ಪ್ರಧಾನಿ ಮೋದಿ - ನೊಬೆಲ್ ಪುರಸ್ಕೃತ ಅಭಿಜಿತ್ ಬ್ಯಾನರ್ಜಿ ಭೇಟಿ, ಮಾತುಕತೆ

ಅರ್ಥಶಾಸ್ತ್ರ ವಿಭಾಗದಲ್ಲಿ ಈ ಬಾರಿಯ ಪ್ರತಿಷ್ಠಿತ ನೊಬೆಲ್ ಪುರಸ್ಕಾರಕ್ಕೆ ಭಾಜನರಾಗಿರುವ ಅಭಿಜಿತ್  ಬ್ಯಾನರ್ಜಿ ದೆಹಲಿಯಲ್ಲಿ ಮಂಗಳವಾರ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದರು.

Published: 22nd October 2019 01:41 PM  |   Last Updated: 22nd October 2019 02:02 PM   |  A+A-


PM Modi interacts with Nobel laureate Abhijit Banerjee

ಪ್ರಧಾನಿ ಮೋದಿ ಭೇಟಿ ಮಾಡಿದ ಅಭಿಜಿತ್ ಬ್ಯಾನರ್ಜಿ

Posted By : Srinivas Rao BV
Source : UNI

ನವದೆಹಲಿ: ಅರ್ಥಶಾಸ್ತ್ರ ವಿಭಾಗದಲ್ಲಿ ಈ ಬಾರಿಯ ಪ್ರತಿಷ್ಠಿತ ನೊಬೆಲ್ ಪುರಸ್ಕಾರಕ್ಕೆ ಭಾಜನರಾಗಿರುವ ಅಭಿಜಿತ್  ಬ್ಯಾನರ್ಜಿ ದೆಹಲಿಯಲ್ಲಿ ಮಂಗಳವಾರ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದರು.

ಲೋಕ ಕಲ್ಯಾಣ್ ಮಾರ್ಗದಲ್ಲಿರುವ ಪ್ರಧಾನಿ ಮೋದಿ ಅವರ ನಿವಾಸದಲ್ಲಿ ಈ ಭೇಟಿ ನಡೆಯಿತು. ದೇಶದ ಪ್ರಸಕ್ತ  ಆರ್ಥಿಕತೆ ಸೇರಿದಂತೆ  ಹಲವು  ವಿಷಯಗಳ ಕುರಿತು ಬ್ಯಾನರ್ಜಿ, ಪ್ರಧಾನಿ ಅವರೊಂದಿಗೆ  ಚರ್ಚಿಸಿದರು ಎಂದು ವರದಿಯಾಗಿದೆ.

ಪ್ರತಿಷ್ಠಿತ ಮ್ಯಾಸಚೂಸೆಟ್ಸ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (ಎಂಐಟಿ)  ಪ್ರಾಧ್ಯಾಪಕರಾಗಿರುವ  ಭಾರತೀಯ - ಅಮೆರಿಕನ್  ನಾಗರೀಕ ಅಭಿಜಿತ್ ಅವರಿಗೆ ಅಂತಾರಾಷ್ಟ್ರೀಯ ಬಡತನ ನಿವಾರಣೆಗೆ ನವೀನ ಪರಿಹಾರ ಅನ್ವೇಷಿಸಿದ್ದಕ್ಕಾಗಿ, ಪತ್ನಿ ಎಸ್ತರ್ ಡಫ್ಲೋ ಹಾಗೂ  ಮೈಕೆಲ್ ಕ್ರಿಮರ್ ಅವರೊಂದಿಗೆ ಈ ಬಾರಿಯ ನೊಬೆಲ್ ಪ್ರಶಸ್ತಿಗೆ ಭಾಜನರಾಗಿದ್ದಾರೆ.

ಪ್ರತಿಷ್ಠಿತ ನೊಬೆಲ್ ಪ್ರಶಸ್ತಿಗೆ ಆಯ್ಕೆಯಾದ ನಂತರ ಮೊದಲ ಬಾರಿ ಅಭಿಜಿತ್ ಭಾರತಕ್ಕೆ ಭೇಟಿ ನೀಡಿದ್ದಾರೆ. ಮಂಗಳವಾರ ಸಂಜೆ ಅವರು ಕೋಲ್ಕತ್ತಾದಲ್ಲಿ  ತಮ್ಮ ತಾಯಿಯನ್ನು ಭೇಟಿಯಾಗಿ, ಅಲ್ಲಿ ಎರಡು ದಿನಗಳ ಕಾಲ ತಂಗಲಿದ್ದಾರೆ.

ಮತ್ತೊಂದೆಡೆ, ಅಭಿಜಿತ್ ಅವರಿಗೆ ನೊಬೆಲ್ ಪುರಸ್ಕಾರ ಲಭಿಸಿರುವ ಹಿನ್ನೆಲೆಯಲ್ಲಿ  ಬಿಜೆಪಿ ಹಾಗೂ ವಿರೋಧ ಪಕ್ಷ ಕಾಂಗ್ರೆಸ್ ನಾಯಕರ  ನಡುವೆ ಬಿಸಿ ಬಿಸಿ ವಾಗ್ವಾದಕ್ಕೂ ಹಾದಿ ಮಾಡಿಕೊಟ್ಟಿತ್ತು.  

ಕಾಂಗ್ರೆಸ್ ಚುನಾವಣಾ ಘೋಷಣೆ ನ್ಯಾಯ್ ಅಭಿಜಿತ್ ಅವರ ಕಲ್ಪನೆಯಾಗಿದ್ದು, ಅವರೊಬ್ಬಎಡಪಂಥೀಯ, ನಾವಣೆಯಲ್ಲಿ ಅವರ ಪರಿಕಲ್ಪನೆಯನ್ನು ದೇಶದ  ಜನರು ತಿರಸ್ಕರಿಸಿದ್ದಾರೆ ಎಂದು ಕೇಂದ್ರ ಸಚಿವ ಪಿಯೂಷ್ ಗೋಯಲ್ ಲೇವಡಿ ಮಾಡಿದ್ದರು. ಇದೇ ವೇಳೆ ರಾಹುಲ್ ಗಾಂಧಿ ಸೇರಿದಂತೆ ಕಾಂಗ್ರೆಸ್ ನಾಯಕರು ಅಭಿಜಿತ್ ಅವರ ಪರವಾಗಿ ಹೇಳಿಕೆ ನೀಡಿದ್ದರು. ನಿಮ್ಮ ಕೆಲಸಕ್ಕಾಗಿ ಭಾರತ ಹೆಮ್ಮೆ ಪಡುತ್ತದೆ ಎಂದು ರಾಹುಲ್ ಹೇಳಿದ್ದರು.

Stay up to date on all the latest ರಾಷ್ಟ್ರೀಯ news with The Kannadaprabha App. Download now
facebook twitter whatsapp