ಮಹಾರಾಷ್ಟ್ರದ ಹಂಗಾಮಿ ಸ್ಪೀಕರ್ ಯಾರಾಗ್ತಾರೆ?

ನಾಳೆ ಸಂಜೆಯೊಳಗೆ ವಿಶ್ವಾಸಮತ ಸಾಬೀತುಪಡಿಸುವಂತೆ ಸುಪ್ರೀಂಕೋರ್ಟ್ ಆದೇಶ ನೀಡಿರುವ ಹಿನ್ನೆಲೆಯಲ್ಲಿ ಮಹಾರಾಷ್ಟ್ರ ವಿಧಾನಸಭೆಯ ಹಂಗಾಮಿ ಸ್ಪೀಕರ್ ಯಾರು ಆಗುತ್ತಾರೆ ಎಂಬುದು ಇದೀಗ ಪ್ರಮುಖ ಪ್ರಶ್ನೆಯಾಗಿದೆ.
ಎನ್ ಸಿಪಿಯ ಜಯಂತ್ ಪಾಟೀಲ್
ಎನ್ ಸಿಪಿಯ ಜಯಂತ್ ಪಾಟೀಲ್

ಮುಂಬೈ: ನಾಳೆ ಸಂಜೆಯೊಳಗೆ ವಿಶ್ವಾಸಮತ ಸಾಬೀತುಪಡಿಸುವಂತೆ ಸುಪ್ರೀಂಕೋರ್ಟ್ ಆದೇಶ ನೀಡಿರುವ ಹಿನ್ನೆಲೆಯಲ್ಲಿ ಮಹಾರಾಷ್ಟ್ರ ವಿಧಾನಸಭೆಯ ಹಂಗಾಮಿ ಸ್ಪೀಕರ್ ಯಾರು ಆಗುತ್ತಾರೆ ಎಂಬುದು ಇದೀಗ ಪ್ರಮುಖ ಪ್ರಶ್ನೆಯಾಗಿದೆ.

ರಾಜ್ಯಪಾಲ ಬಿ.ಎಸ್. ಕೊಶ್ಯಾರಿ  ಹಂಗಾಮಿ ಸ್ಪೀಕರ್ ಆಯ್ಕೆ ಮಾಡಬೇಕಾಗಿದೆ. ನಂತರ ಹಂಗಾಮಿ ಸ್ಪೀಕರ್ 14 ವಿಧಾನಸಭೆಯ ಎಲ್ಲಾ ನೂತನ ಶಾಸಕರುಗಳಿಗೆ ಪ್ರಮಾಣ ವಚನವನ್ನು ಬೋಧಿಸಲಿದ್ದಾರೆ. 

288 ಸದಸ್ಯ ಬಲದ ಮಹಾರಾಷ್ಟ್ರ ವಿಧಾನಸಭೆಯಲ್ಲಿ ಬಿಜೆಪಿ  ಹಾಗೂ ಶಿವಸೇನೆ, ಎನ್ ಸಿಪಿ ಮತ್ತು ಕಾಂಗ್ರೆಸ್ ಪಕ್ಷಗಳು ತಮ್ಮಗೆ ಕ್ರಮವಾಗಿ 173 ಹಾಗೂ 162 ಶಾಸಕರ ಬೆಂಬಲವಿರುವುದಾಗಿ ಹೇಳುತ್ತಿದ್ದು, ಯಾವ ಪಕ್ಷದವರು ಹಂಗಾಮಿ ಸ್ಪೀಕರ್ ಆಗಲಿದ್ದಾರೆ ಎಂಬುದೇ ಪ್ರಮುಖ ಪ್ರಮುಖ ಪ್ರಶ್ನೆಯಾಗಿದೆ. 

