ಕಾಶ್ಮೀರದಲ್ಲಿ 200-300 ಭಯೋತ್ಪಾದಕರು ಸಕ್ರಿಯ,ಮತ್ತಷ್ಟು ಉಗ್ರರನ್ನು ಒಳಕಳಿಸಲು ಪಾಕ್ ಯತ್ನ 

ಜಮ್ಮು-ಕಾಶ್ಮೀರದಲ್ಲಿ ಭಯೋತ್ಪಾದಕರ ಸಂಖ್ಯೆ ಹೆಚ್ಚಾಗಿದ್ದು, 200-300 ಜನ ಭಯೋತ್ಪಾದಕರು ರಾಜ್ಯದಲ್ಲಿ ಸಕ್ರಿಯರಾಗಿದ್ದಾರೆ ಎಂದು ಜಮ್ಮು-ಕಾಶ್ಮೀರ ಪೊಲೀಸ್ ಮುಖ್ಯಸ್ಥ ದಿಲ್ಬಾಘ್ ಸಿಂಗ್ ಹೇಳಿದ್ದಾರೆ. 
ಕಾಶ್ಮೀರದಲ್ಲಿ 200-300 ಭಯೋತ್ಪಾದಕರು ಸಕ್ರಿಯ,ಮತ್ತಷ್ಟು ಉಗ್ರರನ್ನು ಒಳಕಳಿಸಲು ಪಾಕ್ ಯತ್ನ
ಕಾಶ್ಮೀರದಲ್ಲಿ 200-300 ಭಯೋತ್ಪಾದಕರು ಸಕ್ರಿಯ,ಮತ್ತಷ್ಟು ಉಗ್ರರನ್ನು ಒಳಕಳಿಸಲು ಪಾಕ್ ಯತ್ನ

ಜಮ್ಮು: ಜಮ್ಮು-ಕಾಶ್ಮೀರದಲ್ಲಿ ಭಯೋತ್ಪಾದಕರ ಸಂಖ್ಯೆ ಹೆಚ್ಚಾಗಿದ್ದು, 200-300 ಜನ ಭಯೋತ್ಪಾದಕರು ರಾಜ್ಯದಲ್ಲಿ ಸಕ್ರಿಯರಾಗಿದ್ದಾರೆ ಎಂದು ಜಮ್ಮು-ಕಾಶ್ಮೀರ ಪೊಲೀಸ್ ಮುಖ್ಯಸ್ಥ ದಿಲ್ಬಾಘ್ ಸಿಂಗ್ ಹೇಳಿದ್ದಾರೆ. 

ಚಳಿಗಾಲದ ವೇಳೆಗೆ ಆದಷ್ಟೂ ಹೆಚ್ಚು ಭಯೋತ್ಪಾದಕರನ್ನು ಭಾರತದೊಳಗೆ ನುಗ್ಗಿಸಲು ಪಾಕಿಸ್ತಾನ ಗಡಿಯಾಚೆಗಿನ ಗುಂಡಿನ ದಾಳಿಯನ್ನು ನಿರಂತರವಾಗಿ ನಡೆಸುತ್ತಿದೆ.  ಭಾರತೀಯ ಸೇನೆಯಿಂದ ಪ್ರತಿದಾಳಿ ನಡೆದ ಹೊರತಾಗಿಯೂ ಅತಿ ಹೆಚ್ಚಿನ ಸಂಖ್ಯೆಯಲ್ಲಿ ಭಯೋತ್ಪಾದಕರು ಒಳನುಸುಳಿದ್ದಾರೆ. 

200-300 ಭಯೋತ್ಪಾದಕರು ಜಮ್ಮು-ಕಾಶ್ಮೀರದಲ್ಲಿ ಸಕ್ರಿಯರಾಗಿದ್ದಾರೆ. ಇದೇ ಸಂಖ್ಯೆ ಅಂತಿಮವಲ್ಲ ಎಂದು ದಿಲ್ಬಾಘ್ ಸಿಂಗ್ ಮಾಹಿತಿ ನೀಡಿದ್ದಾರೆ. ಭಯೋತ್ಪಾದಕರನ್ನು ಆದಷ್ಟೂ ಒಳಗೆ ಕಳಿಸಲು ಪಾಕಿಸ್ತಾನ ಕದನ ವಿರಾಮ ಉಲ್ಲಂಘನೆಯನ್ನು ತೀವ್ರಗೊಳಿಸಿದೆ ಎಂದು ಡಿಜಿಪಿ ಹೇಳಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com