ಸುಪ್ರೀಂ ಕೋರ್ಟ್ ಮುಂದಿನ ಸಿಜೆಐ ನ್ಯಾ.ಶರದ್ ಅರವಿಂದ್ ಬೊಬ್ಡೆ: ರಾಷ್ಟ್ರಪತಿ ಅಂಕಿತ 

ಸುಪ್ರೀಂ ಕೋರ್ಟ್ ನ ಮುಂದಿನ ಮುಖ್ಯ ನ್ಯಾಯಾಧೀಶರಾಗಿ ನ್ಯಾಯಮೂರ್ತಿ ಶರದ್ ಅರವಿಂದ್ ಬೊಬ್ಡೆ (ಎಸ್.ಎ.ಬೊಬ್ಡೆ) ನೇಮಕಗೊಂಡಿದ್ದಾರೆ.
ನ್ಯಾಯಮೂರ್ತಿ ಶರದ್ ಅರವಿಂದ್ ಬೊಬ್ಡೆ
ನ್ಯಾಯಮೂರ್ತಿ ಶರದ್ ಅರವಿಂದ್ ಬೊಬ್ಡೆ

ನವೆಂಬರ್ 18ರಂದು ಅಧಿಕಾರ ಸ್ವೀಕಾರ 

ನವದೆಹಲಿ: ಸುಪ್ರೀಂ ಕೋರ್ಟ್ ನ ಮುಂದಿನ ಮುಖ್ಯ ನ್ಯಾಯಾಧೀಶರಾಗಿ ನ್ಯಾಯಮೂರ್ತಿ ಶರದ್ ಅರವಿಂದ್ ಬೊಬ್ಡೆ (ಎಸ್.ಎ.ಬೊಬ್ಡೆ)ನೇಮಕಗೊಂಡಿದ್ದಾರೆ. ಅವರು ಮುಂದಿನ ತಿಂಗಳು ನವೆಂಬರ್ 18ರಂದು ಅಧಿಕಾರ ಸ್ವೀಕರಿಸಲಿದ್ದಾರೆ.


ತಮ್ಮ ಉತ್ತರಾಧಿಕಾರಿಯಾಗಿ ನ್ಯಾಯಮೂರ್ತಿ ಅರವಿಂದ್ ಬೊಬ್ಡೆಯವರನ್ನು ನೇಮಕ ಮಾಡುವಂತೆ ನಿರ್ಗಮಿತ ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯ್ ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಿದ್ದರು. ಸರ್ಕಾರ ಅವರ ಹೆಸರನ್ನು ಅಂತಿಮಗೊಳಿಸಿ ಸಹಿಗೆ ರಾಷ್ಟ್ರಪತಿ ಬಳಿ ಕಳುಹಿಸಿತ್ತು.


ಇಂದು ನೇಮಕಾತಿ ಆದೇಶಕ್ಕೆ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಸಹಿ ಹಾಕಿದ್ದಾರೆ.ಈ ಕುರಿತ ಅಧಿಕೃತ ಅಧಿಸೂಚನೆ ಇನ್ನು ಕೆಲವೇ ಹೊತ್ತುಗಳಲ್ಲಿ ಬಿಡುಗಡೆಯಾಗಲಿದೆ. 


ನ್ಯಾಯಮೂರ್ತಿ ಬೊಬ್ಡೆ ಅವರು ಮುಂದಿನ 17 ತಿಂಗಳುಗಳ ಕಾಲ ಸುಪ್ರೀಂ ಕೋರ್ಟ್ ಸಿಜೆಐ ಆಗಿ ಕಾರ್ಯನಿರ್ವಹಿಸಲಿದ್ದಾರೆ. 2021ರ ಏಪ್ರಿಲ್ 23ರಂದು ಅವರ ಅಧಿಕಾರ ಅಂತ್ಯವಾಗಲಿದೆ. 


ನ್ಯಾಯಮೂರ್ತಿಯಿಂದ ಸಿಜೆಐವರೆಗೆ: ಜಸ್ಟೀಸ್ ಬೊಬ್ಡೆಯವರು ಮುಂಬೈ ಹೈಕೋರ್ಟ್ ನ ಹೆಚ್ಚುವರಿ ನ್ಯಾಯಾಧೀಶರಾಗಿ 2000ನೇ ಇಸವಿಯಲ್ಲಿ ಅಧಿಕಾರ ವಹಿಸಿಕೊಂಡರು. ಅಕ್ಟೋಬರ್ 2012ರಲ್ಲಿ ಮಧ್ಯಪ್ರದೇಶ ಹೈಕೋರ್ಟ್ ನ ಮುಖ್ಯ ನ್ಯಾಯಾಧೀಶರಾಗಿ ಅಧಿಕಾರವಹಿಸಿಕೊಂಡಿದ್ದರು. 2013ರಲ್ಲಿ ನ್ಯಾಯಮೂರ್ತಿ ಕಬೀರ್ ಅವರು ನ್ಯಾಯಮೂರ್ತಿ ಬೊಬ್ಡೆ ಅವರನ್ನು ಸುಪ್ರೀಂ ಕೋರ್ಟ್ ನ್ಯಾಯಾಧೀಶರಾಗಿ ಬಡ್ತಿ ಹೊಂದುವಲ್ಲಿ ಕಾರಣಕರ್ತರಾದರು.


ಜಸ್ಟೀಸ್ ಬೊಬ್ಡೆ ನಿರ್ವಹಿಸಿದ್ದ ವಿವಾದಿತ ಕೇಸುಗಳು: ಸುಪ್ರೀಂ ಕೋರ್ಟ್ ಸಿಜೆಐ ರಂಜನ್ ಗೊಗೊಯ್ ವಿರುದ್ಧ ಲೈಂಗಿಕ ಕಿರುಕುಳ ಆರೋಪ ಕೇಳಿಬಂದು ಕೇಸು ದಾಖಲಾದಾಗ ಅದರ ವಿಚಾರಣೆ ನಡೆಸಿದ್ದ ತಂಡದಲ್ಲಿ ಜಸ್ಟೀಸ್ ಬೊಬ್ಡೆ ಕೂಡ ಇದ್ದರು. ಇತ್ತೀಚೆಗೆ ಬಾಬ್ರಿ ಮಸೀದಿ ಭೂ ವಿವಾದ ಕೇಸಿನ ವಿಚಾರಣೆಯನ್ನು ಮುಗಿಸಿದ್ದ ಐವರು ನ್ಯಾಯಾಧೀಶರನ್ನೊಳಗೊಂಡ ಸಾಂವಿಧಾನಿಕ ಪೀಠದಲ್ಲಿ ಜಸ್ಟೀಸ್ ಬೊಬ್ಡೆ ಕೂಡ ಇದ್ದರು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com