ನರೇಂದ್ರ ಮೋದಿ-ಕ್ಸಿ ಜಿನ್ ಪಿಂಗ್ ಭೇಟಿ; ಅನೌಪಚಾರಿಕ ಸಭೆಯಲ್ಲಿ ನಡೆಯುವುದು ಏನೇನು? 

ಚೀನಾ ಅಧ್ಯಕ್ಷ ಕ್ಸಿ ಜಿನ್ ಪಿಂಗ್ ಇದೇ 11ರಿಂದ 2 ದಿನಗಳ ಭಾರತ ಪ್ರವಾಸದಲ್ಲಿರುತ್ತಾರೆ, ಈ ಸಂದರ್ಭದಲ್ಲಿ ಉಭಯ ನಾಯಕರು ಯಾವುದೇ ಒಪ್ಪಂದ, ನಿಲುವಳಿ ಸೂಚನೆ(ಎಂಒಯು) ಅಥವಾ ಜಂಟಿ ಹೇಳಿಕೆಗೆ ಸಹಿ ಹಾಕುವುದಿಲ್ಲ ಎಂದು ತಿಳಿದುಬಂದಿದೆ.

Published: 09th October 2019 02:35 PM  |   Last Updated: 09th October 2019 02:35 PM   |  A+A-


Prime Minister Narendra Modi and Chinese President Xi Jinping

ನರೇಂದ್ರ ಮೋದಿ-ಕ್ಸಿ ಜಿನ್ ಪಿಂಗ್ (ಸಂಗ್ರಹ ಚಿತ್ರ)

Posted By : Sumana Upadhyaya
Source : ANI

ನವದೆಹಲಿ: ಚೀನಾ ಅಧ್ಯಕ್ಷ ಕ್ಸಿ ಜಿನ್ ಪಿಂಗ್ ಇದೇ 11ರಿಂದ 2 ದಿನಗಳ ಭಾರತ ಪ್ರವಾಸದಲ್ಲಿರುತ್ತಾರೆ, ಈ ಸಂದರ್ಭದಲ್ಲಿ ಉಭಯ ನಾಯಕರು ಯಾವುದೇ ಒಪ್ಪಂದ, ನಿಲುವಳಿ ಸೂಚನೆ(ಎಂಒಯು) ಅಥವಾ ಜಂಟಿ ಹೇಳಿಕೆಗೆ ಸಹಿ ಹಾಕುವುದಿಲ್ಲ ಎಂದು ತಿಳಿದುಬಂದಿದೆ.


ಭಾರತ ಮತ್ತು ಚೀನಾ ಮಧ್ಯೆ ನಡೆಯುವ ಎರಡನೇ ಅನೌಪಚಾರಿಕ ಸಭೆ ಇದೇ 11 ಮತ್ತು 12ರಂದು ನಡೆಯುತ್ತಿದೆ. ಇದು ಅನೌಪಚಾರಿಕ ಸಭೆಯಾಗಿರುವುದರಿಂದ ಯಾವುದೇ ಒಪ್ಪಂದ, ನಿಲುವಳಿ ಸೂಚನೆ, ಪರಸ್ಪರ ಮಾತುಕತೆ ನಡೆಯುವುದಿಲ್ಲ ಎಂದು ತಿಳಿದುಬಂದಿದೆ.


ಚೀನಾ ಅಧ್ಯಕ್ಷರ ಜೊತೆ ಅಲ್ಲಿನ ವಿದೇಶಾಂಗ ಸಚಿವರು ಮತ್ತು ಪಾಲಿಟ್ ಬ್ಯೂರೊ ಸದಸ್ಯರು ಸಹ ಭಾರತಕ್ಕೆ ಬರುತ್ತಿದ್ದಾರೆ. 
ಪಿಎಂ ಮೋದಿ ಚೀನಾ ಅಧ್ಯಕ್ಷರ ಜೊತೆ ಒಬ್ಬರಾಗಿಯೇ ಮತ್ತು ನಿಯೋಗ ಮಟ್ಟದ ಮಾತುಕತೆಯನ್ನು ನಡೆಸಲಿದ್ದಾರೆ. ಇಬ್ಬರ ನಡುವಿನ ಮಾತುಕತೆಯಲ್ಲಿ ಏನೇನು ವಿಷಯಗಳು ಚರ್ಚೆಗೆ ಬರಲಿವೆ ಎಂಬ ಬಗ್ಗೆ ನಿಖರವಾದ ಅಜೆಂಡಾಗಳಿಲ್ಲ. ಎರಡು ದೇಶಗಳ ಜನರ ಮಧ್ಯೆ ಸಂಪರ್ಕ ಬೆಸೆಯಲು ಮತ್ತು ಭಾರತ-ಚೀನಾ ಗಡಿ ಭಾಗದಲ್ಲಿ ಶಾಂತಿ ಮತ್ತು ಭಾತೃತ್ವ ಬೆಳೆಸಲು ಈ ಭೇಟಿ ನೆರವಾಗಲಿದೆ ಎಂದು ಮೂಲಗಳಿಂದ ತಿಳಿದುಬಂದಿದೆ.


ನಾಡಿದ್ದಿನ ಚೆನ್ನೈ ಅನೌಪಚಾರಿಕ ಸಭೆಯಲ್ಲಿ ಉಭಯ ನಾಯಕರು ದ್ವಿಪಕ್ಷೀಯ, ಸ್ಥಳೀಯ ಮತ್ತು ಜಾಗತಿಕ ಪ್ರಾಮುಖ್ಯವಿರುವ ವಿಷಯಗಳನ್ನು ಮತ್ತು ಭಾರತ-ಚೀನಾ ಸಹಭಾಗಿತ್ವ ಅಭಿವೃದ್ಧಿ ವಿಚಾರಗಳನ್ನು ಚರ್ಚಿಸಲಿದ್ದಾರೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ ತಿಳಿಸಿದೆ. 

Stay up to date on all the latest ರಾಷ್ಟ್ರೀಯ news with The Kannadaprabha App. Download now
facebook twitter whatsapp