ಬಾಂಗ್ಲಾ ಪ್ರಧಾನಿಗೂ ತಟ್ಟಿದ ಈರುಳ್ಳಿ ಬೆಲೆ ಬಿಸಿ, ಅಡುಗೆಯವರಿಗೆ ಈರುಳ್ಳಿ ಹಾಕಬೇಡಿ ಎಂದರಂತೆ ಶೇಖ್ ಹಸೀನಾ!

ಸತತ ಮಳೆಯಿಂದಾಗಿ ಈರುಳ್ಳಿ ಬೆಲೆ ನಾಶವಾಗಿ ಉತ್ಪಾದನೆಯಲ್ಲಿ ಕುಂಠಿತವಾಗಿರುವುದರಿಂದ ಭಾರತ ಕಳೆದ ತಿಂಗಳು ಈರುಳ್ಳಿ ರಫ್ತು ಮಾಡುವುದಕ್ಕೆ ನಿಷೇಧ ಹೇರಿತ್ತು. ಇದರಿಂದ ಸಹಜವಾಗಿ ಭಾರತ ದೇಶದ ಈರುಳ್ಳಿಯನ್ನು ನಂಬಿಕೊಂಡಿರುವ ಹೊರದೇಶಗಳಿಗೆ ಇದರ ಬಿಸಿ ತಟ್ಟಿದೆ.  
ಬಾಂಗ್ಲಾದೇಶ ಪ್ರಧಾನಿ ಶೇಖ್ ಹಸೀನಾ
ಬಾಂಗ್ಲಾದೇಶ ಪ್ರಧಾನಿ ಶೇಖ್ ಹಸೀನಾ

ನವದೆಹಲಿ: ದೇಶದಲ್ಲಿ ಈರುಳ್ಳಿ ಹೆಚ್ಚು ಬೆಳೆಯುವ ರಾಜ್ಯಗಳಲ್ಲಿ ಸತತ ಮಳೆಯಿಂದಾಗಿ ಬೆಳೆ ನಾಶವಾಗಿ ಉತ್ಪಾದನೆಯಲ್ಲಿ ಕುಂಠಿತವಾಗಿರುವುದರಿಂದ ಭಾರತ ಕಳೆದ ತಿಂಗಳು ಈರುಳ್ಳಿ ರಫ್ತು ಮಾಡುವುದಕ್ಕೆ ನಿಷೇಧ ಹೇರಿತ್ತು. ಇದರಿಂದ ಸಹಜವಾಗಿ ಭಾರತ ದೇಶದ ಈರುಳ್ಳಿಯನ್ನು ನಂಬಿಕೊಂಡಿರುವ ಹೊರದೇಶಗಳಿಗೆ ಇದರ ಬಿಸಿ ತಟ್ಟಿದೆ. 


ಇದಕ್ಕೆ ಬಾಂಗ್ಲಾದೇಶ ಪ್ರಧಾನಿ ಶೇಖ್ ಹಸೀನಾ ನಿನ್ನೆ ದೆಹಲಿಯಲ್ಲಿ ತಮಾಷೆಯಾಗಿ ಮಾತನಾಡಿ ತಮಗೆ ಸಹ ಈರುಳ್ಳಿ ಕೊರತೆಯ ಬಿಸಿ ತಟ್ಟಿದೆ ಎಂದು ತೋರಿಸಿಕೊಟ್ಟಿದ್ದಾರೆ. ದೆಹಲಿಯಲ್ಲಿ ನಿನ್ನೆ ಭಾರತ-ಬಾಂಗ್ಲಾದೇಶ ಉದ್ಯಮ ವೇದಿಕೆ ಸಭೆಯಲ್ಲಿ ಮಾತನಾಡುತ್ತಿದ್ದ ವೇಳೆ ಶೇಖ್ ಹಸೀನಾ, ಈರುಳ್ಳಿ ರಫ್ತಿಗೆ ನಿಷೇಧ ಹೇರಿದ ಬಗ್ಗೆ ನಮಗೆ ಮೊದಲೇ ತಿಳಿಸಲಿಲ್ಲ ಏಕೆ ಎಂದು ಅಧಿಕಾರಿಗಳನ್ನು ಪ್ರಶ್ನಿಸಿದರು.


ನಮ್ಮ ದೇಶದಲ್ಲಿ ನಮಗೆ ಈರುಳ್ಳಿ ಸಿಗುವುದು ಕಷ್ಟವಾಗಿದೆ. ನೀವ್ಯಾಕೆ ಪೂರೈಕೆ ಮಾಡುವುದು ನಿಲ್ಲಿಸಿದ್ದೀರಿ, ನಾನು ನಮ್ಮನೆಯ ಅಡುಗೆಯವರಿಗೆ ಈರುಳ್ಳಿ ಹಾಕದೆ ಅಡುಗೆ ಮಾಡಿ ಎಂದು ಹೇಳಿದ್ದೇನೆ ಎಂದಾಗ ಅಲ್ಲಿ ನೆರೆದಿದ್ದವರು ನಗೆಗಡಲಲ್ಲಿ ತೇಲಿದರು. 

ಭಾರತ ಸರ್ಕಾರ ಮೊದಲೇ ಮುನ್ಸೂಚನೆ ನೀಡಿ ಈರುಳ್ಳಿ ರಫ್ತನ್ನು ನಿಲ್ಲಿಸಬೇಕಾಗಿತ್ತು. ಹಠಾತ್ತಾಗಿ ನಿಲ್ಲಿಸಿದ್ದರಿಂದ ಕಷ್ಟವಾಗಿದೆ. ಮುಂದಿನ ಸಾರಿ ಹೀಗೆ ಮಾಡುವಾಗ ಮೊದಲೇ ಸೂಚನೆ ನೀಡಿ ಮಾಡಿ ಎಂದರು ಶೇಖ್ ಹಸೀನಾ. 

ಕಳೆದ ತಿಂಗಳು ಸೆಪ್ಟೆಂಬರ್ 29ರಂದು ಕೇಂದ್ರ ಸರ್ಕಾರ ತಕ್ಷಣದಿಂದಲೇ ಜಾರಿಗೆ ಬರುವಂತೆ ಈರುಳ್ಳಿ ರಫ್ತಿಗೆ ನಿಷೇಧ ಹೇರಿತ್ತು. 1 ಕ್ವಿಂಟಾಲ್ ಈರುಳ್ಳಿಗೆ 4 ಸಾವಿರದ 500 ರೂಪಾಯಿಗೆ ಏರಿಕೆಯಾದ ಹಿನ್ನಲೆಯಲ್ಲಿ ಕೇಂದ್ರ ಸರ್ಕಾರ ಈ ಕ್ರಮ ಕೈಗೊಂಡಿದೆ.

 
ಭಾರತದಿಂದ ಈರುಳ್ಳಿ ರಫ್ತು ನಿಲ್ಲಿಸಿರುವುದರಿಂದ ಬಾಂಗ್ಲಾದೇಶದಲ್ಲಿ ತೀವ್ರ ತೊಂದರೆಯಾಗಿದ್ದು ರಾಜಧಾನಿ ಢಾಕಾದಲ್ಲಿ 1 ಕ್ವಿಂಟಾಲ್ ಈರುಳ್ಳಿಗೆ 10 ಸಾವಿರ ರೂಪಾಯಿ ಗಡಿ ದಾಟಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com