ವಿವಿಗಳು ಯಾವಾಗ ಆಲೋಚನೆ-ಅಭಿವ್ಯಕ್ತಿ ಸ್ವಾತಂತ್ರ್ಯಪಡೆಯುತ್ತವೆ: ಪ್ರಧಾನಿಯ ಐನ್‌ಸ್ಟೈನ್ ಸವಾಲಿಗೆ ಚಿದಂಬರಂ ಪ್ರಶ್ನೆ 

ವಿದ್ಯಾರ್ಥಿಗಳಿಗೆ ಐನ್ ಸ್ಟೈನ್ ಸಿದ್ದಾಂತದ ಸವಾಲನ್ನು ಹಾಕಿರುವ ಪ್ರಧಾನಿ ನರೇಂದ್ರ ಮೋದಿಯನ್ನು ಮತ್ತೆ ಟೀಕಿಸಿರುವ ಕಾಂಗ್ರೆಸ್ ಹಿರಿಯ ಮುಖಂಡ ಪಿ ಚಿದಂಬರಂ, ದೇಶದ ವಿಶ್ವವಿದ್ಯಾಲಯಗಳು ಎಂದು ಚಿಂತನೆ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯದ ಸ್ವರ್ಗ ತಾಣಗಳಾಗುತ್ತವೆ ಎಂದು ಕೇಳಿದ್ದಾರೆ. 
ಪಿ ಚಿದಂಬರಂ
ಪಿ ಚಿದಂಬರಂ

ನವದೆಹಲಿ: ವಿದ್ಯಾರ್ಥಿಗಳಿಗೆ ಐನ್ ಸ್ಟೈನ್ ಸಿದ್ದಾಂತದ ಸವಾಲನ್ನು ಹಾಕಿರುವ ಪ್ರಧಾನಿ ನರೇಂದ್ರ ಮೋದಿಯನ್ನು ಮತ್ತೆ ಟೀಕಿಸಿರುವ ಕಾಂಗ್ರೆಸ್ ಹಿರಿಯ ಮುಖಂಡ ಪಿ ಚಿದಂಬರಂ, ದೇಶದ ವಿಶ್ವವಿದ್ಯಾಲಯಗಳು ಎಂದು ಚಿಂತನೆ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯದ ಸ್ವರ್ಗ ತಾಣಗಳಾಗುತ್ತವೆ ಎಂದು ಕೇಳಿದ್ದಾರೆ.


ಸಿಬಿಐ ಬಂಧನದಿಂದಾಗಿ ತಿಹಾರ್ ಜೈಲಿನಲ್ಲಿರುವ ಚಿದಂಬರಂ ಅವರು ತಮ್ಮ ಕುಟುಂಬಸ್ಥರಿಗೆ ತಮ್ಮ ಪರವಾಗಿ ಈ ಟ್ವೀಟ್ ಮಾಡಲು ಹೇಳಿದ್ದಾರೆ.


ಐನ್ ಸ್ಟೈನ್ ಸಿದ್ದಾಂತದ ಸವಾಲುಗಳನ್ನು ವಿದ್ಯಾರ್ಥಿಗಳಿಗೆ ಹಾಕಿರುವ ಪ್ರಧಾನಿ ಮೋದಿಯವರ ಬಗ್ಗೆ ನನಗೆ ಖುಷಿಯಿದೆ. ಬೋಧನೆಯಲ್ಲಿ ಸ್ವಾತಂತ್ರ್ಯ ಮತ್ತು ವ್ಯಕ್ತಿಯ ಸಹಜ ಮತ್ತು ಸದೃಢ ಬೆಳವಣಿಗೆಗೆ ಮುದ್ರಣ ಅಥವಾ ಪುಸ್ತಕ ಮಾಧ್ಯಮ ಆಧಾರ ಸ್ಥಂಭ ಎಂಬ ಆಲ್ಬರ್ಟ್ ಐನ್ ಸ್ಟೈನ್ ಅವರ ನಂಬಿಕೆಯಾಗಿತ್ತು. ಆಲ್ಬರ್ಟ್ ಐನ್ ಸ್ಟೈನ್ ಅವರನ್ನು ನಂಬುವ ನಮ್ಮ ಪ್ರಧಾನ ಮಂತ್ರಿಗಳು ಎಂದು ವಿಶ್ವವಿದ್ಯಾಲಯಗಳು ಸ್ವತಂತ್ರ ಮುಕ್ತವಾಗಿ ಮಾಡುತ್ತಾರೆ ಎಂದು ಟ್ವೀಟ್ ನಲ್ಲಿ ಪ್ರಶ್ನಿಸಿದ್ದಾರೆ.


ಇತ್ತೀಚೆಗೆ ಪ್ರಧಾನಿ ಮೋದಿ ನ್ಯೂಯಾರ್ಕ್ ಟೈಮ್ಸ್ ಗೆ ಬರೆದ ಲೇಖನದಲ್ಲಿ ಐನ್ ಸ್ಟೈನ್ ಸಿದ್ದಾಂತವನ್ನು ಪ್ರಸ್ತಾಪಿಸಿದ್ದರು. ಗಾಂಧೀಜಿಯವರ ಗೌರವಾರ್ಥ, ಐನ್ ಸ್ಟೈನ್ ಸವಾಲನ್ನು ಪ್ರಸ್ತಾಪಿಸುತ್ತೇನೆ. ''ಈ ಭೂಮಿ ಮೇಲೆ ರಕ್ತ, ಮಾಂಸ ಬಿದ್ದು ಅದರ ಮೇಲೆ ನಡೆದಾಡಿ ಸ್ವಾತಂತ್ರ್ಯ, ಶಾಂತಿ, ಅಹಿಂಸೆ ಸಮಾಜದಲ್ಲಿ ನೆಲೆಸುತ್ತದೆ ಎಂದು ಹೇಳಿದರೆ ಮುಂಬರುವ ತಲೆಮಾರಿನವರು ನಂಬುವುದಿಲ್ಲ ಎಂದು ಮಹಾತ್ಮಾ ಗಾಂಧಿ ಹೇಳಿದ್ದಾರೆ ಎಂದು ಆಲ್ಬರ್ಟ್ ಐನ್ ಸ್ಟೈನ್ ಹೇಳಿದ್ದನ್ನು ಮೋದಿಯವರು ಪ್ರಸ್ತಾಪಿಸಿದ್ದರು.


ಮಹಾತ್ಮಾ ಗಾಂಧಿಯವರ ವ್ಯಕ್ತಿತ್ವ, ಅವರ ಚಿಂತನೆ ಜಾಗತಿಕ ಮಟ್ಟದಲ್ಲಿ ಪರಿಣಾಮ ಬೀರುವಂತಹದ್ದು. ಇಂದಿನ ವಿದ್ಯಾರ್ಥಿಗಳಿಗೆ ನಾನು ಐನ್ ಸ್ಟೈನ್ ಸವಾಲನ್ನು ನೀಡುತ್ತೇನೆ ಎಂದು ಮೊನ್ನೆ ಅಕ್ಟೋಬರ್ 2ರಂದು ಗಾಂಧೀಜಿಯವರ 150ನೇ ಜನ್ಮದಿನದ ಅಂಗವಾಗಿ ಲೇಖನದೊಂದಿಗೆ ಮೋದಿಯವರು ಟ್ವೀಟ್ ಮಾಡಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com