ನಾನು ಎನ್ ಸಿಪಿಯಲ್ಲಿಯೇ ಇದ್ದೆ, ಮುಂದೆಯೂ ಇರುತ್ತೇನೆ, ಇದರಲ್ಲಿ ಯಾವುದೇ ಗೊಂದಲವಿಲ್ಲ: ಅಜಿತ್ ಪವಾರ್ 

ಕಳೆದ ವಾರ ಬಿಜೆಪಿಗೆ ಬೆಂಬಲ ನೀಡಿ ಉಪ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿ ನಂತರ ರಾಜೀನಾಮೆ ನೀಡಿದ ಎನ್ ಸಿಪಿ ನಾಯಕ ಅಜಿತ್ ಪವಾರ್ ಬುಧವಾರ ವಿಧಾನಸಭೆಗೆ ಆಗಮಿಸುತ್ತಿದ್ದಂತೆ ತಮ್ಮ ವರಸೆ ಬದಲಿಸಿದ್ದಾರೆ.

Published: 27th November 2019 11:23 AM  |   Last Updated: 27th November 2019 11:23 AM   |  A+A-


Supriya Sule-Ajit Pawar

ಸುಪ್ರಿಯಾ ಸುಳೆ-ಅಜಿತ್ ಪವಾರ್

Posted By : Sumana Upadhyaya
Source : ANI

ಮುಂಬೈ: ಕಳೆದ ವಾರ ಬಿಜೆಪಿಗೆ ಬೆಂಬಲ ನೀಡಿ ಉಪ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿ ನಂತರ ರಾಜೀನಾಮೆ ನೀಡಿದ ಎನ್ ಸಿಪಿ ನಾಯಕ ಅಜಿತ್ ಪವಾರ್ ಬುಧವಾರ ವಿಧಾನಸಭೆಗೆ ಆಗಮಿಸುತ್ತಿದ್ದಂತೆ ತಮ್ಮ ವರಸೆ ಬದಲಿಸಿದ್ದಾರೆ.


ನಾನು ಎಂದೆಂದಿಗೂ ಪಕ್ಷದಲ್ಲಿಯೇ ಇದ್ದು ಇಲ್ಲಿಗೆ ಬದ್ಧನಾಗಿರುತ್ತೇನೆ, ಇಲ್ಲಿ ಯಾವುದೇ ಗೊಂದಲಗಳಿಲ್ಲ ಎಂದಿದ್ದಾರೆ. 
ಮಾಧ್ಯಮಗಳಿಗೆ ಇಂದು ಬೆಳಗ್ಗೆ ಪ್ರತಿಕ್ರಿಯೆ ನೀಡಿದ ಅವರು, ನಾನು ಈಗ ಏನೂ ಹೇಳುವುದಿಲ್ಲ, ಸರಿಯಾದ ಸಮಯಕ್ಕೆ ಮಾತನಾಡುತ್ತೇನೆ, ಈ ಹಿಂದೆ ಕೂಡ ನಾನು ಹೇಳಿದ್ದೆ, ನಾನು ಎನ್ ಸಿಪಿಯಲ್ಲಿದ್ದೇನೆ, ಮುಂದೆಯೂ ಎನ್ ಸಿಪಿಯಲ್ಲಿಯೇ ಇರುತ್ತೇನೆ, ಇಲ್ಲಿ ಯಾವುದೇ ರೀತಿಯ ಗೊಂದಲಗಳಿಲ್ಲ ಎಂದರು.


ನಿನ್ನೆ ಅಪರಾಹ್ನ ಉಪ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿ ಸಾಯಂಕಾಲ ಹೊತ್ತಿಗೆ ಮುಂಬೈಯ ಸಿಲ್ವರ್ ಓಕ್ ನಲ್ಲಿರುವ ಶರದ್ ಪವಾರ್ ನಿವಾಸಕ್ಕೆ ಭೇಟಿ ಕೊಟ್ಟಿದ್ದರು.

Stay up to date on all the latest ರಾಷ್ಟ್ರೀಯ news with The Kannadaprabha App. Download now
facebook twitter whatsapp