ರಫೆಲ್ ಯುದ್ಧ ವಿಮಾನ ಭಾರತಕ್ಕೆ ಒಂದು 'ಗೇಮ್ ಚೇಂಜರ್': ತಜ್ಞರ ಅಭಿಮತ 

ವರ್ಷಗಳಿಂದ ಕಾಯುತ್ತಿದ್ದ ರಫೆಲ್ ಯುದ್ಧ ವಿಮಾನ ಕೊನೆಗೂ ಭಾರತೀಯ ವಾಯುಪಡೆಗೆ ಸೇರ್ಪಡೆಯಾಗಿದೆ. ಯುದ್ಧ ವಿಮಾನ ಹಸ್ತಾಂತರ ಕಾರ್ಯಕ್ರಮಕ್ಕೆ ನಿನ್ನೆ ಫ್ರಾನ್ಸ್ ನಲ್ಲಿ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಸಾಕ್ಷಿಯಾದರು.
ಡಸಾಲ್ಟ್ ಏವಿಯೇಷನ್ ಮುಖ್ಯ ಪೈಲಟ್ ಫಿಲಿಪ್ ಡುಚಾಟೊ ಜೊತೆ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಡಸಾಲ್ಟ್ ಏವಿಯೇಷನ್ ಮುಖ್ಯ ಪೈಲಟ್ ಫಿಲಿಪ್ ಡುಚಾಟೊ ಜೊತೆ ರಕ್ಷಣಾ ಸಚಿವ ರಾಜನಾಥ್ ಸಿಂಗ್

ನವದೆಹಲಿ: ವರ್ಷಗಳಿಂದ ಕಾಯುತ್ತಿದ್ದ ರಫೆಲ್ ಯುದ್ಧ ವಿಮಾನ ಕೊನೆಗೂ ಭಾರತೀಯ ವಾಯುಪಡೆಗೆ ಸೇರ್ಪಡೆಯಾಗಿದೆ. ಯುದ್ಧ ವಿಮಾನ ಹಸ್ತಾಂತರ ಕಾರ್ಯಕ್ರಮಕ್ಕೆ ನಿನ್ನೆ ಫ್ರಾನ್ಸ್ ನಲ್ಲಿ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಸಾಕ್ಷಿಯಾದರು. 


ವಾಯುಪಡೆಗೆ ರಫೆಲ್ ಯುದ್ಧ ವಿಮಾನ ಸೇರ್ಪಡೆ ಒಂದು ಮೈಲಿಗಲ್ಲು ಎಂದು ಹೇಳಲಾಗುತ್ತಿದೆ. ಭಾರತದಲ್ಲಿ ಶಾಂತಿ ಮತ್ತು ಸುರಕ್ಷತೆ ನೆಲೆಸಲು ರಫೇಲ್ ಭಾರತದ ವಾಯು ಪ್ರಾಬಲ್ಯವನ್ನು ಗಣನೀಯವಾಗಿ ಹೆಚ್ಚಿಸುತ್ತದೆ ಎಂದು ನಾನು ನಂಬುತ್ತೇನೆ ಎಂದು ರಾಜನಾಥ್ ಸಿಂಗ್ ಹಸ್ತಾಂತರ ನಂತರದ ಭಾಷಣದಲ್ಲಿ ಹೇಳಿದ್ದಾರೆ.

2006ರಲ್ಲಿಯೇ ಫ್ರಾನ್ಸ್ ಜೊತೆಗೆ ರಫೆಲ್ ಯುದ್ಧ ವಿಮಾನ ಖರೀದಿಗೆ ಮಾತುಕತೆ ಆರಂಭವಾಗಿತ್ತು. ಆದರೆ ಅದು ಅಂತಿಮಗೊಂಡಿದ್ದು 2016ರಲ್ಲಿ. ನಂತರ ಭಾರತೀಯ ವಾಯುಪಡೆಗೆ ಸೇರ್ಪಡೆಯಾಗಲು ಮೂರು ವರ್ಷ ತೆಗೆದುಕೊಂಡಿತು. ತಲಾ 59 ಸಾವಿರ ಕೋಟಿ ವೆಚ್ಚದಲ್ಲಿ ಭಾರತ 36(ಎರಡು ಸ್ಕ್ವಾಡ್ರನ್) ರಫೆಲ್ ಯುದ್ಧ ವಿಮಾನಗಳನ್ನು ಖರೀದಿಸುತ್ತಿದೆ.


