ರಿಲಯನ್ಸ್ ಉದ್ಯೋಗಿಗಳಿಂದ 78 ಟನ್ ತ್ಯಾಜ್ಯ ಪ್ಲಾಸ್ಟಿಕ್ ಬಾಟಲಿ ಸಂಗ್ರಹ

ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ (ಆರ್‌ಐಎಲ್) ಸಾರ್ವಜನಿಕರ ಸೇವೆಯ ಅಂಗವಾಗಿ ರಿಲಯನ್ಸ್ ಫೌಂಡೇಶನ್ ತನ್ನ ಸ್ವಯಂ ಸೇವಕರ ಮೂಲಕ ಪರಿಸರ ಸಂರಕ್ಷಣೆ ಮತ್ತು ಪ್ಲಾಸ್ಟಿಕ್ ಮರುಬಳಕೆಯನ್ನು ಪ್ರೋತ್ಸಾಹಿಸುವ ಸಲುವಾಗಿ ಅಭಿಯಾನವೊಂದನ್ನು ನಡೆಸಿ, ಮರು ಬಳಕೆ ಸಾಧ್ಯವಾಗುವ 78 ಟನ್ ತ್ಯಾಜ್ಯ ಪ್ಲಾಸ್ಟಿಕ್ ಬಾಟಲಿಗಳನ್ನು ಸಂಗ್ರಹಿಸಿದೆ.
ರಿಲಯನ್ಸ್ ಉದ್ಯೋಗಿಗಳಿಂದ 78 ಟನ್ ತ್ಯಾಜ್ಯ ಪ್ಲಾಸ್ಟಿಕ್ ಬಾಟಲಿ ಸಂಗ್ರಹ
ರಿಲಯನ್ಸ್ ಉದ್ಯೋಗಿಗಳಿಂದ 78 ಟನ್ ತ್ಯಾಜ್ಯ ಪ್ಲಾಸ್ಟಿಕ್ ಬಾಟಲಿ ಸಂಗ್ರಹ

ಮುಂಬೈ: ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ (ಆರ್‌ಐಎಲ್) ಸಾರ್ವಜನಿಕರ ಸೇವೆಯ ಅಂಗವಾಗಿ ರಿಲಯನ್ಸ್ ಫೌಂಡೇಶನ್ ತನ್ನ ಸ್ವಯಂ ಸೇವಕರ ಮೂಲಕ ಪರಿಸರ ಸಂರಕ್ಷಣೆ ಮತ್ತು ಪ್ಲಾಸ್ಟಿಕ್ ಮರುಬಳಕೆಯನ್ನು ಪ್ರೋತ್ಸಾಹಿಸುವ ಸಲುವಾಗಿ ಅಭಿಯಾನವೊಂದನ್ನು ನಡೆಸಿ, ಮರು ಬಳಕೆ ಸಾಧ್ಯವಾಗುವ 78 ಟನ್ ತ್ಯಾಜ್ಯ ಪ್ಲಾಸ್ಟಿಕ್ ಬಾಟಲಿಗಳನ್ನು ಸಂಗ್ರಹಿಸಿದೆ.

ರಿಲಯನ್ಸ್ ನ 3 ಲಕ್ಷ ಉದ್ಯೋಗಿಗಳು, ಅವರ ಕುಟುಂಬ ಸದಸ್ಯರು ಮತ್ತು ಆರ್‌ಐಎಲ್‌ನ ಪಾಲುದಾರರು ಮತ್ತು ಅದರ ಸಂಬಂಧಿತ ಉದ್ಯಮಗಳಾದ ಜಿಯೋ ಮತ್ತು ರಿಲಯನ್ಸ್ ರಿಟೇಲ್‌ನ ಎಲ್ಲಾ ಸದಸ್ಯರು ಈ ಅಭಿಯಾನದಲ್ಲಿ ಪಾಲ್ಗೊಂಡು ಭಾರತದ ಹಲವಾರು ಸ್ಥಳಗಳಲ್ಲಿ ಏಕ ಕಾಲದಲ್ಲಿ ದೊಡ್ಡ ಪ್ರಮಾಣದಲ್ಲಿ ತ್ಯಾಜ್ಯ ಪ್ಲಾಸ್ಟಿಕ್ ಬಾಟಲಿಗಳನ್ನು ಸಂಗ್ರಹಿಸುವ ಮೂಲಕ ಹೊಸದೊಂದು ದಾಖಲೆಗೆ ಸಾಕ್ಷಿಯಾಗಿದ್ದಾರೆ.

ಅಕ್ಟೋಬರ್‌ನಲ್ಲಿ ರಿಲಯನ್ಸ್ ಭಾರತದಾದ್ಯಂತ ವ್ಯಾಪಕ ಅಭಿಯಾನವೊಂದನ್ನು ನಡೆಸವ ಸಲುವಾಗಿ ‘ರಿಸೈಕಲ್ ಫಾರ್ ಲೈಫ್’ ಅನ್ನು ರೂಪಿಸಿತ್ತು. ಈ ಅಭಿಯಾನದ ಸಲುವಾಗಿ ನೌಕರರು ತಮ್ಮ ಸುತ್ತಮುತ್ತಲಿನ ತ್ಯಾಜ್ಯ ಪ್ಲಾಸ್ಟಿಕ್ ಬಾಟಲಿಗಳನ್ನು ಸಂಗ್ರಹಿಸಿ ಮರುಬಳಕೆಗಾಗಿ ತಮ್ಮ ಕಚೇರಿಗಳಿಗೆ ತರಲು ಪ್ರೋತ್ಸಾಹಿಸಲಾಯಿತು. ಸ್ವಚ್ಛ ಮತ್ತು ಹಸಿರು ಪರಿಸರಕ್ಕಾಗಿ ಪ್ಲಾಸ್ಟಿಕ್ ಮರುಬಳಕೆಯನ್ನು ಮಾಡುವಂತೆ ಸಂದೇಶವನ್ನು ಸಾರುವ ಸಲುವಾಗಿ ದೇಶದಲ್ಲಿ ಕಾರ್ಯನಿರ್ವಹಿಸುತ್ತಿರುವ ಆರ್‌ಐಎಲ್ ಮತ್ತು ಸಂಬಂಧಿತ ಎಲ್ಲಾ ಸಂಸ್ಥೆಗಳು ಈ ಕಾರ್ಯದಲ್ಲಿ ತೊಡಗಿಕೊಂಡಿದ್ದವು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com