ಚೆನ್ನೈಗೆ ಮೋದಿ- ಜಿನ್ ಪಿಂಗ್ ಭೇಟಿ: ಗಣ್ಯರ ಸ್ವಾಗತಕ್ಕೆ ಬ್ಯಾನರ್ ಅಳವಡಿಸಲು ಮದ್ರಾಸ್​​ ಹೈಕೋರ್ಟ್​ ಅನುಮತಿ

ಪ್ರಧಾನಿ ನರೇಂದ್ರ ಮೋದಿ ಹಾಗೂ ಚೀನಾ ಅಧ್ಯಕ್ಷ ಕ್ಸಿ ಚಿನ್ ಪಿಂಗ್ ಅವರು ಸದ್ಯದಲ್ಲೇ ಚೆನ್ನೈಗೆ ಭೇಟಿ ನೀಡುತ್ತಿದ್ದು, ತಮಿಳುನಾಡು ಸರ್ಕಾರ ಉಭಯ ನಾಯಕರ ಸ್ವಾಗತಕ್ಕೆ ಬ್ಯಾನರ್ ಆಳವಡಿಸಲು ಮದ್ರಾಸ್ ಹೈಕೋರ್ಟ್ ಗುರುವಾರ ಅನುಮತಿ ನೀಡಿದೆ.
ಮೋದಿ - ಕ್ಸಿ ಜಿನ್ ಪಿಂಗ್
ಮೋದಿ - ಕ್ಸಿ ಜಿನ್ ಪಿಂಗ್

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಹಾಗೂ ಚೀನಾ ಅಧ್ಯಕ್ಷ ಕ್ಸಿ ಚಿನ್ ಪಿಂಗ್ ಅವರು ಸದ್ಯದಲ್ಲೇ ಚೆನ್ನೈಗೆ ಭೇಟಿ ನೀಡುತ್ತಿದ್ದು, ತಮಿಳುನಾಡು ಸರ್ಕಾರ ಉಭಯ ನಾಯಕರ ಸ್ವಾಗತಕ್ಕೆ ಬ್ಯಾನರ್ ಆಳವಡಿಸಲು ಮದ್ರಾಸ್ ಹೈಕೋರ್ಟ್ ಗುರುವಾರ ಅನುಮತಿ ನೀಡಿದೆ.

ಬ್ಯಾನರ್ ಅಳವಡಿಕೆಗೆ ಅನುಮತಿ ಕೋರಿ ತಮಿಳುನಾಡು ಸರ್ಕಾರ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ಕೋರ್ಟ್, ಚೆನ್ನೈ ಏರ್ಪೋರ್ಟ್​​​ನಿಂದ ಮಾಮಲ್ಲಪುರಂವರೆಗೂ 41 ಫ್ಲೆಕ್ಸ್ ಹಾಗೂ ಹೋಲ್ಡಿಂಗ್ಸ್​ ಹಾಕಲು ಅನುಮತಿ ನೀಡಿದೆ. 

ಮೋದಿ ಹಾಗೂ ಜಿನ್ ಪಿಂಗ್ ನಡುವೆ ಅಕ್ಟೋಬರ್​​​ 11 ಮತ್ತು 12ರಂದು ಮಹತ್ವದ ಮಾತುಕತೆ ನಡೆಯಲಿದೆ. ಈ ಮಾತುಕತೆಯೂ ಜಾಗತಿಕ ಪ್ರವಾಸಿ ತಾಣ ಮಾಮಲ್ಲಪುರಂದಲ್ಲಿ ನಡೆಯಲಿದ್ದು, ಗಣ್ಯರನ್ನು ಸ್ವಾಗತಿಸಲು ಈ ಪ್ರದೇಶದ 60 ಕಿಲೋ ಮೀಟರ್​​ ಸುತ್ತಮುತ್ತ ಮಾತ್ರ ಬ್ಯಾನರ್​​​ ಕಟ್ಟಲು ಮದ್ರಾಸ್​​ ಹೈಕೋರ್ಟ್​​ ಅನುಮತಿ ನೀಡಿದೆ.

ಭಾರತ ಪ್ರಧಾನಿ ನರೇಂದ್ರ ಮೋದಿ ಮತ್ತು ಚೀನಾದ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ದ್ವಿಪಕ್ಷೀಯ ಮಾತುಕತೆಗಾಗಿ ಚೆನ್ನೈ ಏರ್ಪೋರ್ಟ್​ಗೆ ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ತಮಿಳುನಾಡು ಸರ್ಕಾರ ಬ್ಯಾನರ್​​ ಕಟ್ಟಲು ಮುಂದಾಗಿತ್ತು. ಆಡಳಿತರೂಢ ಎಐಎಡಿಎಂಕೆ ಕಾನೂನು ಗಾಳಿಗೆ ತೂರಿ ಬ್ಯಾನರ್​​​ ಮತ್ತು ಹೋಲ್ಡಿಂಗ್ಸ್​​ ಕಟ್ಟಲು ಮುಂದಾಗಿದೆ ಎಂದು ಆರೋಪಿಸಿ ಸ್ಟಾಲಿನ್​​​ ನೇತೃತ್ವದ ಡಿಎಂಕೆ ಮದ್ರಾಸ್​​ ಹೈಕೋರ್ಟ್​ ಮೆಟ್ಟಿಲೇರಿತ್ತು.

ಕಳೆದ ತಿಂಗಳು ಕಾಲೇಜಿನಿಂದ ಮನೆಗೆ ಸ್ಕೂಟರ್​​ನಲ್ಲಿ ಹೊರಟಿದ್ದ ಯುವತಿ ಶುಭಶ್ರೀ ಮೇಲೆ ರಸ್ತೆಯ ನಡುವೆ ಕಟ್ಟಿದ್ದ ರಾಜಕೀಯ ಬ್ಯಾನರ್ ಒಂದು ಹರಿದು ಬಿದ್ದಿತ್ತು. ಇದರಿಂದ ಸ್ಕೂಟರ್ ನಿಯಂತ್ರಣ ತಪ್ಪಿ ಶುಭಶ್ರೀ ರಸ್ತೆಯ ಮೇಲೆ ಬಿದ್ದಳು. ಈ ವೇಳೆ ಹಿಂದಿನಿಂದ ಬಂದ ಟ್ಯಾಂಕರ್ ಲಾರಿ ಆಕೆಯ ಮೇಲೆ ಹರಿದ ಪರಿಣಾಮ ಶುಭಶ್ರೀ ಸ್ಥಳದಲ್ಲೇ ಮೃತಪಟ್ಟಿದ್ದಳು. ನಂತರ ಬ್ಯಾನರ್ ತೆರವುಗೊಳಿಸಲು ಕಟ್ಟುನಿಟ್ಟಿನ ಕ್ರಮ ತೆಗೆದುಕೊಳ್ಳುವಂತೆ ಕೋರ್ಟ್ ತಮಿಳುನಾಡು ಸರ್ಕಾರಕ್ಕೆ ಸೂಚಿಸಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com