ಜೈಶ್- ಹಿಜ್ಬುಲ್ ಮುಜಾಹಿದ್ದೀನ್ ಸಂಘಟನೆಯ 35 ಉಗ್ರರ ರುಂಡ ಚೆಂಡಾಡಿದ ಭಾರತೀಯ ಸೇನೆ: ಪಾಕ್ ದಾಳಿಗೆ ಪ್ರತೀಕಾರ! 

ಪಾಕಿಸ್ತಾನದ ದಾಳಿಗೆ ಭಾರತೀಯ ಸೇನೆ ಪ್ರತೀಕಾರ ತೆಗೆದುಕೊಂಡಿದ್ದು, ಜೈಶ್ ಹಾಗೂ ಹಿಜ್ಬುಲ್ ಮುಜಾಹಿದ್ದೀನ್ ಉಗ್ರ ಸಂಘಟನೆಯ 35 ಉಗ್ರರನ್ನು ಹೊಡೆದುರುಳಿಸಿದೆ. 
ಜೈಶ್- ಹಿಜ್ಬುಲ್ ಮುಜಾಹಿದ್ದೀನ್ ಸಂಘಟನೆಯ 35 ಉಗ್ರರ ರುಂಡ ಚೆಂಡಾಡಿದ ಭಾರತೀಯ ಸೇನೆ: ಪಾಕ್ ದಾಳಿಗೆ ಪ್ರತೀಕಾರ!
ಜೈಶ್- ಹಿಜ್ಬುಲ್ ಮುಜಾಹಿದ್ದೀನ್ ಸಂಘಟನೆಯ 35 ಉಗ್ರರ ರುಂಡ ಚೆಂಡಾಡಿದ ಭಾರತೀಯ ಸೇನೆ: ಪಾಕ್ ದಾಳಿಗೆ ಪ್ರತೀಕಾರ!

ಶ್ರೀನಗರ: ಪಾಕಿಸ್ತಾನದ ದಾಳಿಗೆ ಭಾರತೀಯ ಸೇನೆ ಪ್ರತೀಕಾರ ತೆಗೆದುಕೊಂಡಿದ್ದು, ಜೈಶ್ ಹಾಗೂ ಹಿಜ್ಬುಲ್ ಮುಜಾಹಿದ್ದೀನ್ ಉಗ್ರ ಸಂಘಟನೆಯ 35 ಉಗ್ರರನ್ನು ಹೊಡೆದುರುಳಿಸಿದೆ. 

ರಕ್ಷಣಾ ಮೂಲಗಳ ಪ್ರಕಾರ ಕುಪ್ವಾರ ಜಿಲ್ಲೆಯ ತಂಗ್ ಧರ್ ಸೆಕ್ಟರ್ ನಲ್ಲಿ ಭಾರತೀಯ ಸೇನೆ ಪ್ರತಿ ದಾಳಿ ನಡೆಸಿದೆ. ಪಾಕಿಸ್ತಾನದಿಂದ ನಡೆದ ಅಪ್ರಚೋದಿತ ದಾಳಿಯಲ್ಲಿ ಓರ್ವ ಭಾರತೀಯ ನಾಗರಿಕ ಹಾಗೂ ಸೇನಾ ಸಿಬ್ಬಂದಿ ಮೃತಪಟ್ಟಿದ್ದಾರೆ. ಗಾಯಗೊಂಡಿರುವ ಇಬ್ಬರು ಯೋಧರು ಹಾಗೂ ಓರ್ವ ನಾಗರಿಕನನ್ನು ಆಸ್ಪತ್ರೆಗೆ ದಾಖಲಿಸಿರುವುದು ವರದಿಯಾಗಿದೆ.

ಭಾರತೀಯ ಸೇನೆ ಎಲ್ಒಸಿಯಲ್ಲಿ ಬರೊಬ್ಬರಿ 7 ಲಾಂಚ್ ಪ್ಯಾಡ್ ಗಳನ್ನು ಗುರಿಯಾಗಿರಿಸಿಕೊಂಡು ದಾಳಿ ನಡೆಸಿದ್ದು, 35 ಉಗ್ರರನ್ನು ಹೊಡೆದುರುಳಿಸಿದೆ.  ಅ.19 ರ ಮಧ್ಯರಾತ್ರಿ ಪ್ರಾರಂಭವಾದ ಗುಂಡಿನ ದಾಳಿ ಈಗಲೂ ಮುಂದುವರೆದಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com