ಜಮ್ಮು- ಕಾಶ್ಮೀರ ಮುಖಂಡರನ್ನು ಬಿಡುಗಡೆ ಮಾಡ್ತಿವಿ.ಆದರೆ, ಸಮಯದ ಚೌಕಟ್ಟು ಇಲ್ಲ-ಗೃಹ ಸಚಿವಾಲಯ 

ಕಣಿವೆ ರಾಜ್ಯ ಜಮ್ಮು- ಕಾಶ್ಮೀರ ಸಹಜ ಸ್ಥಿತಿಯತ್ತ ಮರಳುತ್ತಿದ್ದು, ಬಂಧಿಸಲ್ಪಟ್ಟಿರುವ ರಾಜಕೀಯ ನಾಯಕರನ್ನು ಬಿಡುಗಡೆ ಮಾಡಲಾಗುವುದು, ಆದರೆ, ಸಮಯದ ಚೌಕಟ್ಟುಇಲ್ಲ ಎಂದು  ಗೃಹ ಸಚಿವಾಲಯದ ಅಧಿಕಾರಿಗಳು ಸಂಸದೀಯ ಸಮಿತಿಗೆ ಹೇಳಿದ್ದಾರೆ ಎಂದು ಮೂಲಗಳಿಂದ ತಿಳಿದುಬಂದಿದೆ.
ಒಮಾರ್ ಅಬ್ದುಲ್ಲಾ, ಮೆಹಾಬೂಬಾ ಮುಫ್ತಿ
ಒಮಾರ್ ಅಬ್ದುಲ್ಲಾ, ಮೆಹಾಬೂಬಾ ಮುಫ್ತಿ

ನವದೆಹಲಿ:ಕಣಿವೆ ರಾಜ್ಯ ಜಮ್ಮು- ಕಾಶ್ಮೀರ ಸಹಜ ಸ್ಥಿತಿಯತ್ತ ಮರಳುತ್ತಿದ್ದು, ಬಂಧಿಸಲ್ಪಟ್ಟಿರುವ ರಾಜಕೀಯ ನಾಯಕರನ್ನು ಬಿಡುಗಡೆ ಮಾಡಲಾಗುವುದು, ಆದರೆ, ಸಮಯದ ಚೌಕಟ್ಟುಇಲ್ಲ ಎಂದು  ಗೃಹ ಸಚಿವಾಲಯದ ಅಧಿಕಾರಿಗಳು ಸಂಸದೀಯ ಸಮಿತಿಗೆ ಹೇಳಿದ್ದಾರೆ ಎಂದು ಮೂಲಗಳಿಂದ ತಿಳಿದುಬಂದಿದೆ.

ಕಾಂಗ್ರೆಸ್ ಮುಖಂಡ ಆನಂದ್ ಶರ್ಮಾ ನೇತೃತ್ವದಲ್ಲಿನ  ಗೃಹ ವ್ಯವಹಾರಗಳ ಮೇಲಿನ ಸಂಸದೀಯ ಸ್ಥಾಯಿ ಸಮಿತಿ ಮುಂದೆ ಕೇಂದ್ರ ಗೃಹ ಕಾರ್ಯದರ್ಶಿ ಅಜಯ್ ಕುಮಾರ್ ಬಾಳಾ ಮತ್ತು ಹೆಚ್ಚುವರಿ ಕಾರ್ಯದರ್ಶಿ ಜ್ಞಾನೇಶ್ ಕುಮಾರ್ ಮತ್ತಿತರ ಅಧಿಕಾರಿಗಳು ಜಮ್ಮು- ಕಾಶ್ಮೀರ ಹಾಗೂ ಲಡಾಕ್ ನಲ್ಲಿನ ಪರಿಸ್ಥಿತಿಯನ್ನು ವಿವರಿಸಿದ್ದಾರೆ.

ವಿವಾದಾತ್ಮಕ ಸಾರ್ವಜನಿಕ ಭದ್ರತಾ ಕಾಯ್ದೆಯಡಿ ಸೆಪ್ಟೆಂಬರ್ 17 ರಿಂದಲೂ ಮೂವರು ಮಾಜಿ ಮುಖ್ಯಮಂತ್ರಿಗಳು, ಶ್ರೀನಗರ ಸಂಸದ ಪಾರೂಖ್ ಅಬ್ದುಲ್ಲಾ ಮತ್ತಿತರ ನಾಯಕರನ್ನು ಬಂಧನದಲ್ಲಿಟ್ಟಿರುವ ಬಗ್ಗೆ ಲೋಕಸಭೆ ಹಾಗೂ ರಾಜ್ಯಸಭೆಯ ಸಂಸದರು ಪ್ರಶ್ನಿಸಿದ್ದಾರೆ.

 ಸಾರ್ವಜನಿಕ  ಭದ್ರತಾ ಕಾಯ್ದೆಯಡಿಯಲ್ಲಿ ಬಂಧನಕ್ಕೊಳಗಾದವರು ಗೊತ್ತುಪಡಿಸಿದ ನ್ಯಾಯಮಂಡಳಿಯಲ್ಲಿ ತಮ್ಮ ಬಂಧನವನ್ನು ಪ್ರಶ್ನಿಸಬಹುದು ಎಂದು ಗೃಹ ಸಚಿವಾಲಯದ ಅಧಿಕಾರಿಗಳು ಸಂಸದೀಯ ಸಮಿತಿಗೆ ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com