ತಮಿಳು ನಾಡು: ಬೋರ್ ವೆಲ್ ಗುಂಡಿಗೆ ಬಿದ್ದ ಮಗು: ಸತತ 16 ಗಂಟೆಯಿಂದ ನಡೆಯುತ್ತಿದೆ ರಕ್ಷಣಾ ಕಾರ್ಯ 

ತಮಿಳು ನಾಡಿನ ನಡುಕ್ಕಟುಪಟ್ಟಿ ಗ್ರಾಮದಲ್ಲಿ ಆಟವಾಡುತ್ತಿದ್ದ 2 ವರ್ಷದ ಮಗುವೊಂದು ಆಕಸ್ಮಿಕವಾಗಿ ಬೋರ್​​ವೆಲ್​ ಗುಂಡಿಗೆ ಬಿದ್ದಿದ್ದು ರಕ್ಷಣಾ ಕಾರ್ಯ ಸತತ 16 ಗಂಟೆಗಳಿಂದ ಮುಂದುವರಿದಿದೆ. 

Published: 26th October 2019 12:08 PM  |   Last Updated: 26th October 2019 12:46 PM   |  A+A-


Rescue operations are in full flow to rescue Sujith alive.

ಮುಂದುವರಿದ ರಕ್ಷಣಾ ಕಾರ್ಯ

Posted By : Sumana Upadhyaya
Source : The New Indian Express

ಚೆನ್ನೈ: ತಮಿಳು ನಾಡಿನ ನಡುಕ್ಕಟುಪಟ್ಟಿ ಗ್ರಾಮದಲ್ಲಿ ಆಟವಾಡುತ್ತಿದ್ದ 2 ವರ್ಷದ ಮಗುವೊಂದು ಆಕಸ್ಮಿಕವಾಗಿ ಬೋರ್​​ವೆಲ್​ ಗುಂಡಿಗೆ ಬಿದ್ದಿದ್ದು ರಕ್ಷಣಾ ಕಾರ್ಯ ಸತತ 16 ಗಂಟೆಗಳಿಂದ ಮುಂದುವರಿದಿದೆ. ಅಗ್ನಿಶಾಮಕ ಮತ್ತು ರಕ್ಷಣಾ ಇಲಾಖೆ ಸಿಬ್ಬಂದಿ ನಿನ್ನೆ ಸಾಯಂಕಾಲದಿಂದ ಮಗುವನ್ನು ಸುರಕ್ಷಿತವಾಗಿ ಹೊರತೆಗೆಯಲು ಹರಸಾಹಸಪಡುತ್ತಿದ್ದಾರೆ.


ಸುಜಿತ್ ಎಂಬ 2 ವರ್ಷದ ಮಗು ತನ್ನ ಮನೆಯ ಮುಂದಿರುವ 600 ಅಡಿ ಆಳದ ಬೋರ್ ವೆಲ್ ಗೆ ಬಿದ್ದಿದ್ದು ಸ್ಥಳದಲ್ಲಿ ಜಮಾಯಿಸಿರುವ ನೆರೆಹೊರೆಯ ಗ್ರಾಮಗಳ ಸಾವಿರಕ್ಕೂ ಹೆಚ್ಚು ಜನರು ಸೇರಿ ಮಗು ಸಾವನ್ನು ಗೆದ್ದು ಬದುಕಿ ಮೇಲೆ ಬರಲಿ ಎಂದು ಪ್ರಾರ್ಥಿಸುತ್ತಿದ್ದಾರೆ.


ಸಿಬ್ಬಂದಿಗೆ ಕಾರ್ಯದಲ್ಲಿ ತಿರುಚಿ, ಕೊಯಂಬತ್ತೂರು, ನಮಕ್ಕಲ್ ಮತ್ತು ಮದುರೈಯ ಹಲವು ಸರ್ಕಾರೇತರ ಸಂಘಟನೆಗಳು ಕೂಡ ಸಾಥ್ ನೀಡುತ್ತಿದ್ದಾರೆ. ರಕ್ಷಣಾ ಕಾರ್ಯ ನಡೆಸುತ್ತಿರುವ ವೇಳೆ ಮಗು ಮೂರು ಬಾರಿ ಹಗ್ಗಕ್ಕೆ ಬಂದಿದ್ದರೂ ಮೇಲೆತ್ತಲು ಸಾಧ್ಯವಾಗಿಲ್ಲ.


