ಜೆಎನ್ ಯು ವಿವಿಯಲ್ಲಿ ಮತ್ತೊಂದು ವಿವಾದ: ಸ್ವಾಮಿ ವಿವೇಕಾನಂದರ ಪ್ರತಿಮೆ ವಿರೂಪಗೊಳಿಸಿದ ದುಷ್ಕರ್ಮಿಗಳು

ಸದಾ ಒಂದಲ್ಲಾ ಒಂದು ವಿವಾದಗಳಿಗೆ ಸುದ್ದಿಯಾಗುವ ಜವಾಹರ್ ಲಾಲ್ ನೆಹರು ವಿವಿಯಲ್ಲಿ ಮತ್ತೊಂದು ವಿವಾದವಾಗಿದೆ. 

Published: 15th November 2019 01:41 AM  |   Last Updated: 15th November 2019 01:41 AM   |  A+A-


Posted By : Srinivas Rao BV
Source : Online Desk

ನವದೆಹಲಿ: ಸದಾ ಒಂದಲ್ಲಾ ಒಂದು ವಿವಾದಗಳಿಗೆ ಸುದ್ದಿಯಾಗುವ ಜವಾಹರ್ ಲಾಲ್ ನೆಹರು ವಿವಿಯಲ್ಲಿ ಮತ್ತೊಂದು ವಿವಾದವಾಗಿದೆ. 

ಯೂನಿವರ್ಸಿಟಿಯಲ್ಲಿರುವ ಸ್ವಾಮಿ ವಿವೇಕಾನಂದರ ಪ್ರತಿಮೆಯನ್ನು ಕಿಡಿಗೇಡಿಗಳು ವಿರೂಪಗೊಳಿಸಿದ್ದಾರೆ. 

ನ.13 ರಂದು ರಾತ್ರಿ ಪ್ರತಿಮೆಯನ್ನು ವಿರೂಪಗೊಳಿಸಲಾಗಿದೆ ಎಂದು ತಿಳಿದುಬಂದಿದೆ. ಪ್ರತಿಮೆಯನ್ನು ವಿರೂಪಗೊಳಿಸುವುದಷ್ಟೇ ಅಲ್ಲದೇ ಅದರ ಸುತ್ತಲೂ ಆಕ್ಷೆಪಾರ್ಹ ಬರಹಗಳನ್ನು ಬರೆಯಲಾಗಿದೆ. 

ಘಟನೆಗೆ ಕಾರಣ ಯಾರು ಎಂಬುದು ಈ ವರೆಗೂ ತಿಳಿದುಬಂದಿಲ್ಲ. ಕಳೆದ ಕೆಲವು ದಿನಗಳಿಂದ ಜೆಎನ್ ಯು ವಿವಿ ಶುಲ್ಕ ಹೆಚ್ಚಳದ ವಿರುದ್ಧ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸುತ್ತಿದ್ದರು, ಇದಕ್ಕೂ ಈ ಘಟನೆಗೂ ಸಂಬಂಧವಿದೆಯಾ ಎಂಬ ದೃಷ್ಟಿಯಿಂದಲೂ ತನಿಖೆ ನಡೆಯುತ್ತಿದೆ.
 

Stay up to date on all the latest ರಾಷ್ಟ್ರೀಯ news
Poll
Rohit Sharma

ಮುಂಬರುವ ಆಸ್ಟ್ರೇಲಿಯಾ ಪ್ರವಾಸದಲ್ಲಿ ರೋಹಿತ್ ಶರ್ಮಾ ಅವರ ಅನುಪಸ್ಥಿತಿಯು ಟೀಮ್ ಇಂಡಿಯಾದ ಸಾಧನೆಯ ಮೇಲೆ ಪರಿಣಾಮ ಬೀರುತ್ತದೆಯೇ?


Result
ಹೌದು
ಇಲ್ಲ
ಗೊತ್ತಿಲ್ಲ
flipboard facebook twitter whatsapp