ಎಲ್ಲರನ್ನು ಒಳಗೊಂಡ ಎಲ್ಲರ ಅಭಿವೃದ್ಧಿ' ಗುರಿ ಸಾಧಿಸಲು ತಂತ್ರಜ್ಞಾನ, ಸೇತುವೆ: ಪ್ರಧಾನಿ

ಎಲ್ಲರನ್ನು ಒಳಗೊಂಡ ಎಲ್ಲರ ಅಭಿವೃದ್ಧಿ; ಸಾಧಿಸಲು ತಂತ್ರಜ್ಞಾನವು ಆಕಾಂಕ್ಷೆಗಳು ಮತ್ತು ಸಾಧನೆ, ಬೇಡಿಕೆ ಮತ್ತು ವಿತರಣೆ, ಸರ್ಕಾರ ಮತ್ತು ಆಡಳಿತದ ನಡುವೆ ಸೇತುವೆಯನ್ನು ನಿರ್ಮಿಸುತ್ತದೆ ಎಂದು ಪ್ರಧಾನಿ ನರೇಂದ್ರ ಮೋದಿ ಭಾನುವಾರ ಹೇಳಿದ್ದಾರೆ.
ಎಲ್ಲರನ್ನು ಒಳಗೊಂಡ ಎಲ್ಲರ ಅಭಿವೃದ್ಧಿ' ಗುರಿ ಸಾಧಿಸಲು ತಂತ್ರಜ್ಞಾನ, ಸೇತುವೆ: ಪ್ರಧಾನಿ
ಎಲ್ಲರನ್ನು ಒಳಗೊಂಡ ಎಲ್ಲರ ಅಭಿವೃದ್ಧಿ' ಗುರಿ ಸಾಧಿಸಲು ತಂತ್ರಜ್ಞಾನ, ಸೇತುವೆ: ಪ್ರಧಾನಿ

ನವದೆಹಲಿ: ಎಲ್ಲರನ್ನು ಒಳಗೊಂಡ ಎಲ್ಲರ ಅಭಿವೃದ್ಧಿ; ಸಾಧಿಸಲು ತಂತ್ರಜ್ಞಾನವು ಆಕಾಂಕ್ಷೆಗಳು ಮತ್ತು ಸಾಧನೆ, ಬೇಡಿಕೆ ಮತ್ತು ವಿತರಣೆ, ಸರ್ಕಾರ ಮತ್ತು ಆಡಳಿತದ ನಡುವೆ ಸೇತುವೆಯನ್ನು ನಿರ್ಮಿಸುತ್ತದೆ ಎಂದು ಪ್ರಧಾನಿ ನರೇಂದ್ರ ಮೋದಿ ಭಾನುವಾರ ಹೇಳಿದ್ದಾರೆ.

ಸಬ್ಕಾ ಸಾಥ್, ಸಬ್ಕಾ ವಿಕಾಸ್; ಗುರಿಯನ್ನು ಸಾಧಿಸಲು ತಂತ್ರಜ್ಞಾನವು ಆಕಾಂಕ್ಷೆಗಳು ಮತ್ತು ಸಾಧನೆ, ಬೇಡಿಕೆ ಮತ್ತು ವಿತರಣೆ, ಸರ್ಕಾರ ಮತ್ತು ಆಡಳಿತದ ನಡುವೆ ಸೇತುವೆಯನ್ನು ನಿರ್ಮಿಸುತ್ತದೆ. ವೇಗವಾಗಿ ಬೆಳೆಯುತ್ತಿರುವ ಮಹತ್ವಾಕಾಂಕ್ಷೆಯ ಭಾರತಕ್ಕೆ ಸಕಾರಾತ್ಮಕತೆ, ಸೃಜನಶೀಲತೆ ಮತ್ತು ರಚನಾತ್ಮಕ ಮನಸ್ಸು ಅಗತ್ಯವಾಗಿದೆ ಎಂದು ಅವರು ಹೇಳಿದರು.

ಇಲ್ಲಿನ ಲೋಕ ಕಲ್ಯಾಣ್ ಮಾರ್ಗದಲ್ಲಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಪ್ರಧಾನಿ ಮೋದಿ ಅವರು;ಬ್ರಿಡ್ಜಿಟಲ್ ನೇಷನ್; ಪುಸ್ತಕವನ್ನು ಅನಾವರಣಗೊಳಿಸಿ, ಅದರ ಮೊದಲ ಪ್ರತಿಯನ್ನು ಟಾಟಾ ಗ್ರೂಪ್ ದಿಗ್ಗಜ ರತನ್ ಟಾಟಾ ಅವರಿಗೆ ಹಸ್ತಾಂತರಿಸಿದರು, ಈ ಪುಸ್ತಕವನ್ನು ಎನ್. ಚಂದ್ರಶೇಖರನ್ ಮತ್ತು ರೂಪಾ ಪುರುಷೋತ್ತಮ್ ಬರೆದಿದ್ದಾರೆ. ಕೃತಕ ಬುದ್ಧಿಮತ್ತೆ ಮತ್ತು ಮಾನವ ಉದ್ದೇಶಗಳ ನಡುವೆ ಸೇತುವೆಯನ್ನು ನಿರ್ಮಿಸುವ ಅಗತ್ಯತೆಯ ಬಗ್ಗೆ ಅವರು ಒತ್ತಿ ಹೇಳಿದ ಪ್ರಧಾನಿ, ತಂತ್ರಜ್ಞಾನವು ಸೇತುವೆಯಾಗಿದೆಯೇ ಹೊರತು ವಿಭಜಕವಲ್ಲ ಎಂಬುದನ್ನು ಅರ್ಥಮಾಡಿಕೊಳ್ಳಬೇಕು. ತಂತ್ರಜ್ಞಾನವು;ಸಬ್ಕಾ ಸಾಥ್, ಸಬ್ಕಾ ವಿಕಾಸ್; ಸಾಧಿಸಲು ಸೇತುವೆಯಾಗಿದೆ ಎಂದು ಹೇಳಿದರು. ಇದೇ ವೇಳೆ ಅವರು, ಸಕಾರಾತ್ಮಕತೆ ಮತ್ತು ಆಶಾವಾದದಿಂದ ತುಂಬಿರುವ ದೂರದೃಷ್ಟಿಯ ಪುಸ್ತಕವನ್ನು ಹೊರತಂದಿದ್ದಕ್ಕಾಗಿ ಲೇಖಕರನ್ನು ಶ್ಲಾಘಿಸಿದರು. ತಂತ್ರಜ್ಞಾನದ ಮಹತ್ವದ ಬಗ್ಗೆ ಪುಸ್ತಕದಲ್ಲಿ ಆಳವಾಗಿ ಪ್ರಸ್ತುತಪಡಿಸಲಾಗಿದೆ. ತಂತ್ರಜ್ಞಾನವು ಲಕ್ಷಾಂತರ ಭಾರತೀಯರ ಜೀವನವನ್ನು ಸಕಾರಾತ್ಮಕವಾಗಿ ಪರಿವರ್ತಿಸುತ್ತಿರುವ ಸಮಯದಲ್ಲಿ ಪುಸ್ತಕ ಹೊರಬರುತ್ತಿರುವುದು ಶ್ಲಾಘನೀಯ ಎಂದು ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X

Advertisement

X
Kannada Prabha
www.kannadaprabha.com