ಮನ್ ಕಿ ಬಾತ್: ಭಾರತೀಯ ಹಬ್ಬಗಳನ್ನು ಜನಪ್ರಿಯಗೊಳಿಸಿ- ಜನತೆಗೆ ಪ್ರಧಾನಿ ಮೋದಿ

ದೇಶದಾದ್ಯಂತ ಇಂದು ದೀಪಾವಳಿ ಹಬ್ಬವನ್ನು ಆಚರಿಸಲಾಗುತ್ತಿದ್ದು, ಉತ್ಸವದ ಪ್ರವಾಸೋದ್ಯಮ ನಡಿಸಿ, ನಮ್ಮ ಹಬ್ಬಗಳನ್ನು ಜನಪ್ರಿಯಗೊಳಿಸಿ ಮತ್ತು ಇತರೆ ರಾಜ್ಯ ಹಾಗೂ ಇತರೆ ದೇಶಗಳ ಜನರನ್ನು ಆಹ್ವಾನಿಸಿ ಅವರೊಂದಿಗೆ ಹಬ್ಬವನ್ನು ಆಚರಿಸಿ ಎಂದು ಪ್ರಧಾನಿ ಮೋದಿಯವರು ಭಾನುವಾರ ಹೇಳಿದ್ದಾರೆ. 
ಪ್ರಧಾನಿ ಮೋದಿ
ಪ್ರಧಾನಿ ಮೋದಿ

ನವದೆಹಲಿ: ದೇಶದಾದ್ಯಂತ ಇಂದು ದೀಪಾವಳಿ ಹಬ್ಬವನ್ನು ಆಚರಿಸಲಾಗುತ್ತಿದ್ದು, ಉತ್ಸವದ ಪ್ರವಾಸೋದ್ಯಮ ನಡಿಸಿ, ನಮ್ಮ ಹಬ್ಬಗಳನ್ನು ಜನಪ್ರಿಯಗೊಳಿಸಿ ಮತ್ತು ಇತರೆ ರಾಜ್ಯ ಹಾಗೂ ಇತರೆ ದೇಶಗಳ ಜನರನ್ನು ಆಹ್ವಾನಿಸಿ ಅವರೊಂದಿಗೆ ಹಬ್ಬವನ್ನು ಆಚರಿಸಿ ಎಂದು ಪ್ರಧಾನಿ ಮೋದಿಯವರು ಭಾನುವಾರ ಹೇಳಿದ್ದಾರೆ. 

58ನೇ ರೇಡಿಯೋ ಕಾರ್ಯಕ್ರಮ ಮನ್ ಕಿ ಬಾತ್ ನಲ್ಲಿ ಮಾತನಾಡಿರುವ ಅವರು, ಉತ್ಸವ ಪ್ರವಾಸೋದ್ಯಮ ಜಾಗತಿಕವಾಗಿ ತನ್ನದೇ ಆದ ಆಕರ್ಷಣೆಯನ್ನು ಹೊಂದಿದೆ. ಉತ್ಸವಗಳ ಪ್ರವಾಸೋದ್ಯಮ ನಡೆಸುವ ಸಾಧ್ಯತೆಗಳು ಭಾರತದ ನೆಲದಲ್ಲಿದೆ. ನಮ್ಮ ಹಬ್ಬಗಳಾದ ಹೋಳಿ, ದೀಪಾವಳಿ, ಓಣಂ, ಪೊಂಗಲ್ ಹಾಗೂ ಬಿಹು ಸೇರಿದಂತೆ ಪ್ರತೀ ಹಬ್ಬಗಳನ್ನು ಜನಪ್ರಿಯಗೊಳಿಸಬೇಕೆಂದು ಹೇಳಿದ್ದಾರೆ. 

ಹಬ್ಬಗಳ ಉತ್ಸವ ನಡೆಸಿ ಅದಕ್ಕೆ ಇತರೆ ರಾಜ್ಯಗಳ ಜನತೆ ಹಾಗೂ ಇತರೆ ದೇಶಗಳ ಜನತೆಯನ್ನು ಆಹ್ವಾನಿಸಿ. ದೇಶದ ಹಬ್ಬಗಳನ್ನು ಜನಪ್ರಿಯಗೊಳಿಸುವಲ್ಲಿ ಅನಿವಾಸಿ ಭಾರತೀಯ ಪಾತ್ರ ಮಹತ್ತರವಾಗಿರುತ್ತದೆ ಎಂದು ತಿಳಿಸಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com