ತಾಲಿಬಾನ್ ಒತ್ತೆಯಾಳಾಗಿ ಇರಿಸಿಕೊಂಡಿದ್ದ ಮೂವರು ಭಾರತೀಯರ ಬಿಡುಗಡೆ: ವರದಿ

ತಾಲಿಬಾನ್ ಉಗ್ರ ಸಂಘಟನೆಯ ಉನ್ನತ ಮಟ್ಟದ  11 ಮಂದಿ ಉಗ್ರರನ್ನು ಸುರಕ್ಷಿತವಾಗಿ ಬಿಡುಗಡೆ ಮಾಡಿದ ಹಿನ್ನೆಲೆಯಲ್ಲಿ ಒಂದು ವರ್ಷದಿಂದ ಒತ್ತೆಯಾಳಾಗಿ ಇರಿಸಿಕೊಂಡಿದ್ದ ಮೂವರು ಭಾರತೀಯ ಇಂಜಿನಿಯರ್ ಗಳನ್ನು ಬಿಡುಗಡೆ ಮಾಡಲಾಗಿದೆ ಎಂದು ಅಪ್ಘಾನ್ ತಾಲಿಬಾನ್ ಹೇಳಿದೆ ಎಂದು  ಮಾಧ್ಯಮ ವರದಿಗಳು ತಿಳಿಸಿವೆ.
ತಾಲಿಬಾನ್ ಉಗ್ರರು
ತಾಲಿಬಾನ್ ಉಗ್ರರು

ನವದೆಹಲಿ:ತಾಲಿಬಾನ್ ಉಗ್ರ ಸಂಘಟನೆಯ ಉನ್ನತ ಮಟ್ಟದ  11 ಮಂದಿ ಉಗ್ರರನ್ನು ಸುರಕ್ಷಿತವಾಗಿ ಬಿಡುಗಡೆ ಮಾಡಿದ ಹಿನ್ನೆಲೆಯಲ್ಲಿ ಒಂದು ವರ್ಷದಿಂದ ಒತ್ತೆಯಾಳಾಗಿ ಇರಿಸಿಕೊಂಡಿದ್ದ ಮೂವರು ಭಾರತೀಯ ಇಂಜಿನಿಯರ್ ಗಳನ್ನು ಬಿಡುಗಡೆ ಮಾಡಲಾಗಿದೆ ಎಂದು ಅಪ್ಘಾನ್ ತಾಲಿಬಾನ್ ಹೇಳಿದೆ ಎಂದು  ಮಾಧ್ಯಮ ವರದಿಗಳು ತಿಳಿಸಿವೆ.

ತಾಲಿಬಾನ್ ಉಗ್ರ ಸಂಘಟನೆ ಪ್ರಮುಖರು ಈ ವಿಷಯವನ್ನು ತಿಳಿಸಿರುವುದಾಗಿ ದಿ ಎಕ್ಸ್ ಪ್ರೆಸ್ ಟ್ರಿಬ್ರೂನ್ ವರದಿ ಮಾಡಿದೆ. ಆದರೆ, ಸ್ಥಳವನ್ನು ಬಹಿರಂಗ ಪಡಿಸಿಲ್ಲ. 

ಅಪ್ಘಾನ್ ಆಡಳಿತ ಅಥವಾ ಅಪ್ಘಾನಿಸ್ತಾನದಲ್ಲಿ ಅಮೆರಿಕಾದ ಪಡೆಗಳ ವಶದಲ್ಲಿದ್ದ ತಾಲಿಬಾನ್ ಉಗ್ರರನ್ನು ಬಿಡುಗಡೆ ಮಾಡಲಾಗಿದೆಯೇ ಎಂಬುದನ್ನು ತಿಳಿಸಲು  ಅಧಿಕಾರಿಗಳು ನಿರಾಕರಿಸಿದ್ದಾರೆ.  

 ತಾಲಿಬಾನ್ ಪ್ರಾಬಲ್ಯದ  ಕುನಾರ್ ಮತ್ತು ನಿಮ್ರೋಜ್  ಪ್ರಾಂತ್ಯದ  ಉಗ್ರ ಸಂಘಟನೆಯ ಗೌರ್ವನರ್ ಆಗಿದ್ದ ಶೇಕ್ ಅಬ್ದುರ್ ರಹೀಂ , ಮಾವ್ಲಾವಿ ಅಬ್ದುರ್ ರಶೀದ್  ಅವರನ್ನು  ಬಿಡುಗಡೆ ಮಾಡಲಾಗಿದೆ. ನಂತರ ಬಿಡುಗಡೆಯಾಗಿರುವ ಉಗ್ರರ ಪೋಟೋಗಳನ್ನು ಮಾಧ್ಯಮಗಳಿಗೆ ಬಿಡುಗಡೆ ಮಾಡಲಾಗಿರುವುದಾಗಿ ತಾಲಿಬಾನ್ ಉಗ್ರ ಸಂಘಟನೆಯ ಮುಖಂಡರು ತಿಳಿಸಿದ್ದಾರೆ. 

ಆದಾಗ್ಯೂ, ಈ ಬಗ್ಗೆ ಅಪ್ಘಾನ್ ಅಥವಾ ಭಾರತೀಯ ಆಡಳಿತ ಸಂಸ್ಥೆಗಳಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com