ಅನರ್ಹ ಶಾಸಕರ ಮರು ವಿಚಾರಣೆ ನಡೆಸಿ, ಹೊಸ ತೀರ್ಮಾನ ತೆಗೆದುಕೊಳ್ಳಲು ಸಿದ್ಧ: ಸುಪ್ರೀಂಗೆ ಸ್ಪೀಕರ್ ಕಾಗೇರಿ

ವಿಧಾನಸಭೆ ಮಾಜಿ ಸ್ಪೀಕರ್ ರಮೇಶ್ ಕುಮಾರ್ ಅವರು ಅನರ್ಹಗೊಳಿಸಿರುವ 17 ಶಾಸಕರನ್ನು ಮರು ವಿಚಾರಣೆ ನಡೆಸಿ, ಹೊಸ ತೀರ್ಮಾನ ತೆಗೆದುಕೊಳ್ಳಲು ತಾವು ಸಿದ್ಧ ಎಂದು ಹಾಲಿ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ಗುರುವಾರ ಸುಪ್ರೀಂ ಕೋರ್ಟ್ ಗೆ ತಿಳಿಸಿದ್ದಾರೆ.
ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ
ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ

ನವದೆಹಲಿ: ವಿಧಾನಸಭೆ ಮಾಜಿ ಸ್ಪೀಕರ್ ರಮೇಶ್ ಕುಮಾರ್ ಅವರು ಅನರ್ಹಗೊಳಿಸಿರುವ 17 ಶಾಸಕರನ್ನು ಮರು ವಿಚಾರಣೆ ನಡೆಸಿ, ಹೊಸ ತೀರ್ಮಾನ ತೆಗೆದುಕೊಳ್ಳಲು ತಾವು ಸಿದ್ಧ ಎಂದು ಹಾಲಿ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ಗುರುವಾರ ಸುಪ್ರೀಂ ಕೋರ್ಟ್ ಗೆ ತಿಳಿಸಿದ್ದಾರೆ.

ಅನರ್ಹತೆ ಪ್ರಶ್ನಿಸಿ 17 ಶಾಸಕರು ಸಲ್ಲಿಸಿರುವ ಅರ್ಜಿ ವಿಚಾರಣೆ ಸುಪ್ರೀಂ ಕೋರ್ಟ್‍ನಲ್ಲಿ ಮುಂದುವರೆದಿದ್ದು, ಇಂದು ಸ್ಪೀಕರ್ ಕಾಗೇರಿ ಪರ ವಾದ ಮಂಡಿಸಿದ ತುಷಾರ್ ಮೆಹ್ತಾ ಅವರು, ಈ ಪ್ರಕರಣದ ಬಗ್ಗೆ ಹೊಸದಾಗಿ ತೀರ್ಮಾನ ಕೈಗೊಳ್ಳಲು ಅವಕಾಶವಿದೆ ಮತ್ತು ಅನರ್ಹ ಶಾಸಕರನ್ನು ಮರು ವಿಚಾರಣೆ ನಡೆಸಿ, ಹೊಸ ನಿರ್ಧಾರ ತೆಗೆದುಕೊಳ್ಳಲು ಹಾಲಿ ಸ್ಪೀಕರ್ ಗೆ ಯಾವುದೇ ಸಮಸ್ಯೆ ಇಲ್ಲ ಎಂದರು. ಮಾಜಿ ಸ್ಪೀಕರ್ ತೀರ್ಮಾನವನ್ನು ಮರುಪರಿಶೀಲನೆಗೆ ಕಳುಹಿಸಬಹುದಾಗಿದೆ. ಶಾಸಕರು ನೀಡಿದ ರಾಜೀನಾಮೆಯನ್ನು ತಿರಸ್ಕರಿಸಲು ಸ್ಪೀಕರ್ ಅವರಿಗೆ ಯಾವುದೇ ಕಾರಣಗಳಿರಲಿಲ್ಲ. ಹಾಗಾಗಿ ಈ ಪ್ರಕರಣವನ್ನು ಮರು ಪರಿಶೀಲನೆಗೆ ಕಳುಹಿಸಬಹುದಾಗಿದೆ ಎಂದು ನ್ಯಾಯಾಲಯಕ್ಕೆ ತಿಳಿಸಿದರು.

