ಮಹಾ ಸರ್ಕಾರ ರಚನೆ ಬಿಕ್ಕಟ್ಟು: ಒಪ್ಪಂದಕ್ಕೆ ಎನ್ ಸಿಪಿ - ಕಾಂಗ್ರೆಸ್ ಒಪ್ಪಿಗೆ, ನಾಳೆ ಶಿವಸೇನಾ ಜತೆ ಮಾತುಕತೆ

ಮಹರಾಷ್ಟ್ರದಲ್ಲಿ ಸರ್ಕಾರ ರಚನೆಗೆ ಸಂಬಂಧಿಸಿದಂತೆ ಎರಡು ಪಕ್ಷಗಳ ಮಾತುಕತೆ ಅಂತಿಮಗೊಂಡಿದ್ದು, ಶುಕ್ರವಾರ ಮುಂಬೈನಲ್ಲಿ ಶಿವಾಸೇನಾ ಜತೆ ಮಾತುಕತೆ ನಡೆಸಿ ಮೈತ್ರಿ ಅಂತಿಮಗೊಳಿಸಲಾಗುವುದು ಎಂದು ಕಾಂಗ್ರೆಸ್ - ಎನ್ ಸಿಪಿ ತಿಳಿಸಿವೆ.
ನವಾಬ್ ಮಲಿಕ್, ಪೃಥ್ವಿರಾಜ್ ಚೌಹ್ಹಾಣ್
ನವಾಬ್ ಮಲಿಕ್, ಪೃಥ್ವಿರಾಜ್ ಚೌಹ್ಹಾಣ್

ನವದೆಹಲಿ: ಮಹರಾಷ್ಟ್ರದಲ್ಲಿ ಸರ್ಕಾರ ರಚನೆಗೆ ಸಂಬಂಧಿಸಿದಂತೆ ಎರಡು ಪಕ್ಷಗಳ ಮಾತುಕತೆ ಅಂತಿಮಗೊಂಡಿದ್ದು, ಶುಕ್ರವಾರ ಮುಂಬೈನಲ್ಲಿ ಶಿವಾಸೇನಾ ಜತೆ ಮಾತುಕತೆ ನಡೆಸಿ ಮೈತ್ರಿ ಅಂತಿಮಗೊಳಿಸಲಾಗುವುದು ಎಂದು ಕಾಂಗ್ರೆಸ್ - ಎನ್ ಸಿಪಿ ತಿಳಿಸಿವೆ.

ಕಾಂಗ್ರೆಸ್ ಹಾಗೂ ಎನ್ ಸಿಪಿ ಮುಖಂಡರ ಸಭೆಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಮಹಾರಾಷ್ಟ್ರ ಮಾಜಿ ಮುಖ್ಯಮಂತ್ರಿ ಪೃಥ್ವಿರಾಜ್ ಚೌಹ್ಹಾಣ್ ಅವರು, ಎಲ್ಲಾ ವಿಷಯಗಳ ಬಗ್ಗೆ ಎರಡೂ ಪಕ್ಷಗಳಿಗೂ "ಸಂಪೂರ್ಣ ಒಮ್ಮತ" ಇದೆ. ನಾಳೆ ಶಿವಸೇನಾ ಜೊತೆ ಮಾತುಕತೆ ನಡೆಸಿದ ಬಳಿಕ ಮೈತ್ರಿ ಪಾಲುದಾರರ ಸಾಮಾನ್ಯ ಕನಿಷ್ಠ ಕಾರ್ಯಕ್ರಮ ಹಾಗೂ ಮೂರು ಪಕ್ಷಗಳ ನಡುವೆ ಅಧಿಕಾರ ಹಂಚಿಕೆ ಸೂತ್ರವನ್ನು ಬಹಿರಂಗಪಡಿಸಲಾಗುವುದು ಎಂದರು.

ಎನ್ ಸಿಪಿ ಮುಖ್ಯಸ್ಥ ಶರದ್ ಪವಾರ್ ನಿವಾಸದಲ್ಲಿ ನಿನ್ನೆಯಿಂದ ನಡೆದ ಎನ್ ಸಿಪಿ ಹಾಗೂ ಕಾಂಗ್ರೆಸ್ ನಾಯಕರ ಸರಣಿ ಸಭೆ ಇಂದು ಮುಕ್ತಾಯವಾಗಿದ್ದು, ಮಹಾರಾಷ್ಟ್ರದಲ್ಲಿ ಸ್ಥಿರ ಸರ್ಕಾರ ನೀಡುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ನಾಳೆ ಶಿವಸೇನಾ ಜತೆ ಸಭೆ ಬಳಿಕ ಮುಂಬೈನಲ್ಲಿಯೇ ಅಂತಿಮ ನಿರ್ಧಾರ ಪ್ರಕಟಗೊಳ್ಳುವ ಸಾಧ್ಯತೆಗಳಿವೆ ಎಂದು ಮೂಲಗಳು ತಿಳಿಸಿವೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com