದಕ್ಕೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್ ಇಂದು ಚಾರಿತ್ರಿಕ ತೀರ್ಪು ಪ್ರಕಟಿಸಿದ ಬಳಿಕ  ಟ್ವೀಟರ್ ನಲ್ಲಿ  ಅಯೋಧ್ಯೆ ತೀರ್ಪು, ರಾಮಮಂದಿರ ಆರಂಭದಂತಹ ಹ್ಯಾಷ್ ಟಾಗ್ ದೇಶ, ವಿದೇಶಗಳಲ್ಲಿ ಟ್ರೆಂಡಿಂಗ್ ಸೃಷ್ಟಿಸಿತು. 
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ನವದೆಹಲಿ: ಹಲವು ದಶಕಗಳ ಹಳೆಯದಾದ ಅಯೋಧ್ಯೆ ಭೂ ವಿವಾದಕ್ಕೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್ ಇಂದು ಚಾರಿತ್ರಿಕ ತೀರ್ಪು ಪ್ರಕಟಿಸಿದ ಬಳಿಕ  ಟ್ವೀಟರ್ ನಲ್ಲಿ  ಅಯೋಧ್ಯೆ ತೀರ್ಪು, ರಾಮಮಂದಿರ ಆರಂಭದಂತಹ ಹ್ಯಾಷ್ ಟಾಗ್ ದೇಶ, ವಿದೇಶಗಳಲ್ಲಿ ಟ್ರೆಂಡಿಂಗ್ ಸೃಷ್ಟಿಸಿತು. 

ಮಧ್ಯಾಹ್ನ 2-30ರವರೆಗೂ ವಿಶ್ವದ ಟಾಪ್ 10ರಲ್ಲಿ ಐದು ಹಾಗೂ ದೇಶದಲ್ಲಿ  ಎಲ್ಲಾ 10 ಟಾಪಿಕ್ಸ್ ಗಳು ಸುಪ್ರೀಂಕೋರ್ಟ್ ಆದೇಶಕ್ಕೆ ಸಂಬಂಧಿಸಿದ ಟ್ರೆಂಡಿಂಗ್ ಆಗಿದ್ದವು.

ದೇಶ ಹಾಗೂ ವಿದೇಶದಲ್ಲಿ ಅಯೋಧ್ಯೆ ತೀರ್ಪು ಹ್ಯಾಷ್ ಟಾಗ್  550,000 ಕ್ಕೂ ಹೆಚ್ಚು ಟ್ವೀಟ್ ಗಳನ್ನು  ಹೊಂದುವ ಮೂಲಕ ಟಾಪ್ ಟ್ರೆಂಡ್ ಆಗಿತ್ತು. 

ಭಾರತದಲ್ಲಿ ಬಾಬ್ರಿ ಮಸೀದಿ, ಅಯೋಧ್ಯೆ ಜಡ್ಜ್ ಮೆಂಟ್ ಮತ್ತು ರಾಮಜನ್ಮಭೂಮಿ ಹ್ಯಾಷ್ ಟಾಗ್ ಕೂಡಾ ಟಾಪ್ ಟ್ರೆಂಡ್ಸ್ ಆಗಿದ್ದವು.  ಈ ಪೈಕಿ ರಾಮ ಮಂದಿರ ಹ್ಯಾಷ್ ಟಾಗ್  ಗೆ 160, 000ಕ್ಕೂ ಹೆಚ್ಚು ಟ್ವೀಟ್ ಹೊಂದುವ ಮೂಲಕ ಎರಡನೇ ಅತಿದೊಡ್ಡ ಟ್ರೆಂಡಿಂಗ್ ಆಗಿತ್ತು. ಈ ಮಧ್ಯೆ ಸುಪ್ರೀಂಕೋರ್ಟ್ ಹ್ಯಾಷ್ ಟಾಗ್ ಕೂಡಾ 200,000ಕ್ಕೂ ಹೆಚ್ಚು ಟ್ವಿಟ್ ಗಳು ಬಂದಿದ್ದವು. 

ಸುಪ್ರೀಂಕೋರ್ಟ್ ಮುಖ್ಯ ನ್ಯಾಯಾಧೀಶರಾಗಿದ್ದರಿಂದ ರಂಜನ್ ಗೋಗೊಯ್ ಕೂಡಾ ಟ್ರೆಂಡಿಂಗ್ ನಲ್ಲಿದ್ದರು.  ಹಿಂದೂ ಮುಸ್ಲಿಂ ಬಾಯ್ ಬಾಯ್ ಹ್ಯಾಷ್ ಟಾಗಿಗೂ   33 ಸಾವಿರಕ್ಕೂ ಹೆಚ್ಚು ಟ್ವೀಟ್ ಹೊಂದುವ ಮೂಲಕ ಟ್ರೆಂಡಿಂಗ್ ನಲ್ಲಿತ್ತು 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com