ಜೆಡಿಎಸ್ ಪರ ವಕೀಲರಾದ ರಾಜೀವ್ ಧವನ್ ಇಂದು ತಮ್ಮ ವಾದ ಮಂಡಿಸಿ, 17 ಶಾಸಕರ ಅನರ್ಹ ಮಾಡಿರುವ ಸ್ಪೀಕರ್ ಅವರ ಕ್ರಮ ಸರಿಯಾಗಿಯೇ ಇದೆ. ಏಕ ಕಾಲದಲ್ಲಿ 17 ಶಾಸಕರು ರಾಜೀನಾಮೆ ನೀಡಿದ್ದಾರೆ ಎಂದರೆ ಇದರಲ್ಲಿ ಏನೋ ದುರುದ್ದೇಶವಿದೆ .ಹಾಗಾಗಿ ಸ್ಪೀಕರ್ ಅನರ್ಹತೆ ಕ್ರಮ ಕೈಗೊಂಡಿದ್ದಾರೆ ಎಂದರು.

ಸ್ಪೀಕರ್ ಕೈಗೊಂಡಿರುವ ಕ್ರಮ ನಿಯಮಬದ್ಧವಾಗಿದೆ. ರಾಜೀನಾಮೆ ನೀಡುವುದು ನಮ್ಮ ಹಕ್ಕು ಎಂದು ಶಾಸಕರು ಹೇಳಿದ್ದಾರೆ. ಶಾಸಕರು ಸರ್ಕಾರಿ ಅಧಿಕಾರಿಗಳಲ್ಲ. ಅವರು ಜನಪ್ರತಿನಿಧಿಗಳು. ಹಾಗಾಗಿ ಈ ಪ್ರಕರಣವನ್ನು ಸಾಂವಿಧಾನಿಕ ಪೀಠಕ್ಕೆ ವರ್ಗಾಯಿಸಿ ವಿಸ್ತತ ಚರ್ಚೆ ನಡೆದು ಅಲ್ಲಿ ನಿರ್ಣಯಿಸುವುದು ಸೂಕ್ತ ಎಂಬ ಅಭಿಪ್ರಾಯವನ್ನು ವ್ಯಕ್ತಪಡಿಸಿದರು.

ಇನ್ನು ಅನರ್ಹ ಶಾಸಕ ಆನಂದ್ ಸಿಂಗ್ ಪರ ವಾದ ಮಂಡಿಸಿದ ಸಜ್ಜನ್ ಪೂವಯ್ಯ ಅವರು, ಆನಂದ್ ಸಿಂಗ್ ಅವರು, ಜುಲೈ 1ರಂದೇ ರಾಜೀನಾಮೆ ಸಲ್ಲಿಸಿದ್ದರು. ಜಿಂದಾಲ್‍ಗೆ ಜಮೀನು ನೀಡಲು ಮುಂದಾದ ಸಮ್ಮಿಶ್ರ ಸರ್ಕಾರದ ನಡೆ ವಿರೋಧಿಸಿ ರಾಜೀನಾಮೆ ನೀಡಿದ್ದರು. ನನ್ನ ಕಕ್ಷಿದಾರರು ನಿಯಮಬದ್ಧವಾಗಿ ರಾಜೀನಾಮೆ ನೀಡಿದ್ದಾರೆ. ಅವರು ಪೂನಾಕ್ಕಾಗಲಿ, ಬಾಂಬೆಗಾಗಲಿ ಹೋಗಿ ಬೇರೆಯವರೊಂದಿಗೆ ಗುರುತಿಸಿಕೊಂಡಿಲ್ಲ ಎಂದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com