ರಾಜಸ್ಥಾನ: ಪತಿ ಕಪ್ಪು ಬಣ್ಣ ಎಂದು ನಿಂದಿಸಿದ್ದಕ್ಕೆ ಆತ್ಮಹತ್ಯೆಗೆ ಶರಣಾದ ನವ ವಿವಾಹಿತೆ!

ಪತಿ ಸದಾ ತನ್ನನ್ನು ಕಪ್ಪು ಸುಂದರಿ ಎಂದು ನಿಂದಿಸಿದ್ದಕ್ಕೆ ಮನನೊಂದು 21 ವರ್ಷದ ನವ ವಿವಾಹಿತೆ ಆತ್ಮಹತ್ಯೆಗೆ ಶರಣಾಗಿರುವ ಘಟನೆ ರಾಜಸ್ಥಾನದ ಜಾಲ್ವಾರ್ ಜಿಲ್ಲೆಯ ಬನ್ಸಕೊಯಾರಾ ಗ್ರಾಮದಲ್ಲಿ ನಡೆದಿದೆ.

Published: 29th October 2019 08:24 PM  |   Last Updated: 29th October 2019 08:24 PM   |  A+A-


RepresentationalPurpose

ಸಾಂದರ್ಭಿಕ ಚಿತ್ರ

Posted By : Lingaraj Badiger
Source : PTI

ನವದೆಹಲಿ: ಪತಿ ಸದಾ ತನ್ನನ್ನು ಕಪ್ಪು ಸುಂದರಿ ಎಂದು ನಿಂದಿಸಿದ್ದಕ್ಕೆ ಮನನೊಂದು 21 ವರ್ಷದ ನವ ವಿವಾಹಿತೆ ಆತ್ಮಹತ್ಯೆಗೆ ಶರಣಾಗಿರುವ ಘಟನೆ ರಾಜಸ್ಥಾನದ ಜಾಲ್ವಾರ್ ಜಿಲ್ಲೆಯ ಬನ್ಸಕೊಯಾರಾ ಗ್ರಾಮದಲ್ಲಿ ನಡೆದಿದೆ.

ಆರು ತಿಂಗಳ ಹಿಂದಷ್ಟೇ ದಿನೇಶ್ ಲೋಧಾ ಎಂಬುವವರ ಜತೆ ವಿವಾಹವಾಗಿದ್ದ ಮಂಗಿಬಾಯಿ ಎಂಬ ಯುವತಿ ತಮ್ಮ ಮನೆಯ ಮುಂದಿನ ಬಾವಿಗೆ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. 

ಬಾವಿಗೆ ಜಿಗಿದಿದ್ದ ಮಂಗಿಬಾಯಿಯನ್ನು ಹೊರ ತೆಗೆದು ಕೂಡಲೇ ಆಸ್ಪತ್ರೆಗೆ ದಾಖಲಿಸಲಾಗಿದೆ. ಆದರೆ ಮಹಿಳೆ ದಾರಿ ಮಧ್ಯೆಯೇ ಮೃತಪಟ್ಟಿದ್ದಾರೆ  ಎಂದು ಸ್ಟೇಷನ್ ಹೌಸ್ ಆಫೀಸರ್ (ಎಸ್‌ಎಚ್‌ಒ) ಬಲ್ವೀರ್ ಸಿಂಗ್ ಹೇಳಿದ್ದಾರೆ.

ಈ ಸಂಬಂಧ ಮಹಿಳೆಯ ಪತಿ ದಿನೇಶ್ ಲೋಧಾ ವಿರುದ್ಧ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 306 (ಆತ್ಮಹತ್ಯೆಗೆ ಪ್ರಚೋದನೆ ನೀಡಿದ) ಯ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ತನಿಖೆಯನ್ನು ಉಪ ಪೊಲೀಸ್ ವರಿಷ್ಠಾಧಿಕಾರಿಗೆ (ಡಿಎಸ್ಪಿ) ಹಸ್ತಾಂತರಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಮಹಿಳೆ ಮದುವೆಯಾದಾಗಿನಿಂದಲೂ ಆಕೆ ಪತಿ ಪದೆ ಪದೆ ಮೈ ಬಣ್ಣದ ಬಗ್ಗೆ ನಿಂದಿಸುತ್ತಿದ್ದರು ಎನ್ನಲಾಗಿದೆ.

Stay up to date on all the latest ರಾಷ್ಟ್ರೀಯ news
Poll
IPL2020

ಚೀನಾದ ಪ್ರಾಯೋಜಕರೊಂದಿಗಿನ ಒಪ್ಪಂದವನ್ನು ಮುಂದುವರಿಸಿರುವ ಕಾರಣ ಭಾರತೀಯರು ಐಪಿಎಲ್ ಅನ್ನು ಬಹಿಷ್ಕರಿಸಬೇಕೆಂದು ಸ್ವದೇಶಿ ಜಾಗರನ್ ಮಂಚ್ ಹೇಳಿದೆ. ನೀವು ಏನಂತೀರಿ?


Result
ಸರಿ
ತಪ್ಪು
ಗೊತ್ತಿಲ್ಲ
flipboard facebook twitter whatsapp