ಕಾಶ್ಮೀರದಲ್ಲಿ ಇಂದಿನಿಂದ ಮೊಬೈಲ್ ಸೇವೆ ಪುನಾರಂಭ, ಪೋಸ್ಟ್‌ಪೇಯ್ಡ್ ಸಂಪರ್ಕಕ್ಕೆ ಸೋಮವಾರ ಚಾಲನೆ

ಕೇಂದ್ರಾಡಳಿತ ಪ್ರದೇಶ ಜಮ್ಮು ಮತ್ತು ಕಾಶ್ಮೀರದಲ್ಲಿ ಶನಿವಾರದಿಂದ ಮೊಬೈಲ್ ಸೇವೆಗಳು ಪುನಾರಂಭಗೊಳ್ಲಲಿದ್ದು ಸೋಮವಾರದಿಂದ ಪೋಸ್ಟ್‌ಪೇಯ್ಡ್ ಸೇವೆಗಳು ಲಭ್ಯವಾಗಲಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಶ್ರೀನಗರ: ಕೇಂದ್ರಾಡಳಿತ ಪ್ರದೇಶ ಜಮ್ಮು ಮತ್ತು ಕಾಶ್ಮೀರದಲ್ಲಿ ಶನಿವಾರದಿಂದ ಮೊಬೈಲ್ ಸೇವೆಗಳು ಪುನಾರಂಭಗೊಳ್ಲಲಿದ್ದು ಸೋಮವಾರದಿಂದ ಪೋಸ್ಟ್‌ಪೇಯ್ಡ್ ಸೇವೆಗಳು ಲಭ್ಯವಾಗಲಿದೆ. ಇದು ಈ ಭಾಗದಲ್ಲಿ ಸಂವಹನಕ್ಕಿದ್ದ ಅಡಚಣೆ ನಿವಾರಣೆಯತ್ತ ಪ್ರಮುಖ ಹೆಜ್ಜೆಯಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ

"ಎಲ್ಲಾ ಪೋಸ್ಟ್ ಪೇಯ್ಡ್ ಮೊಬೈಲ್ ಫೋನ್ ಸಂಪರ್ಕಗಳು ಸೋಮವಾರ ಮಧ್ಯಾಹ್ನ 12 ರಿಂದ ಜಮ್ಮು ಮತ್ತು ಕಾಶ್ಮೀರಪ್ರದೇಶಗಳಲ್ಲಿ ಕಾರ್ಯನಿರ್ವಹಿಸಲಿದೆ" ಜಮ್ಮು ಮತ್ತು ಕಾಶ್ಮೀರದ ಪ್ರಧಾನ ಕಾರ್ಯದರ್ಶಿ (ಯೋಜನಾ ಆಯೋಗ) ರೋಹಿತ್ ಕನ್ಸಾಲ್ ಶನಿವಾರ ತಿಳಿಸಿದ್ದಾರೆ.

69 ದಿನಗಳ ಹಿಂದೆ ಕೇಂದ್ರವು ಜಮ್ಮು ಮತ್ತು ಕಾಶ್ಮೀರದ ವಿಶೇಷ ಸ್ಥಾನಮಾನವನ್ನು ರದ್ದುಪಡಿಸಿದ ನಂತರ ಎಲ್ಲಾ ಬಗೆಯ ಮೊಬೈಲ್ ಸಂಪರ್ಕ, ಇಂಟರ್ ನೆಟ್ ಸೌಲಭ್ಯಗಳಿಗೆ ಈ ಭಾಗದಲ್ಲಿ ನಿರ್ಬಂಧ ಹೇರಲಾಗಿತ್ತು. ಇದರಿಂದ ಈ ಕಣಿವೆ ಭಾಗದ ಸುಮಾರು 7 ಮಿಲಿಯನ್ ನಿವಾಸಿಗಳಿಗೆ ಅನಾನುಕೂಲ ಸ್ಥಿತಿ ನಿರ್ಮಾಣವಾಗಿತ್ತು.

ಇದೀಗ ಜಮ್ಮು ಕಾಶ್ಮೀರದಲ್ಲಿ ದಿನೇ ದಿನೇ ಪರಿಸ್ಥಿತಿ ಸುಧಾರಣೆ ಕಾಣುತ್ತಿದ್ದು ಇಂದಿನಿಂದ ಮೊಬೈಲ್ ಸೇವೆ ದೊರೆಯಲಿದೆ ಈ ನಡುವೆ ಪ್ರವಾಸಿಗರ ಮೇಲೆ ವಿಧಿಸಿದ್ದ ನಿರ್ಬಂಧವನ್ನು ಗುರುವಾರವಷ್ಟೇ ಸರ್ಕಾರ ಹಿಂದಕ್ಕೆ ಪಡೆದಿತ್ತು. ಕಾಶ್ಮೀರಕ್ಕೆ ಹೆಚ್ಚಿನ ಪ್ರವಾಸಿಗರು, ಭೇಟಿ ನೀಡಲಿರುವ ಹಿನ್ನೆಲೆಯಲ್ಲಿ ಮೊಬೈಲ್ ಸೇವೆಯನ್ನು ಆರಂಭ ಮಾಡಲಾಗಿದೆ ಎಂದು ಹೇಳಲಾಗುತ್ತಿದೆ.
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com