ಭಾರತ-ಪಾಕ್ ಗಡಿಯಲ್ಲಿ ಮೂರು ಡ್ರೋನ್ ಗಳ ಪತ್ತೆ

ಪಂಜಾಬ್‌ನ ಹುಸೇನಿವಾಲಾ ಸೆಕ್ಟರ್‌ನಲ್ಲಿ ನಿಯೋಜಿಸಲಾದ ಬಿಎಸ್‌ಎಫ್ ಸಿಬ್ಬಂದಿ ಭಾರತ-ಪಾಕಿಸ್ತಾನ ಗಡಿಯಲ್ಲಿ ಮೂರು ಡ್ರೋನ್‌ಗಳನ್ನು ಪತ್ತೆ ಮಾಡಿದ್ದಾರೆ. 
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಅಮೃತಸರ್: ಪಂಜಾಬ್‌ನ ಹುಸೇನಿವಾಲಾ ಸೆಕ್ಟರ್‌ನಲ್ಲಿ ನಿಯೋಜಿಸಲಾದ ಬಿಎಸ್‌ಎಫ್ ಸಿಬ್ಬಂದಿ ಭಾರತ-ಪಾಕಿಸ್ತಾನ ಗಡಿಯಲ್ಲಿ ಮೂರು ಡ್ರೋನ್‌ಗಳನ್ನು ಪತ್ತೆ ಮಾಡಿದ್ದಾರೆ. ಗಡಿ ಭದ್ರತಾ ಪಡೆಗಳು ಸೋಮವಾರ ರಾತ್ರಿ ಪಾಕಿಸ್ತಾನದ ಕಡೆಯಿಂದ  ಬರುತ್ತಿದ್ದ ಡ್ರೋನ್‌ಗಳ ಮೇಲೆ ದಾಳಿ ನಡೆಸಿವೆ ಎಂಬ ಮಾಹಿತಿ ಬಂದಿದ್ದರೂ ಅದಿನ್ನೂ ಅಧಿಕೃತವಾಗಿಲ್ಲ.

ಈ ತಿಂಗಳ ಪ್ರಾರಂಭದಲ್ಲಿ ಬಸ್ತಿ ರಾಮ್ ಲಾಲ್, ತೆಂಡಿ ವಾಲಾ ಮತ್ತು ಹಜಾರಾ ಸಿಂಗ್ ವಾಲಾ ಗ್ರಾಮಗಳ ನಿವಾಸಿಗಳು ಡ್ರೋನ್‌ಗಳನ್ನು ಗುರುತಿಸಿದ್ದರು.ಅದಾದ ನಂತರ ಬಿಎಸ್‌ಎಫ್ ಯೋಧರಿಗೆ ಈ ಕುರಿತು ಎಚ್ಚರಿಸಲಾಗಿದೆ. ಆಗ ಬಿಎಸ್ಎಫ್ ಮತ್ತು ಪಂಜಾಬ್ ಪೊಲೀಸರು ಶೋಧ ಕಾರ್ಯಾಚರಣೆ ನಡೆಸಿದರಾದರೂ ಅನುಮಾನಾಸ್ಪದ ವಸ್ತುಗಳಾವುದೂ ಕಂಡುಬಂದಿಲ್ಲ.

ಭಾರತ-ಪಾಕ್ ಗಡಿಯಲ್ಲಿ ವಾಸಿಸುವ ಭಾರತೀಯ ನಿವಾಸಿಗಳಿಗೆ ಗಡಿಯಲ್ಲಿ ಯಾವುದೇ ಅನುಮಾನಾಸ್ಪದ ಚಲನವಲನಗಳು, ವಸ್ತುಗಳು ಕಂಡಲ್ಲಿ ತಕ್ಷಣ ಪೊಲೀಸ್ ಅಥವಾ ಬಿಎಸ್ಎಫ್ ಅಧಿಕಾರಿಗಳಿಗೆ ತಿಳಿಸಲು ಗಡಿ ಕಾವಲು ಪಡೆ  ಸಂದೇಶ ಹೇಳಿದೆ.
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com