ನೀರಾವರಿ ಹಗರಣದಿಂದ ಅಜಿತ್ ಪವಾರ್ ಗೆ ಕ್ಲೀನ್ ಚಿಟ್: ಸುಪ್ರೀಂ ಮೆಟ್ಟಿಲೇರಲು ಶಿವಸೇನೆ-ಎನ್ ಸಿಪಿ-ಕಾಂಗ್ರೆಸ್ ನಿರ್ಧಾರ 

ದೇವೇಂದ್ರ ಫಡ್ನವೀಸ್ ಜೊತೆ ಎನ್ ಸಿಪಿಯ ನಾಯಕ ಅಜಿತ್ ಪವಾರ್ ಉಪಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿ ಬಿಜೆಪಿಗೆ ಸರ್ಕಾರ ರಚನೆ ಮಾಡಲು ಸಹಕರಿಸಿದ್ದ ಬೆನ್ನಲ್ಲೇ ಮಹಾರಾಷ್ಟ್ರದಲ್ಲಿ ಅಜಿತ್ ಪವಾರ್ ಮುಖ್ಯ ಆರೋಪಿಯಾಗಿದ್ದ 70,000 ಕೋಟಿ ರೂಪಾಯಿ ಮೊತ್ತದ ನೀರಾವರಿ ಹಗರಣ ಕೇಸನ್ನು ಇತ್ಯರ್ಥಗೊಳಿಸಿರುವುದನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್ ಮೊರೆ ಹೋಗಲು ಶಿವಸೇನೆ, 
ಅಜಿತ್ ಪವಾರ್
ಅಜಿತ್ ಪವಾರ್

ಮುಂಬೈ: ದೇವೇಂದ್ರ ಫಡ್ನವೀಸ್ ಜೊತೆ ಎನ್ ಸಿಪಿಯ ನಾಯಕ ಅಜಿತ್ ಪವಾರ್ ಉಪಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿ ಬಿಜೆಪಿಗೆ ಸರ್ಕಾರ ರಚನೆ ಮಾಡಲು ಸಹಕರಿಸಿದ್ದ ಬೆನ್ನಲ್ಲೇ ಮಹಾರಾಷ್ಟ್ರದಲ್ಲಿ ಅಜಿತ್ ಪವಾರ್ ಮುಖ್ಯ ಆರೋಪಿಯಾಗಿದ್ದ 70,000 ಕೋಟಿ ರೂಪಾಯಿ ಮೊತ್ತದ ನೀರಾವರಿ ಹಗರಣ ಕೇಲನ್ನು ಇತ್ಯರ್ಥಗೊಳಿಸಿರುವುದನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್ ಮೊರೆ ಹೋಗಲು ಶಿವಸೇನೆ, ಕಾಂಗ್ರೆಸ್ ಮತ್ತು ಎನ್ ಸಿಪಿ ತೀರ್ಮಾನಿಸಿವೆ.


ನೀರಾವರಿ ಹಗರಣದಿಂದ ಮುಕ್ತಗೊಳಿಸಿ ಅಜಿತ್ ಪವಾರ್ ಗೆ ಕ್ಲೀನ್ ಚಿಟ್ ನೀಡಲಾಗಿದ್ದು ಅವರ ಅಕ್ರಮವನ್ನು ಮುಚ್ಚಿಹಾಕುವ ಯತ್ನವಿದು ಎಂದು ಮೂರೂ ಪಕ್ಷಗಳು ಆರೋಪಿಸಿವೆ.


ಸುಪ್ರೀಂ ಕೋರ್ಟ್ ನಲ್ಲಿ ಕೇಸು ಹಾಕಲು ಸಜ್ಜಾಗಿರುವ ಪಕ್ಷಗಳು ಅಜಿತ್ ಪವಾರ್ ವಿರುದ್ಧ ಕೈಬಿಟ್ಟಿರುವ ಎಸಿಬಿ ಆದೇಶಕ್ಕೆ ತಡೆಯೊಡ್ಡಬೇಕೆಂದು ಮತ್ತು ಸದನದಲ್ಲಿ ಬಹುಮತ ಸಾಬೀತು ಆಗುವವರೆಗೆ ದೇವೇಂದ್ರ ಫಡ್ನವಿಸ್ ಇಂತಹ ಯಾವುದೇ ನಿರ್ಧಾರ ತೆಗೆದುಕೊಳ್ಳದಂತೆ ತಡೆ ತರಬೇಕೆಂದು ಸಹ ಅರ್ಜಿಯಲ್ಲಿ ಒತ್ತಾಯಿಸಲಿವೆ.


ಇಂದು ಬೆಳಗ್ಗೆ ಮಹಾ ಸರ್ಕಾರದ ತೀರ್ಪನ್ನು ಸುಪ್ರೀಂ ಕೋರ್ಟ್ ಪ್ರಕಟಿಸಿದ ನಂತರ ಶಿವಸೇನೆ-ಎನ್ ಸಿಪಿ-ಕಾಂಗ್ರೆಸ್ ಈ ಅರ್ಜಿಯನ್ನು ಸುಪ್ರೀಂ ಕೋರ್ಟ್ ಗೆ ಸಲ್ಲಿಸಲು ನಿರ್ಧರಿಸಿವೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com