ಹರಿಯಾಣ, ಮಹಾ ಮತದಾನಕ್ಕೆ ಕ್ಷಣಗಣನೆ, ಅಭ್ಯರ್ಥಿಗಳ ಭವಿಷ್ಯ ಸೋಮವಾರ ನಿರ್ಧಾರ

ಹರಿಯಾಣ ಹಾಗೂ ಮಹಾರಾಷ್ಟ್ರ ವಿಧಾನಸಭೆಗೆ ಚುನಾವಣೆಗೆ ಸೋಮವಾರ ಮತದಾನ ನಡೆಯಲಿದ್ದು, ಮುಖ್ಯಮಂತ್ರಿ ಆಕಾಂಕ್ಷಿಗಳು, ಮುಂದಿನ ಪೀಳಿಗೆಯ ರಾಜಕಾರಣಿಗಳು ಮತ್ತು ಹೊಸ ಆಕಾಂಕ್ಷಿಗಳು ಸೇರಿದಂತೆ ಸಾವಿರಾರು ಅಭ್ಯರ್ಥಿಗಳ ಭವಿಷ್ಯ ನಾಳೆ ಮತಯಂತ್ರದಲ್ಲಿ ಭದ್ರವಾಗಲಿದೆ.
ಚುನಾವಣಾ ಕರ್ತವ್ಯಕ್ಕೆ ತೆರಳುತ್ತಿರುವ ಅಧಿಕಾರಿಗಳು
ಚುನಾವಣಾ ಕರ್ತವ್ಯಕ್ಕೆ ತೆರಳುತ್ತಿರುವ ಅಧಿಕಾರಿಗಳು

ಬೆಂಗಳೂರು: ಹರಿಯಾಣ ಹಾಗೂ ಮಹಾರಾಷ್ಟ್ರ ವಿಧಾನಸಭೆಗೆ ಚುನಾವಣೆಗೆ ಸೋಮವಾರ ಮತದಾನ ನಡೆಯಲಿದ್ದು, ಮುಖ್ಯಮಂತ್ರಿ ಆಕಾಂಕ್ಷಿಗಳು, ಮುಂದಿನ ಪೀಳಿಗೆಯ ರಾಜಕಾರಣಿಗಳು ಮತ್ತು ಹೊಸ ಆಕಾಂಕ್ಷಿಗಳು ಸೇರಿದಂತೆ ಸಾವಿರಾರು ಅಭ್ಯರ್ಥಿಗಳ ಭವಿಷ್ಯ ನಾಳೆ ಮತಯಂತ್ರದಲ್ಲಿ ಭದ್ರವಾಗಲಿದೆ.

ದೇಶದ ಗಮನ ಸೆಳೆದಿರುವ ಮಹಾರಾಷ್ಟ್ರ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ-ಶಿವಸೇನೆ ಮತ್ತು ಪ್ರತಿಪಕ್ಷದ ಕಾಂಗ್ರೆಸ್-ಎನ್‌ಸಿಪಿ ನೇತೃತ್ವದ ಮಹಾಘಟಬಂಧನ ನೇತೃತ್ವದ ಮೈತ್ರಿಕೂಟದ ನಡುವೆ ನೇರ ಸ್ಪರ್ಧೆ ನಡೆಯಲಿದ್ದು, 8.98 ಕೋಟಿ ಮತದಾರರು, ಕಣದಲ್ಲಿರುವ 3, 239 ಅಭ್ಯರ್ಥಿಗಳ ಹಣೆಬರಹ ಬರೆಯಲಿದ್ದಾರೆ. 

288 ಸದಸ್ಯ ಬಲದ ಮಹಾರಾಷ್ಟ್ರ ವಿಧಾನಸಭೆಯ ಚುನಾವಣೆಯ ಜೊತೆಗೆ ಸತಾರ ಲೋಕಸಭಾ ಸ್ಥಾನಕ್ಕೂ ಉಪಚುನಾವಣೆ ನಡೆಯುತ್ತಿದೆ. 
ಆಡಳಿತಾರೂಢ ಕೇಸರಿ ಮೈತ್ರಿ ಪಡೆ, ರಾಷ್ಟ್ರೀಯತೆಯ ವಿಷಯವನ್ನು ಮುಂದಿಟ್ಟು ಬಿರುಸಿನ ಪ್ರಚಾರ ನಡೆಸಿದ್ದು, ಉತ್ತಮ ಸ್ಥಿತಿಯಲ್ಲಿದೆ. ಕಾಂಗ್ರೆಸ್ ನಲ್ಲಿ ನಾಯಕತ್ವದ ಬಿಕ್ಕಟ್ಟು ಸ್ಪಷ್ಟವಾಗಿ ಗೋಚರವಾಗಿದೆ. ಇನ್ನು ಎನ್‌ಸಿಪಿ ತನ್ನದೇ ಆದ ಸಮಸ್ಯೆಗಳನ್ನು ಎದುರಿಸುತ್ತಿದೆ.

ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಮತ್ತು ಅವರ ಪುತ್ರಿ ಮತ್ತು ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ-ವಾದ್ರಾ ಅವರು ಪ್ರಚಾರದಿಂದ ಸಂಪೂರ್ಣ ವಿಮುಖರಾಗಿದ್ದರೆ, ಅವರ ಪುತ್ರ ರಾಹುಲ್ ಗಾಂಧಿ ಕೆಲವು ಸಭೆಗಳನ್ನುದ್ದೇಶಿಸಿ ಮಾತನಾಡಿ, ಮತದಾರರನ್ನು ಸೆಳೆಯಲು ಯತ್ನಿಸಿದ್ದಾರೆ.

ಬಿಜೆಪಿ ಕಡೆಯಿಂದ ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಮತ್ತು ಬಿಜೆಪಿ ಅಧ್ಯಕ್ಷ ಅಮಿತ್ ಶಾ ಮತ್ತು ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರು ಅಬ್ಬರದ ಪ್ರಚಾರ ನಡೆಸಿ, ಮೈತ್ರಿ ಕೂಟದ ವಿರುದ್ಧ ಟೀಕಾಪ್ರಹಾರ ನಡೆಸಿದ್ದಾರೆ. ಇನ್ನು ಶಿವ ಸೇನಾ ಕಡೆಯಿಂದ, ಉದ್ಧವ್ ಠಾಕ್ರೆ ಮತ್ತು ಅವರ ಪುತ್ರ ಆದಿತ್ಯ ಕೂಡ ಅಬ್ಬರ ಪ್ರಚಾರ ನಡೆಸಿದ್ದಾರೆ. ಎನ್‌ಸಿಪಿ ವಿಷಯಕ್ಕೆ ಬಂದಾಗ ಅದರ ಸ್ಥಾಪಕ-ಅಧ್ಯಕ್ಷ ಶರದ್ ಪವಾರ್ ಪ್ರಬಲ ಶಕ್ತಿಯಾಗಿದ್ದಾರೆ.

ಇನ್ನು 90 ಸದಸ್ಯ ಬಲ ಹೊಂದಿರುವ ಹರಿಯಾಣದಲ್ಲಿ ಮುಖ್ಯಮಂತ್ರಿ ಮನೋಹರ್ ಲಾಲ್ ಖಟ್ಟರ್ ನೇತೃತ್ವದ ಬಿಜೆಪಿ ಸರ್ಕಾರ ಮತ್ತೆ ಅಧಿಕಾರಕ್ಕೆ ಬರುವ ವಿಶ್ವಾಸದಲ್ಲಿದೆ. ಪ್ರತಿಪಕ್ಷ ಕಾಂಗ್ರೆಸ್ ಸಹ ಬಿಜೆಪಿಯಿಂದ ಅಧಿಕಾರ ಕಿತ್ತಿಕೊಳ್ಳಲು ಯತ್ನಿಸುತ್ತಿದೆ.

ಮಂದಗತಿಯ ಆರ್ಥಿಕತೆ, ಗ್ರಾಮೀಣ ಜನರ ಬದುಕಿನ ಯಾತನೆ ಮತ್ತು ಕೃಷಿ ಬಿಕ್ಕಟ್ಟಿನಂತಹ ಸಮಸ್ಯೆಗಳ ಹೊರತಾಗಿಯೂ ಆಡಳಿತ ಪಕ್ಷ ಕೇಸರಿ ಮೈತ್ರಿಯನ್ನು ಸುಲಭವಾಗಿ ಪರಾಭವಗೊಳಿಸುವುದು ಕಷ್ಟ ಎಂಬ ಮಾತು ಕೇಳಿಬರುತ್ತಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com