ಪ್ರಸ್ತುತ ವಿಧಾನಸಭೆಯಲ್ಲಿ ರಾಜ್ಯ ಕಾಂಗ್ರೆಸ್ ಅಧ್ಯಕ್ಷ ಬಾಳಾ ಸಾಹೇಬ್  ಥೊರಟ್  8 ಬಾರಿ ಗೆಲುವು ಸಾಧಿಸಿದ್ದು, ಅತ್ಯಂತ ಹಿರಿಯ ಶಾಸಕರಾಗಿದ್ದಾರೆ.  ಎನ್ ಸಿಪಿಯ ನಾಯಕ ಅಜಿತ್ ಪವಾರ್, ಜಯಂತ್ ಪಾಟೀಲ್, ದಿಲೀಪ್ ವಾಲ್ಸೆ- ಪಾಟೀಲ್, ಬಿಜೆಪಿಯ ಬಾಬನ್ರಾವ್ ಪಚ್ಪ್ಯೂಟ್, ಕಾಳಿದಾಸ್ ಕೋಲಾಂಬ್ಕರ್ ಮತ್ತು ಕಾಂಗ್ರೆಸ್ ಪಕ್ಷದ ಕೆ. ಸಿ. ಪಡ್ವಿ ಹೆಸರು  ಮುಂಚೂಣಿಯಲ್ಲಿದೆ.  ಇವರೆಲ್ಲರೂ ಏಳು ಬಾರಿ ಗೆದ್ದಿದ್ದಾರೆ.  ಇವರಲ್ಲದೆ ಆರು ಬಾರಿ ಗೆಲುವು ಸಾಧಿಸಿರುವ ಬಿಜೆಪಿಯ ರಾಧಾಕೃಷ್ಣ, ವಿಖೇ- ಪಾಟೀಲ್, ಹರಿಬಾವು ಬಾಗಡೆ ಮತ್ತು ಎನ್ ಸಿಪಿಯ ಚಾಗನ್ ಭುಜ್ಬಾಲ್ ಅವರ ಹೆಸರು ಕೂಡಾ ಕೇಳಿಬರುತ್ತಿದೆ. 

ವಾಲ್ಸೆ ಪಾಟೀಲ್ ಹಾಗೂ ಬಾಗಡೆ 12 ಹಾಗೂ 13ನೇ ವಿಧಾನಸಭೆಯ ಸ್ಪೀಕರ್ ಆಗಿ ಕಾರ್ಯನಿರ್ವಹಿಸಿದ್ದಾರೆ. ಈ ಮಧ್ಯೆ ಈ ಬಾರಿ ಅಜಿತ್ ಪವಾರ್ ಎನ್ ಸಿಪಿಯ ಮುಖಂಡರಾಗಿದ್ದಾರೆ.  ಹಂಗಾಮಿ ಸ್ಪೀಕರ್ ಸ್ಥಾನಕ್ಕಾಗಿ ಕೆಲವು ಅರ್ಹ ಹಿರಿಯ ಶಾಸಕರ ಪಟ್ಟಿಯನ್ನು ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ರಾಜ್ಯಪಾಲರಿಗೆ ಸಲ್ಲಿಸಿದ್ದಾರೆ. 


ದೇಶ ಮುಖ್ ಆರೋಗ್ಯ ಹದಗೆಟ್ಟಿದ್ದು, ಚುನಾವಣೆಗೆ ಸ್ಪರ್ಧಿಸುತ್ತಿಲ್ಲ. ಗಾವಿಟ್ ಚುನಾವಣೆಯಲ್ಲಿ ಸೋತಿದ್ದಾರೆ. ಹೀಗಾಗಿ ಉಳಿದಿರುವ ಹಿರಿಯ ಶಾಸಕರೆಂದರೆ ಅವರು ಬಾಳಾ ಸಾಹೇಬ್ ಥೊರಟ್. ಅವರೇ ಹಂಗಾಮಿ ಸ್ಪೀಕರ್ ಆಗುವ ಸಾಧ್ಯತೆ ಹೆಚ್ಚಾಗಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com