ನೀಲಿ ಚಿತ್ರದ ಫೋಟೋ ತೋರಿಸಿ ಕಾಶ್ಮೀರಿ ಯುವಕ ಎಂದ ಪಾಕ್ ಮಾಜಿ ರಾಯಭಾರಿ!

ಪೋರ್ನ್ ತಾರೆಯನ್ನು ಗಾಯಗೊಂಡಿರುವ ಕಾಶ್ಮೀರಿ ಯುವಕ ಎಂದು ಟ್ವೀಟ್ ಮಾಡುವ ಮೂಲಕ ಭಾರತದಲ್ಲಿನ ಪಾಕಿಸ್ತಾನದ ಮಾಜಿ ರಾಯಭಾರಿ ಅಬ್ದುಲ್ ಬಸಿತ್ ಪಾಕಿಸ್ತಾನಕ್ಕೆ ಮುಜುಗರವನ್ನುಂಟು ಮಾಡಿದ್ದಾರೆ.  
ಅಬ್ದುಲ್ ಬಸಿತ್
ಅಬ್ದುಲ್ ಬಸಿತ್

ನವದೆಹಲಿ: ಪೋರ್ನ್ ತಾರೆಯನ್ನು ಗಾಯಗೊಂಡಿರುವ ಕಾಶ್ಮೀರಿ ಯುವಕ ಎಂದು ಟ್ವೀಟ್ ಮಾಡುವ ಮೂಲಕ ಭಾರತದಲ್ಲಿನ ಪಾಕಿಸ್ತಾನದ ಮಾಜಿ ರಾಯಭಾರಿ ಅಬ್ದುಲ್ ಬಸಿತ್ ಪಾಕಿಸ್ತಾನಕ್ಕೆ ಮುಜುಗರವನ್ನುಂಟು ಮಾಡಿದ್ದಾರೆ. 

ಅಬ್ದುಲ್ ಬಸಿತ್ ಅವರಿಗೆ ಪೋರ್ನ್ ತಾರೆ ಜಾನಿ ಸಿನ್ಸ್ ಅವರ ಭಾವ ಚಿತ್ರದ ದೊರಕಿದೆ. ಕಾಶ್ಮೀರದಲ್ಲಿ ಭಾರತೀಯ ಪಡೆ ಸಿಡಿಸುವ ಗುಂಡಿನ ತುಣುಕು ಬಡಿದು ಗಾಯಗೊಂಡಿರುವ ಕಾಶ್ಮೀರಿ ಯುವಕ ಎಂದು ಈ ಚಿತ್ರವನ್ನು ಭಾವಿಸಿದ್ದಾರೆ. ಕೂಡಲೇ ಚಿತ್ರವನ್ನು ಸಾಮಾಜಿಕ ಜಾಲತಾಣ ಟ್ವಿಟರ್'ನಲ್ಲಿ ಪ್ರಕಟಿಸಿರುವ ಅವರು, ಅನಂತ್ ನಾಗ್ ಜಿಲ್ಲೆಯ ಯೂಸೂಫ್ ಚಿತ್ರವಿದು. ಪೆಲೆಟ್ ಗನ್ ಗಳಿಂದಾಗಿ ಈತ ಕಣ್ಣು ಕಳೆದುಕೊಂಡಿದ್ದಾನೆ. ಈತನ ಬಗ್ಗೆ ಧ್ವನಿ ಎತ್ತಿ ಬರೆದಿದ್ದಾರೆ. 

ಅಬ್ದುಲ್ ಬಸಿತ್ ಪ್ರಕಟಿಸಿರುವ ಈ ಪೋಸ್ಟ್ ನ್ನು ಕಂಡು ಪತ್ರಕರ್ತ ನೈಲೈ ಇನಾಯತ್ ಅವರು, ತಮ್ಮ ದೇಶದ ಅಧಿಕಾರಿಯ ಜ್ಞಾನಕ್ಕೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com