ನಿನ್ನೆ ಸಾಯಂಕಾಲ ಮನೆಯ ಮುಂದೆ ಆಟವಾಡುತ್ತಿದ್ದ ಮಗು ಕಾಣೆಯಾದಾಗಲೇ ಪೋಷಕರಿಗೆ ಮಗು ಬೋರ್ ವೆಲ್ ಗೆ ಬಿದ್ದಿದೆ ಎಂದು ಗೊತ್ತಾಗಿರುವುದು. ಇದನ್ನು 5 ವರ್ಷಗಳ ಹಿಂದೆ ಕೊರೆಯಲಾಗಿತ್ತು. ತಕ್ಷಣ ಪೊಲೀಸರಿಗೆ ವಿಷಯ ತಲುಪಿಸಲಾಯಿತು. ಅವರು ಜಿಲ್ಲಾಡಳಿತಕ್ಕೆ ಕರೆ ಮಾಡಿದರು. ಕೂಡಲೇ ಅಗ್ನಿಶಾಮಕ ಮತ್ತು ರಕ್ಷಣಾ ಸಿಬ್ಬಂದಿ ಸ್ಥಳಕ್ಕೆ ಧಾವಿಸಿದರು.

ಈ ಮಧ್ಯೆ 10 ಅಡಿ ಆಳದಲ್ಲಿ ಬಂಡೆ ಸಿಕ್ಕಿದ್ದರಿಂದ ರಕ್ಷಣಾ ಕಾರ್ಯಾಚರಣೆಗೆ ಅಡಚಣೆ ಉಂಟಾಗಿತ್ತು. ರಾತ್ರಿಯಿಡೀ ಕಾರ್ಯಾಚರಣೆ ಮುಂದುವರೆಸಿರುವ ಸಿಬ್ಬಂದಿ, ಬಾಲಕನ ರಕ್ಷಣೆಗಾಗಿ ಹರಸಾಹಸ ಪಡುತ್ತಿದ್ದಾರೆ. ಆರಂಭದಲ್ಲಿ ರಕ್ಷಣಾ ಸಿಬ್ಬಂದಿಗೆ ಮಗು 27 ಅಡಿ ಆಳದಲ್ಲಿ ಸಿಕ್ಕಿದ್ದನಂತೆ. ಆದರೆ ಮಣ್ಣು ಕುಸಿಯುತ್ತಾ ಹೋಗಿ, ಮಣ್ಣು ಒದ್ದೆಯಾಗಿದ್ದರಿಂದ 70 ಅಡಿ ಆಳಕ್ಕೆ ಮಗು ಜಾರಿ ಹೋದನು. ಈಗಾಗಲೇ 68 ಅಡಿ ಆಳ ಕೊರೆದಿದ್ದೇವೆ ಎನ್ನುತ್ತಾರೆ ಆರೋಗ್ಯ ಸಚಿವ ಸಿ ವಿಜಯಭಾಸ್ಕರ್.

Stay up to date on all the latest ರಾಷ್ಟ್ರೀಯ news
Poll
HD Kumaraswamy

ಹಿಂದಿ ಗೊತ್ತಿರುವುದರಿಂದ ರಾಷ್ಟ್ರ ರಾಜಕಾರಣದಲ್ಲಿ ಉತ್ತರ ಭಾರತದ ನಾಯಕರಿಗೆ ದಕ್ಷಿಣದವರಿಗಿಂತ ಹೆಚ್ಚಿನ ಪ್ರಯೋಜನ ಆಗುತ್ತದೆ ಎಂದು ಕುಮಾರಸ್ವಾಮಿ ಹೇಳಿದ್ದಾರೆ.


Result
ಸರಿ
ತಪ್ಪು
ಗೊತ್ತಿಲ್ಲ
flipboard facebook twitter whatsapp