'ಜಗನ್ ರೆಡ್ಡಿ' ಸೈಕೋ ರೀತಿಯಲ್ಲಿ ವರ್ತಿಸುತ್ತಿದ್ದಾರೆ: ಚಂದ್ರಬಾಬು ನಾಯ್ಡು

ಮುಖ್ಯಮಂತ್ರಿ ಜಗನ್ ಮೋಹನ್ ಜನವಿರೋಧಿ ನೀತಿಗಳನ್ನು ಅನುಸರಿಸುತ್ತಿದ್ದಾರೆ ಎಂದು ಪರಮ ವೈರಿ ಮಾಜಿ ಸಿಎಂ ಎನ್ ಚಂದ್ರಬಾಬು ನಾಯ್ಡು  ಕಿಡಿಕಾರಿದ್ದಾರೆ.

Published: 12th October 2019 11:39 AM  |   Last Updated: 12th October 2019 11:39 AM   |  A+A-


Chandrababu Naidu

ಚಂದ್ರಬಾಬು ನಾಯ್ಡು

Posted By : Shilpa D
Source : ANI

ವಿಶಾಖಪಟ್ಟಣಂ:  ಮುಖ್ಯಮಂತ್ರಿ ಜಗನ್ ಮೋಹನ್ ಜನವಿರೋಧಿ ನೀತಿಗಳನ್ನು ಅನುಸರಿಸುತ್ತಿದ್ದಾರೆ ಎಂದು ಪರಮ ವೈರಿ ಮಾಜಿ ಸಿಎಂ ಎನ್ ಚಂದ್ರಬಾಬು ನಾಯ್ಡು  ಕಿಡಿಕಾರಿದ್ದಾರೆ.

ಜನವಿರೋಧಿ ನೀತಿಗಳನ್ನು ಜಾರಿಗೆ ತರುತ್ತಿದ್ದಾರೆ,ಬೇರೆ ಪಕ್ಷಗಳ ಕಾರ್ಯಕರ್ತರ ವಿರುದ್ದ ಸುಖಾಸುಮ್ಮನೆ ಕೇಸು ದಾಖಲಿಸಲಾಗುತ್ತಿದೆ,. ಪೊಲೀಸರು ಸುಮ್ಮನೆ ಸಮಸ್ಯೆಗಳನ್ನು ಸೃಷ್ಟಿಸುತ್ತಿದ್ದಾರೆ, ಸಿಎಂ ಜಗನ್ ಸೈಕೋ ರೀತಿಯಲ್ಲಿ  ವರ್ತಿಸುತ್ತಿದ್ದಾರೆ ಎಂದು ಟೀಕಿಸಿದ್ದಾರೆ.

ವೈಎಸ್ ಆರ್ ಪಿಸಿ ಆಡಳಿತ ಅತಿ ಕೆಟ್ಟದ್ದಾಗಿದೆ, ಪಕ್ಷದ ಮುಖಂಡರು ಜಗನ್ ಟ್ಯಾಕ್ಸ್ ವಸೂಲಿ ಮಾಡುತ್ತಿದ್ದಾರೆ, ನಾನು ಹಲವು ಸಿಎಂ ಗಳನ್ನು ನೋಡಿದ್ದೇನೆ, ಆದರೆ ಇಂಥ ಸಿಎಂಗಳನ್ನು ನಾನು ಎಂದಿಗೂ ನೋಡಿಲ್ಲ ಎಂದು ವಾಗ್ದಾಳಿ ನಡೆಸಿದ್ದಾರೆ. ನಾನು ಎಲ್ಲರಿಗೂ ಒಂದೇ,ಸರ್ಕಾರ ತನ್ನ ವರ್ತನೆ ಬದಲಿಸಿಕೊಳ್ಳುವ ಅಗತ್ಯವಿದೆ ಎಂದು ತಿಳಿಸಿದ್ದಾರೆ.

Stay up to date on all the latest ರಾಷ್ಟ್ರೀಯ news with The Kannadaprabha App. Download now
Poll
'Nationalism', 'citizenship', 'demonetisation' among chapters dropped from CBSE syllabus

ಹಿರಿಯ ತರಗತಿಗಳ ಪಠ್ಯಕ್ರಮವನ್ನು 30% ರಷ್ಟು ಕಡಿಮೆ ಮಾಡುವ ಸಿಬಿಎಸ್‌ಇ ನಡೆ ಸರಿಯೇ?


Result
ಸರಿ
ತಪ್ಪು
ಗೊತ್ತಿಲ್ಲ
flipboard facebook twitter whatsapp