ಮೂರು ಪ್ರಕರಣಗಳಲ್ಲಿ ಎಸ್ ಪಿ ಸಂಸದ ಅಜಂ ಖಾನ್ ವಿರುದ್ಧ ಬಂಧನ ವಾರಂಟ್

ಸಮಾಜವಾದಿ ಪಕ್ಷದ ಮುಖಂಡ ಹಾಗೂ ರಾಂಪುರ್ ಸಂಸದ ಅಜಂ ಖಾನ್ ಅವರ ವಿರುದ್ಧ ಭೂ ಕಬಳಿಕೆ, ದೌರ್ಜನ್ಯ, ಬೆದರಿಕೆ, ಪುಸ್ತಕ ಕಳ್ಳತನ, ಎಮ್ಮೆ ಕಳ್ಳತನ ಸೇರಿದಂತೆ ಒಟ್ಟು 80 ಕೇಸ್ ಗಳು ದಾಖಲಾಗಿದ್ದು,...

Published: 06th September 2019 03:55 PM  |   Last Updated: 06th September 2019 03:55 PM   |  A+A-


Azam Khan

ಅಜಂ ಖಾನ್

Posted By : Lingaraj Badiger
Source : The New Indian Express

ಲಖನೌ: ಸಮಾಜವಾದಿ ಪಕ್ಷದ ಮುಖಂಡ ಹಾಗೂ ರಾಂಪುರ್ ಸಂಸದ ಅಜಂ ಖಾನ್ ಅವರ ವಿರುದ್ಧ ಭೂ ಕಬಳಿಕೆ, ದೌರ್ಜನ್ಯ, ಬೆದರಿಕೆ, ಪುಸ್ತಕ ಕಳ್ಳತನ, ಎಮ್ಮೆ ಕಳ್ಳತನ ಸೇರಿದಂತೆ ಒಟ್ಟು 80 ಕೇಸ್ ಗಳು ದಾಖಲಾಗಿದ್ದು, ಈಗ ಮೂರು ಪ್ರಕರಣಗಳಲ್ಲಿ ಅವರ ವಿರುದ್ಧ ಬಂಧನ ವಾರಂಟ್ ಜಾರಿ ಮಾಡಲಾಗಿದೆ.

ಬಿಜೆಪಿ ನಾಯಕಿ ಹಾಗೂ ಹಿರಿಯ ನಟಿ ಜಯಪ್ರದಾ ಅವರ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ ಪ್ರಕರಣ ಸೇರಿದಂತೆ ಮೂರು ಪ್ರಕರಣಗಳಲ್ಲಿ ಅಜಂ ಖಾನ್ ವಿರುದ್ಧ ಜಾಮೀನು ಸಹಿತ ಬಂಧನ ವಾರಟ್ ಜಾರಿ ಮಾಡಲಾಗಿದ್ದು, ಸೆಪ್ಟೆಂಬರ್ 16ರೊಳಗೆ ಕೋರ್ಟ್ ಮುಂದೆ ಆರೋಪಿಯನ್ನು ಹಾಜರುಪಡಿಸುವಂತೆ ಪೊಲೀಸರಿಗೆ ಸೂಚಿಸಲಾಗಿದೆ.

ಅಜಂ ಖಾನ್ ಅವರು ತಮ್ಮ ರಾಂಪುರ್ ರೆಸಾರ್ಟ್ ಗೆ ಅಕ್ರಮವಾಗಿ ವಿದ್ಯುತ್ ಸಂಪರ್ಕ ಹಾಗೂ ನೀರಿನ ಸಂಪರ್ಕ ಪಡೆದ ಆರೋಪದ ಸಂಸದರ ವಿರುದ್ಧ ಕೇಸ್ ದಾಖಲಿಸಲಾಗಿದೆ ಎಂದು ರಾಂಪುರ್ ಪೊಲೀಸ್ ವರಿಷ್ಠಾಧಿಕಾರಿ ಅಜಯ್ ಪಾಲ್ ಶರ್ಮಾ ಅವರು ಹೇಳಿದ್ದಾರೆ.

ಅಜಂ ಖಾನ್ ಅವರು 2019ರ ಲೋಕಸಭೆ ಚುನಾವಣೆ ವೇಳೆ ತಮ್ಮ ಪ್ರತಿಸ್ಪರ್ಧಿ ಜಯಪ್ರದಾ ಅವರ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ್ದರು.

Stay up to date on all the latest ರಾಷ್ಟ್ರೀಯ news
Poll
Farmers_Protest1

ಹೊಸ ಕೃಷಿ ಕಾನೂನುಗಳ ಬಗ್ಗೆ ರೈತರನ್ನು ದಾರಿ ತಪ್ಪಿಸಲಾಗುತ್ತಿದೆಯೇ?


Result
ಹೌದು
ಇಲ್ಲ
ಗೊತ್ತಿಲ್ಲ
flipboard facebook twitter whatsapp