ಭಾರತೀಯ ವಾಯುಪಡೆಯ ಯುದ್ಧ ವಿಮಾನಗಳ ವಿಷಯದಲ್ಲಿ ಫ್ರಾನ್ಸ್ ನಿಂದ ರಫೆಲ್ ಯುದ್ಧ ವಿಮಾನ ಖರೀದಿ ಒಂದು ಪ್ರಮುಖ ಬೆಳವಣಿಗೆ. ಯುದ್ದ ವಿಮಾನದ ಸಾಮರ್ಥ್ಯವನ್ನು ಹೆಚ್ಚಿಸಲು ಭಾರತೀಯ ವಾಯುಪಡೆ ದೀರ್ಘ ವರ್ಷಗಳಿಂದ ಇದಕ್ಕಾಗಿ ಕಾಯುತ್ತಿತ್ತು. ರಫೆಲ್ ಅದ್ಭುತವಾದ ಯುದ್ಧ ಮಾಡುವ ಸಾಮರ್ಥ್ಯ ಹೊಂದಿದೆ, ವಿಮಾನದ ಪ್ರತಿ ಘಟಕವು ಗಾಳಿಯಲ್ಲಿ ಶತ್ರುಗಳ ವಿರುದ್ಧ ಹೋರಾಡುವ ಸಾಮರ್ಥ್ಯವನ್ನು ಹೊಂದಿದೆ ಮತ್ತು ಸ್ಟ್ಯಾಂಡ್-ಆಫ್ ವ್ಯಾಪ್ತಿಯಿಂದ ಅದರ ಎಲೆಕ್ಟ್ರಾನಿಕ್ ಯುದ್ಧ ಸಾಮರ್ಥ್ಯದೊಂದಿಗೆ ನಿಖರ ಸ್ಟ್ರೈಕ್‌ಗಳನ್ನು ಸಹ ಮಾಡುತ್ತದೆ ಎಂದು ನಿವೃತ್ತ ಏರ್ ಮಾರ್ಷಲ್ ವಿ ಕೆ ಭಾಟಿಯಾ ಬಣ್ಣಿಸಿದ್ದಾರೆ.


ಶತ್ರು ಸಂವೇದಕಗಳು ಮತ್ತು ರಾಡಾರ್‌ಗಳನ್ನು ನಿಗ್ರಹಿಸುವ ಸಾಮರ್ಥ್ಯವಿರುವ ರಫೆಲ್ ಜೆಟ್‌ಗಳಿಗೆ ಸಾಟಿಯಿಲ್ಲ. ಇದು ಶತ್ರು ಪ್ರದೇಶವನ್ನು ಭೇದಿಸುವುದಲ್ಲದೆ, ಶತ್ರು ವಿಮಾನಗಳು ಎಲ್ಲಿದೆ ಎಂದು ಭಾರತದೊಳಗೆ ಇರುವಾಗಲೇ ನಿಖರವಾಗಿ ಗುರುತಿಸುತ್ತದೆ.
ರಫೆಲ್ ಯುದ್ಧ ವಿಮಾನ ಒಂದು ಬಾರಿ 14.5 ಟನ್ ತೂಕವನ್ನು ಹೊತ್ತೊಯ್ಯಬಲ್ಲದು, ಹೆಚ್ಚುವರಿ ಇಂಧನ ಟ್ಯಾಂಕ್, ಕ್ಷಿಪಣಿ ಮತ್ತು ಮದ್ದುಗುಂಡುಗಳನ್ನು ಸಾಗಿಸಲು 14 ಹೊರಗಿನ ಪಾಡ್ಸ್ ಗಳಿರುತ್ತವೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com