1993 ಬಾಂಬ್ ಸ್ಫೋಟ: ಸಂಚುಕೋರರನ್ನು ಹೇಗೆ ರಕ್ಷಿಸಲಾಗುತ್ತಿತ್ತು ಎಂಬುದು ಬಹಿರಂಗ- ಮೋದಿ 

ಎನ್ ಸಿಪಿ ಮುಖಂಡ ಪ್ರಪುಲ್ ಪಟೇಲ್ ವಿರುದ್ಧ ಇಡಿ ತನಿಖೆ ಉಲ್ಲೇಖಿಸಿ ಪ್ರತಿಪಕ್ಷಗಳ ವಿರುದ್ಧ ವಾಗ್ದಾಳಿ ನಡೆಸಿದ ಪ್ರಧಾನಿ ನರೇಂದ್ರ ಮೋದಿ, 1993ರಲ್ಲಿ ಸಂಭವಿಸಿದ್ದ ಬಾಂಬ್ ಸ್ಫೋಟ ಸಂಚುಕೋರರನ್ನು ಹೇಗೆ ರಕ್ಷಿಸಲಾಗುತ್ತಿತ್ತು ಎಂಬುದು ಇದೀಗ ಬಹಿರಂಗವಾಗುತ್ತಿದೆ ಎಂದಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ
ಪ್ರಧಾನಿ ನರೇಂದ್ರ ಮೋದಿ

ಮುಂಬೈ: ಎನ್ ಸಿಪಿ ಮುಖಂಡ ಪ್ರಫುಲ್  ಪಟೇಲ್ ವಿರುದ್ಧ ಇಡಿ ತನಿಖೆ ಉಲ್ಲೇಖಿಸಿ ಪ್ರತಿಪಕ್ಷಗಳ ವಿರುದ್ಧ ಹರಿಹಾಯ್ದ ಪ್ರಧಾನಿ ನರೇಂದ್ರ ಮೋದಿ, 1993ರಲ್ಲಿ ಸಂಭವಿಸಿದ್ದ ಬಾಂಬ್ ಸ್ಫೋಟ ಸಂಚುಕೋರರನ್ನು ಹೇಗೆ ರಕ್ಷಿಸಲಾಗುತ್ತಿತ್ತು ಎಂಬುದು ಇದೀಗ ಬಹಿರಂಗವಾಗುತ್ತಿದೆ ಎಂದಿದ್ದಾರೆ.

 ಚುನಾವಣಾ ಪ್ರಚಾರ ಸಭೆಯನ್ನುದ್ದೇಶಿಸಿ ಮಾತನಾಡಿದ ನರೇಂದ್ರ ಮೋದಿ, ದೇಶದಲ್ಲಿ ಭಯೋತ್ಪಾದನೆ ಉಂಟುಮಾಡುತ್ತಿದ್ದ ಸಂಚುಕೋರರಿಗೆ ಅಧಿಕಾರದಲ್ಲಿದ್ದ ಕೆಲವರು ರಕ್ಷಿಸುತ್ತಿದ್ದರು ಎಂದು  ಅಪಾದಿಸಿದರು.

ಭೂಗತ ದೊರೆ ದಾವೋದ್ ಇಬ್ರಾಹೀಂ ಆಪ್ತ ಇಕ್ಬಲ್ ಮಿರ್ಚಿ ಹಾಗೂ ಪ್ರಪುಲ್ ಪಟೇಲ್ ನಡುವಿನ ಸಂಬಂಧವನ್ನಿಟ್ಟುಕೊಂಡು ವಾಗ್ದಾಳಿ ನಡೆಸಿದ ನರೇಂದ್ರ ಮೋದಿ, ಕೆಲವರು ಮೆಣಸಿನ ಕಾಯಿ ವ್ಯಾಪಾರ ಮಾಡಿದರೆ ಮತ್ತೆ ಕೆಲವರು ಮಿರ್ಚಿಯೊಂದಿಗೆ ವ್ಯವಹಾರ ಮಾಡುತ್ತಾರೆ. ಎಲ್ಲಾ ಸಂಬಂಧಗಳು ಶೀಘ್ರದಲ್ಲಿಯೇ ಹೊರಗೆ ಬರಲಿವೆ. ಯಾರೂ ಕೂಡಾ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ ಎಂದರು.

ಇದೇ ವೇಳೆ ಕೇಂದ್ರ ಸರ್ಕಾರದ ಆರ್ಥಿಕ ನೀತಿ ಕುರಿತು ಮನ್ ಮೋಹನ್ ಸಿಂಗ್ ಅವರ ಟೀಕೆಗಳಿಗೆ ಪ್ರತಿಕ್ರಿಯಿಸಿದ ನರೇಂದ್ರ ಮೋದಿ, ಅವರ ಕಾಲದಲ್ಲಿನ ತೆರಿಗೆ ಸುಧಾರಣೆಗಳ ಬಗ್ಗೆ ಮಾತನಾಡಬೇಕು ಎಂದರು. ದೇಶದಲ್ಲಿನ ಬ್ಯಾಂಕಿಂಗ್ ವ್ಯವಸ್ಥೆಯನ್ನು ಹಾಳು ಮಾಡಿದವರು ತಿಹಾರ್ ಮತ್ತಿತರ ಜೈಲಿನಲ್ಲಿದ್ದಾರೆ. ಭ್ರಷ್ಟಾಚಾರಿಗಳು ಶಿಕ್ಷೆಯಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ ಎಂದು ಎಚ್ಚರಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com