ಅಂತರ್ಜಾಲ ಸ್ಥಗಿತಕ್ಕೆ 100 ದಿನ: ಶ್ರೀನಗರದಲ್ಲಿ ಪತ್ರಕರ್ತರ ಪ್ರತಿಭಟನೆ

ಶ್ರೀನಗರದಲ್ಲಿ ಅಂತರ್ಜಾಲ ಸೇವೆ ಸ್ಥಗಿತಗೊಂಡು 100 ದಿನಗಳು ಪೂರ್ಣಗೊಂಡ ಹಿನ್ನೆಲೆಯಲ್ಲಿ ಮಂಗಳವಾರ ಪತ್ರಕರ್ತರು ಮತ್ತು ಫೋಟೋ ಜರ್ನಲಿಸ್ಟ್‌ಗಳು ಸೇರಿದಂತೆ ಹಲವು ಮಾಧ್ಯಮ ಪ್ರತಿನಿಧಿಗಳು ಬೇಸಿಗೆ ರಾಜಧಾನಿ ಶ್ರೀನಗರದಲ್ಲಿ ಧರಣಿ ನಡೆಸಿದರು.

Published: 12th November 2019 10:21 PM  |   Last Updated: 12th November 2019 10:21 PM   |  A+A-


Journalists in Kashmir Protest Against 100 Days of Suspension of Internet Services

ಅಂತರ್ಜಾಲ ಸ್ಥಗಿತಕ್ಕೆ 100 ದಿನ: ಶ್ರೀನಗರದಲ್ಲಿ ಪತ್ರಕರ್ತರ ಪ್ರತಿಭಟನೆ

Posted By : Srinivas Rao BV
Source : UNI

ಶ್ರೀನಗರ: ಶ್ರೀನಗರದಲ್ಲಿ ಅಂತರ್ಜಾಲ ಸೇವೆ ಸ್ಥಗಿತಗೊಂಡು 100 ದಿನಗಳು ಪೂರ್ಣಗೊಂಡ ಹಿನ್ನೆಲೆಯಲ್ಲಿ ಮಂಗಳವಾರ ಪತ್ರಕರ್ತರು ಮತ್ತು ಫೋಟೋ ಜರ್ನಲಿಸ್ಟ್‌ಗಳು ಸೇರಿದಂತೆ ಹಲವು ಮಾಧ್ಯಮ ಪ್ರತಿನಿಧಿಗಳು ಬೇಸಿಗೆ ರಾಜಧಾನಿ ಶ್ರೀನಗರದಲ್ಲಿ ಧರಣಿ ನಡೆಸಿದರು.

ಶ್ರೀನಗರದ ಕಾಶ್ಮೀರ ಪ್ರೆಸ್ ಕ್ಲಬ್‌ನಲ್ಲಿ ಮಂಗಳವಾರ ವಿವಿಧ ಸ್ಥಳೀಯ, ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಮಾಧ್ಯಮ ಸಂಸ್ಥೆಗಳಿಗೆ ಸೇರಿದ ಮಾಧ್ಯಮ ಪ್ರತಿನಿಧಿಗಳು, ಬ್ರಾಡ್‌ಬ್ಯಾಂಡ್‌ ಮತ್ತು ಮೊಬೈಲ್ ಇಂಟರ್ನೆಟ್ ಅನ್ನು ಸ್ಥಗಿತಗೊಳಿಸುವುದರ ವಿರುದ್ಧ ಪ್ರತಿಭಟನೆ  ನಡೆಸಿದರು, ಆಗಸ್ಟ್ 5 ರಂದು ಸಂವಿಧಾನದ 370 ಮತ್ತು 35 ಎ ವಿಧಿಯನ್ನು ಕೇಂದ್ರ ಸರ್ಕಾರ ರದ್ದುಗೊಳಿಸಿದ ನಂತರ ರಾಜ್ಯದಲ್ಲಿ ಇಂಟರ್ ನೆಟ್ ಸೇವೆ ರದ್ದುಗೊಳಿಸಲಾಗಿದೆ. 

"ಕಾಶ್ಮೀರಿ ಪತ್ರಕರ್ತರನ್ನು ಅವಮಾನಿಸುವುದನ್ನು ನಿಲ್ಲಿಸಿ, "100 ದಿನಗಳು, ಇಂಟರ್ನೆಟ್ ಇಲ್ಲ" ಎಂದು ಬರೆದಿರುವ ಫಲಕಗಳನ್ನು ಹಿಡಿದುಕೊಂಡು, ಘೋಷಣೆಗಳನ್ನು ಕೂಗಿದ ಪತ್ರಕರ್ತರು ತಮ್ಮ ಲ್ಯಾಪ್‌ಟಾಪ್‌ ಸ್ಕ್ರೀನ್‌ನಲ್ಲಿ ಕಪ್ಪು ಪರದೆ ಪ್ರದರ್ಶಿಸಿ  ತಮ್ಮ ಪ್ರತಿಭಟನೆಯನ್ನು ದಾಖಲಿಸಿದರು. ಇಂಟರ್‌ನೆಟ್ ಸೌಲಭ್ಯ ಕಡಿತಗೊಂಡಿರುವುದರಿಂದ ತಮ್ಮ ದಿನನಿತ್ಯದ ಕೆಲಸ ಕಾರ್ಯಗಳಿಗೆ ತೊಂದರೆಯಾಗಿದೆ ಎಂದು ಪತ್ರಕರ್ತರು ತಿಳಿಸಿದರು.

Stay up to date on all the latest ರಾಷ್ಟ್ರೀಯ news
Poll
IPL2020

ಚೀನಾದ ಪ್ರಾಯೋಜಕರೊಂದಿಗಿನ ಒಪ್ಪಂದವನ್ನು ಮುಂದುವರಿಸಿರುವ ಕಾರಣ ಭಾರತೀಯರು ಐಪಿಎಲ್ ಅನ್ನು ಬಹಿಷ್ಕರಿಸಬೇಕೆಂದು ಸ್ವದೇಶಿ ಜಾಗರನ್ ಮಂಚ್ ಹೇಳಿದೆ. ನೀವು ಏನಂತೀರಿ?


Result
ಸರಿ
ತಪ್ಪು
ಗೊತ್ತಿಲ್ಲ
flipboard facebook twitter whatsapp