ವೈಕಲ್ಯಕ್ಕೆ ಸೆಡ್ಡು ಹೊಡೆದ ಐಎಎಸ್ ಅಧಿಕಾರಿ: ಉಪ ವಿಭಾಗಾಧಿಕಾರಿಯಾಗಿ ಪ್ರಾಂಜಲ್ ಪಾಟೀಲ್ ನೇಮಕ

ಅಂಧತ್ವಕ್ಕೆ ಸೆಡ್ಡು ಹೊಡೆದಿರುವ ಐಎಎಸ್ ಅಧಿಕಾರಿ ಪ್ರಾಂಜಲ್ ಪಾಟೀಲ್ ಕೇರಳದ ತಿಕುವನಂತಪುರ ಉಪ ವಿಭಾಗಾಧಿಕಾರಿಯಾಗಿ ಸೋಮವಾರ ಅಧಿಕಾರ ಸ್ವೀಕರಿಸಿದ್ದಾರೆ.

Published: 15th October 2019 10:26 AM  |   Last Updated: 15th October 2019 10:26 AM   |  A+A-


newly appointed sub-collector Pranjal Patil

ಪ್ರಾಂಜಲ್ ಪಾಟೀಲ್ ಅಧಿಕಾರ ಸ್ವೀಕಾರ

Posted By : Shilpa D
Source : The New Indian Express

ತಿರುವನಂತಪುರ: ಅಂಧತ್ವಕ್ಕೆ ಸೆಡ್ಡು ಹೊಡೆದಿರುವ ಐಎಎಸ್ ಅಧಿಕಾರಿ ಪ್ರಾಂಜಲ್ ಪಾಟೀಲ್ ಕೇರಳದ ತಿಕುವನಂತಪುರ ಉಪ ವಿಭಾಗಾಧಿಕಾರಿಯಾಗಿ ಸೋಮವಾರ ಅಧಿಕಾರ ಸ್ವೀಕರಿಸಿದ್ದಾರೆ.

ಮಹಾರಾಷ್ಟ್ರದ ಉಲ್ಲಾಸ್ ನಗರದ ಪ್ರಾಂಜಲ್ ಪಾಟೀಲ್ ತಮ್ಮ ಅಂಗ ವೈಕಲ್ಯವನ್ನು ಮೀರೀ ಬೆಳೆದಿದ್ದಾರೆ,  ಈ ಮೂಲಕ ದೇಶದ ಮೊದಲ ಮಹಿಳಾ ಅಂಧ ಐಎಎಸ್ ಅಧಿಕಾರಿ ಎನಿಸಿದ್ದಾರೆ.

ತಮ್ಮ ಸಹಾಯಕ ಅಧಿಕಾರಿ ಅನುಕುಮಾರಿ ಅವರ ಜೊಕೆ ಕಚೇರಿಗೆ ಬಂದ ಅವರು ಕಲೆಕ್ಟರ್ ಕೆ, ಗೋಪಾಲ ಕೃಷ್ಣನ್ ಅವರ ಚೇಂಬರ್ ನಲ್ಲಿ ಉಪ ವಿಭಾಗಾಧಿಕಾರಿಯಾಗಿ ಅಧಿಕಾರ ಸ್ವೀಕರಿಸಿದರು.

ಉಪ ವಿಭಾಗಾಧಿಕಾರಿಯಾಗಿ ಅಧಿಕಾರ ಸ್ವೀಕರಿಸುತ್ತಿರುವುದಕ್ಕೆ ತುಂಬಾ ಸಂತೋಷವಾಗುತ್ತಿದೆ,. ಜನರ  ಒಳಿತಾಗಿಗಿ ಉತ್ತಮ ಕೆಲಸ ಮಾಡುವುದಾಗಿ ಅವರು ಹೇಳಿದ್ದಾರೆ.

ಆರನೇ ವಯಸ್ಸಿನಲ್ಲಿ ದೃಷ್ಟಿ ಕಳೆದುಕೊಂಡ ಪ್ರಾಂಜಲ್  ಯಾವುದೇ ಐಎಎಸ್ ತರಬೇತಿ ಶಿಬಿರಗಳಲ್ಲಿ ಭಾಗವಹಿಸಿರಲಿಲ್ಲ, ಅಧ್ಯಯನ ಮತ್ತು ತಮ್ಮ ಕೆಲಸಗಳಿಗಾಗಿ ದೃಷ್ಟಿ ಹೀನರಿಗಾಗಿ ಇರುವ ವಿಶೇಷ ಸಾಫ್ಟ್ ವೇರೆ ಬಳಸುತ್ತಾರೆ.

Stay up to date on all the latest ರಾಷ್ಟ್ರೀಯ news with The Kannadaprabha App. Download now
Poll
school

ಶಾಲೆಗಳನ್ನು ತೆರೆಯಲು ಸರ್ಕಾರ ಅನುಮತಿಸಿದರೆ ನಿಮ್ಮ ಮಕ್ಕಳನ್ನು ಶಾಲೆಗೆ ಕಳುಹಿಸಲು ನೀವು ಸಿದ್ಧರಿದ್ದೀರಾ?


Result
ಹೌದು
ಇಲ್ಲ
ಇನ್ನೂ ನಿರ್ಧರಿಸಿಲ್ಲ
facebook twitter whatsapp