ಬಿಜೆಪಿಗೆ ಜೆಜೆಪಿ ಬೆಂಬಲ: ಹರ್ಯಾಣದಲ್ಲೂ ಅರಳಲಿದೆ ಕಮಲ!?

ಅತಂತ್ರ ವಿಧಾನಸಭೆ ಫಲಿತಾಂಶ ಪ್ರಕಟವಾಗಿದ್ದ ಹರ್ಯಾಣದಲ್ಲಿ ಯಾರು ಸರ್ಕಾರ ರಚನೆ ಮಾಡುತ್ತಾರೆ ಎಂಬ ಕುತೂಹಲಕ್ಕೆ ಬಹುತೇಕ ಉತ್ತರ ಸಿಕ್ಕಿದೆ. 
ಬಿಜೆಪಿಗೆ ಜೆಜೆಪಿ ಬೆಂಬಲ: ಹರ್ಯಾಣದಲ್ಲೂ ಅರಳಿಲಿದೆ ಕಮಲ!
ಬಿಜೆಪಿಗೆ ಜೆಜೆಪಿ ಬೆಂಬಲ: ಹರ್ಯಾಣದಲ್ಲೂ ಅರಳಿಲಿದೆ ಕಮಲ!

ಅತಂತ್ರ ವಿಧಾನಸಭೆ ಫಲಿತಾಂಶ ಪ್ರಕಟವಾಗಿದ್ದ ಹರ್ಯಾಣದಲ್ಲಿ ಯಾರು ಸರ್ಕಾರ ರಚನೆ ಮಾಡುತ್ತಾರೆ ಎಂಬ ಕುತೂಹಲಕ್ಕೆ ಬಹುತೇಕ ಉತ್ತರ ಸಿಕ್ಕಿದೆ. 

90 ವಿಧಾನಸಭಾ ಸದಸ್ಯಬಲ ಹೊಂದಿದ್ದ ಹರ್ಯಾಣದ ವಿಧಾನಸಭೆಯಲ್ಲಿ 40 ಸ್ಥಾನಗಳಲ್ಲಿ ಗೆದ್ದಿದ್ದ ಬಿಜೆಪಿ ಏಕೈಕ ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿತ್ತು. ಆದರೆ ಅಧಿಕಾರ ಹಿಡಿಯುವುದಕ್ಕೆ ಅಗತ್ಯವಿದ್ದ 45 ಶಾಸಕರ ಸಂಖ್ಯಾಬಲಕ್ಕೆ ಕೊರತೆ ಎದುರಾಗಿ ಯಾರೇ ಸರ್ಕಾರ ರಚನೆ ಮಾಡಬೇಕಾದರೂ ಪಕ್ಷೇತರರು ಅಥವಾ ಹರ್ಯಾಣದ ಪ್ರಾದೇಶಿಕ ಪಕ್ಷ ಜೆಜೆಪಿಯ ಸಹಕಾರ ಅಗತ್ಯವಾಗಿದೆ. 

ಜೆಜೆಪಿಯ ನಾಯಕ ದುಷ್ಯಂತ್ ಚೌಟಾಲ ಆರಂಭದಲ್ಲಿ ತಮ್ಮನ್ನು ಸಿಎಂ ಮಾಡುವ ಪಕ್ಷಕ್ಕೆ ನಾನು ಬೆಂಬಲ ನೀಡುತ್ತೇನೆ ಎಂದು ಹೇಳಿಕೆ ನೀಡಿದ್ದರು. ಈ ನಡುವೆ ಬಿಜೆಪಿ ಹರ್ಯಾಣದಲ್ಲಿ ಸರ್ಕಾರ ರಚನೆಗೆ ಸಿಕ್ಕ ಯಾವುದೇ ಅವಕಾಶವನ್ನೂ ಬಿಡದೇ ರಾಜಕೀಯ ತಂತ್ರ ಹೆಣೆಯುತ್ತಿದೆ. ಈಗ ಬದಲಾದ ರಾಜಕೀಯ ಸನ್ನಿವೇಶದಲ್ಲಿ, ಇತ್ತೀಚಿನ ವರದಿಯ ಪ್ರಕಾರ, ಸರ್ಕಾರ ರಚನೆಗೆ ಜೆಜೆಪಿ ಬಿಜೆಪಿಗೆ ಬೆಂಬಲ ನೀಡಲಿದೆ ಎಂಬ ಮಾಹಿತಿ ಲಭ್ಯವಾಗಿದೆ. ಈ ನಡುವೆ ಹರ್ಯಾಣದ ಹಾಲಿ ಸಿಎಂ ಮನೋಹರ್ ಲಾಲ್ ಖಟ್ಟರ್ ರಾಜ್ಯಪಾಲರನ್ನು ಭೇಟಿಯಾಗಿ ಸರ್ಕಾರ ರಚನೆಗೆ ಹಕ್ಕು ಮಂಡನೆ ಮಾಡಲಿದ್ದಾರೆ ಎಂಬುದು ಸದ್ಯದ ತಾಜ ಸುದ್ದಿ


ನಾಳೆ ಕಾರ್ಯಕಾರಿ ಸಮಿತಿ ಸಭೆ

ಇತ್ತ ಹರ್ಯಾಣದಲ್ಲಿ ಸರ್ಕಾರ ರಚನೆಗೆ ದೆಹಲಿ ಬಿಜೆಪಿ ನಾಯಕರು ಕಾರ್ಯತಂತ್ರ ಹೆಣೆಯುತ್ತಿದ್ದು, ಬಿಜೆಪಿ ಕಾರ್ಯಾಧ್ಯಕ್ಷ ಜೆಪಿ ನಡ್ಡಾ ನೇತೃತ್ವದಲ್ಲಿ ಸಭೆ ನಡೆದಿದೆ. ಜೆಜೆಪಿ ಹಾಗೂ ಪಕ್ಷೇತರರ ಬೆಂಬಲ ಪಡೆದು ಸರ್ಕಾರ ರಚನೆಗೆ ಬಿಜೆಪಿ ಚಿಂತನೆ ನಡೆಸಿದ್ದು, ಮೊದಲನೆಯದಾಗಿ ರಾಜ್ಯಪಾಲರಿಂದ ಸರ್ಕಾರ ರಚನೆಗೆ ಆಹ್ವಾನ ಪಡೆಯುವುದು ನಂತರ 4-5 ದಿನಗಳ ಸಮಯಾವಕಾಶ ತೆಗೆದುಕೊಳ್ಳುವುದು, ಈ ಅವಧಿಯಲ್ಲಿ ಪಕ್ಷೇತರರು-ಜೆಜೆಪಿ ಬೆಂಬಲ ಗಳಿಸುವ ಯೋಜನೆ ಬಿಜೆಪಿಯದ್ದಾಗಿದೆ. ನಾಳೆ ನಡೆಯಲಿರುವ ಬಿಜೆಪಿ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಸರ್ಕಾರ ರಚನೆ ಬಗ್ಗೆ ಚರ್ಚೆ ನಡೆಯಲಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com