ಬಾಪೂಜಿಯ ಹಿಂಬಾಲಕರು ಯಾರು? ಬಿಜೆಪಿ-ಕಾಂಗ್ರೆಸ್ ಮಧ್ಯೆ ಶುರುವಾಗಿದೆ ಹೊಸ ಕದನ 

ಮಹಾತ್ಮಾ ಗಾಂಧೀಜಿಯವರ 150ನೇ ಜನ್ಮದಿನಾಚರಣೆ ಸಂದರ್ಭದಲ್ಲಿ ಅವರ ಪರಂಪರೆಯನ್ನು ಮುಂದುವರಿಸಿಕೊಂಡು ಹೋಗುತ್ತಿರುವ ಬಗ್ಗೆ ಕಾಂಗ್ರೆಸ್ ಮತ್ತು ಬಿಜೆಪಿಯಲ್ಲಿ ವಾಕ್ಸಮರ, ಜಗಳ ಆರಂಭವಾಗಿದೆ. 
ದೆಹಲಿಯ ರಾಜ್ ಘಾಟ್ ನಲ್ಲಿ ಗಾಂಧೀಜಿ ಸಮಾಧಿಗೆ ನಾಯಕರ ಪುಷ್ಪ ನಮನ
ದೆಹಲಿಯ ರಾಜ್ ಘಾಟ್ ನಲ್ಲಿ ಗಾಂಧೀಜಿ ಸಮಾಧಿಗೆ ನಾಯಕರ ಪುಷ್ಪ ನಮನ

ನವದೆಹಲಿ:ಮಹಾತ್ಮಾ ಗಾಂಧೀಜಿಯವರ 150ನೇ ಜನ್ಮದಿನಾಚರಣೆ ಸಂದರ್ಭದಲ್ಲಿ ಅವರ ಪರಂಪರೆಯನ್ನು ಮುಂದುವರಿಸಿಕೊಂಡು ಹೋಗುತ್ತಿರುವ ಬಗ್ಗೆ ಕಾಂಗ್ರೆಸ್ ಮತ್ತು ಬಿಜೆಪಿಯಲ್ಲಿ ವಾಕ್ಸಮರ, ಜಗಳ ಆರಂಭವಾಗಿದೆ.


ಪ್ರಸ್ತುತ ಭಾರತದಲ್ಲಿ ಗಾಂಧೀಜಿಯವರ ತತ್ವ, ಆದರ್ಶಗಳನ್ನು ಮುಂದುವರಿಸಿಕೊಂಡು ಹೋಗುತ್ತಿರುವವರು ಯಾರು, ಗಾಂಧೀಜಿಯವರ ನಿಜವಾದ ವಾರಸುದಾರರು ಯಾರು ಎಂಬ ಬಗ್ಗೆ ಆಡಳಿತಾರೂಢ ಬಿಜೆಪಿ ಮತ್ತು ವಿರೋಧ ಪಕ್ಷ ಕಾಂಗ್ರೆಸ್ ಜಗಳದಲ್ಲಿ ನಿರತವಾಗಿದೆ. ಕಾಂಗ್ರೆಸ್ ಗಾಂಧಿ ಜಯಂತಿಯನ್ನು ಪಾದಯಾತ್ರೆ, ಸಭೆಗಳು, ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ಕೈಗೊಂಡಿದೆ.


ಇತತ್ ಬಿಜೆಪಿ ಕಾರ್ಯಾಧ್ಯಕ್ಷ ಜೆ ಪಿ ನಡ್ಡಾ ಪಕ್ಷದ ನಾಯಕರಿಗೆ ಪತ್ರ ಬರೆದು, ಬಿಜೆಪಿಯು ಗಾಂಧೀಜಿಯವರ ತತ್ವ, ಆದರ್ಶಗಳನ್ನು ಪಾಲಿಸುವ ವಾರಸುದಾರನಾಗಿದೆ ಎಂದು ಸಮಾಜದಲ್ಲಿ ಬಿಂಬಿಸಲು ಪಕ್ಷದ ನಾಯಕರು ಶ್ರಮಿಸಬೇಕು. ಕೇಂದ್ರದ ಉಜ್ವಲ ಯೋಜನೆಯಂತಹ ಯೋಜನೆಗಳು ಅವರ ತತ್ವಗಳಿಗೆ ಹಿಡಿದ ಕೈಗನ್ನಡಿ ಎಂದಿದ್ದಾರೆ.


ಬಿಜೆಪಿ ಗಾಂಧೀಜಿಯವರ ಕನ್ನಡಕದ ಗುರುತನ್ನು ಸ್ವಚ್ಛ ಭಾರತ ಅಭಿಯಾನದ ಚಿಹ್ನೆಯಾಗಿ ಪ್ರಚಾರಕ್ಕೆ ಮಾತ್ರ ಬಳಸಿಕೊಂಡಿದೆ, ಆದರೆ ಅವರ ತತ್ವ, ಆದರ್ಶಗಳನ್ನು ಪಾಲಿಸುವಲ್ಲಿ ವಿಫಲವಾಗಿದೆ ಎಂದು ಹೇಳಿದೆ.ಗಾಂಧೀಜಿಯವರ ಬೋಧನೆಗಳು ಮತ್ತು ಅವರ ಆದರ್ಶಗಳಿಗೆ ವಿರುದ್ಧವಾಗಿ ಬಿಜೆಪಿ ಮತ್ತು ಕೇಂದ್ರ ಸರ್ಕಾರ ಮಾಡುತ್ತಿದೆ. 


ಪ್ರಧಾನಿ ನರೇಂದ್ರ ಮೋದಿಯವರು ಗಾಂಧೀಜಿ ಬಗ್ಗೆ ಹಲವು ಕಡೆ ಪ್ರಸ್ತಾಪಿಸುತ್ತಾರೆ. ಕಳೆದ ವಾರ ಅಮೆರಿಕಾದಲ್ಲಿ ಸಹ  ಮಾತನಾಡಿದ್ದರು. ಇತ್ತೀಚೆಗೆ ಭೋಪಾಲ್ ನಲ್ಲಿ ಬಿಜೆಪಿ ಸಂಸದೆ ಪ್ರಗ್ಯಾ ಸಿಂಗ್ ಠಾಕೂರ್ ನಾಥೂರಾಮ್ ಗೋಡ್ಸೆಯನ್ನು ದೇಶಭಕ್ತ ಎಂದು ಹೊಗಳಿದಾಗ ಪಕ್ಷ ತೀವ್ರ ಮುಜುಗರಕ್ಕೆ ಈಡಾಗಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com