12 ವರ್ಷದ ಉಳಿತಾಯದ ಹಣದಿಂದ ತಾಯಿ ಹುಟ್ಟುಹಬ್ಬಕ್ಕೆ ಫ್ರಿಡ್ಜ್ ಗಿಫ್ಟ್ ನೀಡಿದ ಬಾಲಕ!

ಪಿಗ್ಗಿ ಬ್ಯಾಂಕ್ ನಲ್ಲಿ 12 ವರ್ಷದಿಂದ ಸಂಗ್ರಹಿಸಿಟ್ಟಿದ್ದ ಹಣದಿಂದ ತನ್ನ ತಾಯಿಯ ಹುಟ್ಟುಹಬ್ಬಕ್ಕೆ 17 ವರ್ಷದ ಬಾಲಕ ಪ್ರಿಡ್ಜ್ ಗಿಫ್ಟ್ ನೀಡಿದ್ದಾನೆ.
ಫ್ರಿಡ್ಜ್ ಗಿಫ್ಟ್ ನೀಡಿದ 17 ವರ್ಷದ ಮಗ
ಫ್ರಿಡ್ಜ್ ಗಿಫ್ಟ್ ನೀಡಿದ 17 ವರ್ಷದ ಮಗ

ಜೈಪುರ: ಪಿಗ್ಗಿ ಬ್ಯಾಂಕ್ ನಲ್ಲಿ 12 ವರ್ಷದಿಂದ ಸಂಗ್ರಹಿಸಿಟ್ಟಿದ್ದ ಹಣದಿಂದ ತನ್ನ ತಾಯಿಯ ಹುಟ್ಟುಹಬ್ಬಕ್ಕೆ 17 ವರ್ಷದ ಬಾಲಕ ಪ್ರಿಡ್ಜ್ ಗಿಫ್ಟ್ ನೀಡಿದ್ದಾನೆ.

35 ಕೆಜಿ ತೂಕದ ಚೀಲದಲ್ಲಿ  ಕೂಡಿಟ್ಟ ನಾಣ್ಯಗಳಿಂದ ತಮ್ಮ ತಾಯಿಯ ಆಸೆಯನ್ನು ಈಡೇರಿಸಿದ್ದಾನೆ. ಫ್ರಿಡ್ಜ್ ಕೊಳ್ಳಲು 2 ಸಾವಿರ ಹಣ ಕಡಿಮೆಯಿತ್ತು, ಆದರೆ ಬಾಲಕನ ಈ ಉದ್ದೇಶದಿಂದ ಪ್ರೇರಿತರಾದ ಶೋರೂಂ ನವರು 2 ಸಾವಿರ ರು ಡಿಸ್ಕೌಂಟ್ ನೀಡಿದ್ದಾರೆ.

ಸಹರಾನಗರ್ ನಿವಾಸಿಯಾದ ರಾಮ್ ಸಿಂಗ್ ವೃತ್ತಪತ್ರಿಕೆಯಲ್ಲಿ  ಜಾಹೀರಾತು ನೋಡಿದ ಆತ , ತನ್ನ ತಾಯಿಯ ಹುಟ್ಟುಹಬ್ಬಕ್ಕೆ  ಗಿಫ್ಟ್ ಕೊಡಲು ನಿರ್ಧರಿಸಿ  ಶೋ ರೂಂ ಗೆ ಕಾಲ್ ಮಾಡಿದ್ದಾನೆ.ತಮ್ಮ ತಾಯಿ ಪಪ್ಪುದೇವಿ ಹುಟ್ಟುಹಬ್ಬವಿದೆಸ ಅವರ ಹುಟ್ಟುಹಬ್ಬಕ್ಕೆ ಫ್ರಿಡ್ಜ್ ಉಡುಗೊರೆ ನೀಡಲು ಬಯಸಿದ್ದೇನೆ, ಆದರೆ ನನ್ನ ಹತ್ತಿರ ಬಳಿ ನಾಣ್ಯಗಳಿವೆ ಎಂದು ಹೇಳಿದ. ಆರಂಭದಲ್ಲಿ ಶೋ ರೂಂ ಮಾಲೀಕ ಒಪ್ಪಿರಲಿಲ್ಲ. ನಂತರ ಅವರ ಮನವೊಲಿಸಿದ ಮೇಲೆ ನಾಣ್ಯಗಳನ್ನು ತೆಗೆದುಕೊಳ್ಳಲು ಒಪ್ಪಿದರು.

ನಮ್ಮ ಹಳೇಯ ಫ್ರಿಡ್ಜ್ ಹಾಳಾಗಿತ್ತು, ಹೀಗಾಗಿ ಹೊಸ ರೆಫ್ರಿಜರೇಟರ್ ತೆಗೆದುಕೊಳ್ಳುವ ಸಂಬಂಧ ಮಾತನಾಡುತ್ತಿದ್ದರು, ಹೀಗಾಗಿ  ನಾನು ಸಣ್ಣ ವಯಸ್ಸಿನಿಂದ ಕೂಡಿಟ್ಟ ಹಣದಿಂದ ಫ್ರಿಡ್ಜ್ ಕೊಳ್ಳಲು ನಿರ್ಧರಿಸಿದ. ಶೋ ರೂಂ ಮಾಲೀಕರು ನನಗೆ ಸಹಾಯ ಮಾಡಿದರು, ನನ್ನ ತಾಯಿ ಏನಾದರೂ ಖರೀದಿಸಲು ಕೊಟ್ಟ ಹಣ ಉಳಿಸಿ ಅದನ್ನು ಗೋಲಕದಲ್ಲಿ ಹಾಕುತ್ತಿದ್ದೆ,. 12 ವರ್ಷದ ಸಂಗ್ರಹ ಸುಮಾರು 13,500 ರು ಆಗಿತ್ತು, 35 ಕೆಜಿ ತೂಕವಿದ್ದ ನಾಣ್ಯಗಳಿದ್ದ ಚೀಲ ತೆಗೆದುಕೊಂಡು ಅಂಗಡಿಗೆ ತೆರಳಿದ್ದ.

ಚೀಲದಲ್ಲಿ 5 ಮತ್ತು 10 ರು ನಾಣ್ಯಗಳಿದ್ದವು, ನಾಣ್ಯಗಳನ್ನು ಎಣಿಸಲು 4 ಗಂಟೆಗಳ ಕಾಲ ಸಮಯ ಹಿಡಿದಿತ್ತು. ಶೋರೂಂ ಮಾಲಿಕರು ಕೇವಲ 5 ಮತ್ತು 10 ರು ನಾಣ್ಯಗಳನ್ನು ಎಣಿಸಿ ಉಳಿದ ನಾಣ್ಯಗಳನ್ನು ಎಣಿಸಿದೇ ಹಾಗೆಯೇ ಬಿಟ್ಟರು ಎಂದು ರಾಮ್ ಸಿಂಗ್ ಹೇಳಿದ್ದಾರೆ. ನನ್ನ ಮಗ ಇಂತ ಗಿಫ್ಟ್ ನೀಡಿದ್ದು ನನಗೆ ತುಂಬಾ ಸಂತಸ ತಂದಿದೆ ಎಂದು ರಾಮ್ ಸಿಂಗ್ ತಾಯಿ ತಿಳಿಸಿದ್ದಾರೆ.
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com