ಚಂದ್ರಯಾನ-2 ಗಗನನೌಕೆ ಇಳಿಯುವುದನ್ನು ಎಲ್ಲರೂ ಕಣ್ತುಂಬಿಕೊಳ್ಳಿ-ಪ್ರಧಾನಿ ನರೇಂದ್ರ ಮೋದಿ ಕರೆ 

ಭಾರತದ 130 ಕೋಟಿ ಜನರು ಕಾತರದಿಂದ ಕಾಯುತ್ತಿರುವ ಕ್ಷಣ ಇನ್ನು ಕೆಲವೇ ಗಂಟೆಗಳಲ್ಲಿ ಬರಲಿದ್ದು ಚಂದ್ರಯಾನ-2 ಗಗನನೌಕೆ ಚಂದ್ರದ ದಕ್ಷಿಣ ಧ್ರುವದಲ್ಲಿ ಇಳಿಯುವ ಐತಿಹಾಸಿಕ ಕ್ಷಣಕ್ಕೆ ನಾವೆಲ್ಲರೂ ಸಾಕ್ಷಿಯಾಗಲಿದ್ದೇವೆ ಎಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಹೇಳಿದ್ದಾರೆ. 
ನರೇಂದ್ರ ಮೋದಿ
ನರೇಂದ್ರ ಮೋದಿ

ನವದೆಹಲಿ: ಭಾರತದ 130 ಕೋಟಿ ಜನರು ಕಾತರದಿಂದ ಕಾಯುತ್ತಿರುವ ಕ್ಷಣ ಇನ್ನು ಕೆಲವೇ ಗಂಟೆಗಳಲ್ಲಿ ಬರಲಿದ್ದು ಚಂದ್ರಯಾನ-2 ಗಗನನೌಕೆ ಚಂದ್ರದ ದಕ್ಷಿಣ ಧ್ರುವದಲ್ಲಿ ಇಳಿಯುವ ಐತಿಹಾಸಿಕ ಕ್ಷಣಕ್ಕೆ ನಾವೆಲ್ಲರೂ ಸಾಕ್ಷಿಯಾಗಲಿದ್ದೇವೆ ಎಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಹೇಳಿದ್ದಾರೆ.


ರಷ್ಯಾದ ವ್ಲಾಡಿವೋಸ್ಟಾಕ್ ನಲ್ಲಿ ಪ್ರವಾಸದಲ್ಲಿರುವ  ಅವರು, ಭಾರತ ಮತ್ತು ಪ್ರಪಂಚದ ಉಳಿದ ದೇಶಗಳು ನಮ್ಮ ಬಾಹ್ಯಾಕಾಶ ವಿಜ್ಞಾನಿಗಳ ಆದರ್ಶಪ್ರಾಯ ಪರಾಕ್ರಮವನ್ನು ಮತ್ತೊಮ್ಮೆ ಕಣ್ತುಂಬಿಕೊಳ್ಳಲು ಕಾಯುತ್ತಿದ್ದಾರೆ ಎಂದು ಟ್ವೀಟ್ ಮಾಡಿದ್ದಾರೆ.


ಈ ಕ್ಷಣವನ್ನು ಸವಿಯಲು ನಾನು ಬೆಂಗಳೂರಿನಲ್ಲಿರುವ ಇಸ್ರೊ ಕೇಂದ್ರಕ್ಕೆ ಹೋಗಲು ಪುಳಕಿತನಾಗಿದ್ದೇನೆ. ಆ ವಿಶೇಷ ಕ್ಷಣವನ್ನು ನನ್ನೊಂದಿಗೆ ಹಂಚಿಕೊಳ್ಳಲು ಹಲವು ವಿಜ್ಞಾನಿಗಳು ಮತ್ತು ಮುಂದಿನ ಭಾರತದ ಭವಿಷ್ಯದ ಪ್ರಜೆಗಳಾದ ಮಕ್ಕಳು ಸಹ ನನ್ನ ಜೊತೆ ಸೇರಿಕೊಳ್ಳಲಿದ್ದಾರೆ. ಇಂದಿನ ಮಕ್ಕಳೊಂದಿಗೆ ಕುಳಿತುಕೊಂಡು ಚಂದ್ರಯಾನ-2ವನ್ನು ಕಣ್ತುಂಬಿಕೊಳ್ಳುವುದೇ ನನಗೆ ವಿಶೇಷ ಎಂದಿದ್ದಾರೆ.


ಇನ್ನೊಂದೆಡೆ ಎಲ್ಲವೂ ನಿಗದಿಪಡಿಸಿದ ಯೋಜನೆಯಂತೆ ಸಾಗುತ್ತಿದೆ ಎಂದು ಇಸ್ರೊ ತಿಳಿಸಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com