ಮೆಟ್ರೋಗಾಗಿ ಮರಗಳ ಮಾರಣಹೋಮ: ಆರೆ ಕಾಲೋನಿ ಮರ ಕಡಿಯುವಿಕೆಗೆ ತಡೆ ನೀಡಲು ಬಾಂಬೆ ಹೈಕೋರ್ಟ್ ನಕಾರ

ಮುಂಬೈನ ಪ್ರಮುಖ ಹಸಿರು ಪ್ರದೇಶವಾಗಿರುವ ಆರೆ ಕಾಲೋನಿಯಲ್ಲಿ ಮೆಟ್ರೋ ಕಾರ್ ಶೆಡ್ ಗಾಗಿ ಮರಗಳನ್ನು ಕಡಿಯುವುದಕ್ಕೆ ತಡೆ ನೀಡಲು ಬಾಂಬೆ ಹೈಕೋರ್ಟ್ ಶನಿವಾರ ನಿರಾಕರಿಸಿದೆ.

Published: 05th October 2019 05:56 PM  |   Last Updated: 05th October 2019 05:56 PM   |  A+A-


ಬಾಂಬೆ ಹೈಕೋರ್ಟ್

Posted By : Raghavendra Adiga
Source : The New Indian Express

ಮುಂಬೈ: ಮುಂಬೈನ ಪ್ರಮುಖ ಹಸಿರು ಪ್ರದೇಶವಾಗಿರುವ ಆರೆ ಕಾಲೋನಿಯಲ್ಲಿ ಮೆಟ್ರೋ ಕಾರ್ ಶೆಡ್ ಗಾಗಿ ಮರಗಳನ್ನು ಕಡಿಯುವುದಕ್ಕೆ ತಡೆ ನೀಡಲು ಬಾಂಬೆ ಹೈಕೋರ್ಟ್ ಶನಿವಾರ ನಿರಾಕರಿಸಿದೆ.

ಮುಂಬೈನ ಟ್ರೀ ಅಥಾರಿಟಿಯ ನಿರ್ಧಾರವನ್ನು ಪ್ರಶ್ನಿಸಿ ಎನ್ಜಿಒಗಳು ಮತ್ತು ಕಾರ್ಯಕರ್ತರು ಸಲ್ಲಿಸಿದ ನಾಲ್ಕು ಅರ್ಜಿಗಳನ್ನು ಹೈಕೋರ್ಟ್ ವಜಾಗೊಳಿಸಿದ ಒಂದು ದಿನದ ನಂತರ, ಕೆಲವು ಹಸಿರು ಕಾರ್ಯಕರ್ತರು ಈ ಪ್ರದೇಶದಲ್ಲಿ 2656 ಮರಗಳನ್ನು ಕಡಿಯುವ ಮುಂಬೈ ಮೆಟ್ರೋ ರೈಲು  ಕಾರ್ಪೊರೇಶನ್ ಲಿಮಿಟೆಡ್  ಕ್ರಮವನ್ನು ತಡೆಯಲು ಕೋರಿ ಹೊಸ ಅರ್ಜಿಯನ್ನು ಸಲ್ಲಿಸಿದ್ದರು. ಮುಂಬೈ ನಗರಾಡಳಿತವು ಮರ ಕಡಿಯಲು ಅನುಮತಿ ನೀಡಿತ್ತು.

ಶುಕ್ರವಾರ ತಡರಾತ್ರಿ ಮರಗಳನ್ನು ಕಡಿಯಲು ಪ್ರಾರಂಭಿಸಿದ ಎಂಎಂಆರ್‌ಸಿಎಲ್‌ನ ಕ್ರಮಕ್ಕೆ ಆರೆ ಕಾಲೋನಿಯಲ್ಲಿ ಹಸಿರು ಕಾರ್ಯಕರ್ತರ ತೀವ್ರ ಪ್ರತಿರೋಧವನ್ನು ಒಡ್ಡಿದ್ದಾರೆ.

ಕಾರ್ಯಕರ್ತರು, ತಮ್ಮ ಅರ್ಜಿಯಲ್ಲಿ, ಎಂಎಂಆರ್ಸಿಎಲ್ ಕ್ರಮವನ್ನು ಒಂದು ವಾರ ತಡೆಹಿಡಿಯಲು ಕೋರಿದ್ದು ಇದರಿಂದ ಅವರು ಹೈಕೋರ್ಟ್ ಆದೇಶದ ವಿರುದ್ಧ ಸುರ್ಪೀಂ ಮೆಟ್ಟಿಲೇರಬಹುದಾಗಿದೆ.

ಶನಿವಾರ ಇವರ ಅರ್ಜಿಯನ್ನು ನ್ಯಾಯಮೂರ್ತಿಗಳಾದ ಎಸ್ ಸಿ ಧರ್ಮಾಧಿಕಾರಿ ಮತ್ತು ಎ ಕೆ ಮೆನನ್ ಅವರು ತುರ್ತು ವಿಚಾರಣೆಗೆ ತೆಗೆದುಕೊಂಡರು.ಸಂಕ್ಷಿಪ್ತ ವಾದಗಳ ನಂತರ, ನ್ಯಾಯಪೀಠವು ತಡೆಯಾಜ್ಞೆ ನೀಡಲು ನಿರಾಕರಿಸಿ ರ ಅರ್ಜಿಯನ್ನು ವಿಲೇವಾರಿ ಮಾಡಿತು. 

Stay up to date on all the latest ರಾಷ್ಟ್ರೀಯ news with The Kannadaprabha App. Download now
Poll
school

ಶಾಲೆಗಳನ್ನು ತೆರೆಯಲು ಸರ್ಕಾರ ಅನುಮತಿಸಿದರೆ ನಿಮ್ಮ ಮಕ್ಕಳನ್ನು ಶಾಲೆಗೆ ಕಳುಹಿಸಲು ನೀವು ಸಿದ್ಧರಿದ್ದೀರಾ?


Result
ಹೌದು
ಇಲ್ಲ
ಇನ್ನೂ ನಿರ್ಧರಿಸಿಲ್ಲ
facebook twitter whatsapp