370ನೇ ವಿಧಿ ರದ್ದು ವಿಚಾರದಲ್ಲಿ ಪಕ್ಷದ ನಿಲುವು ಒಪ್ಪಲು ಸಾಧ್ಯವಿಲ್ಲ: ಕಾಂಗ್ರೆಸ್ ಗೆ ಮಹಾ ಮಾಜಿ ಸಚಿವ ರಾಜೀನಾಮೆ

ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ಕಲ್ಪಿಸುವ ಸಂವಿಧಾನದ 370ನೇ ವಿಧಿ ರದ್ದುಗೊಳಿಸಿದ್ದನ್ನು ವಿರೋಧಿಸಿದ್ದ ಪಕ್ಷದ ನಿಲುವು ಒಪ್ಪಲು ಸಾಧ್ಯವಿಲ್ಲ ಎಂದು ಹೇಳಿ ಮಹಾರಾಷ್ಟ್ರ ಮಾಜಿ ಸಚಿವ ಕೃಪಾಶಂಕರ್ ಸಿಂಗ್ ಅವರು ಮಂಗಳವಾರ ಕಾಂಗ್ರೆಸ್ ರಾಜೀನಾಮೆ ನೀಡಿದ್ದಾರೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಮುಂಬೈ: ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ಕಲ್ಪಿಸುವ ಸಂವಿಧಾನದ 370ನೇ ವಿಧಿ ರದ್ದುಗೊಳಿಸಿದ್ದನ್ನು ವಿರೋಧಿಸಿದ್ದ ಪಕ್ಷದ ನಿಲುವು ಒಪ್ಪಲು ಸಾಧ್ಯವಿಲ್ಲ ಎಂದು ಹೇಳಿ ಮಹಾರಾಷ್ಟ್ರ ಮಾಜಿ ಸಚಿವ ಕೃಪಾಶಂಕರ್ ಸಿಂಗ್ ಅವರು ಮಂಗಳವಾರ ಕಾಂಗ್ರೆಸ್ ರಾಜೀನಾಮೆ ನೀಡಿದ್ದಾರೆ.

ಕೃಪಾಶಂಕರ್ ಸಿಂಗ್ ಅವರು ಇಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ಮಲ್ಲಿಕಾರ್ಜುನ್ ಖರ್ಗೆ ಅವರನ್ನು ಭೇಟಿ ಮಾಡಿ, ರಾಜೀನಾಮೆ ಪತ್ರ ಸಲ್ಲಿಸಿದ್ದಾರೆ.

ತಾವು ಬಿಜೆಪಿ ಸೇರುವುದಿಲ್ಲ ಎಂದಿರುವ ಮುಂಬೈ ಕಾಂಗ್ರೆಸ್ ಮಾಜಿ ಅಧ್ಯಕ್ಷ ಕೃಪಾಶಂಕರ್ ಸಿಂಗ್ ಅವರು, ಸೂಕ್ತ ಸಮಯದಲ್ಲಿ ತಮ್ಮ ಮುಂದಿನ ರಾಜಕೀಯ ನಡೆಯನ್ನು ತಿಳಿಸುವುದಾಗಿ ಹೇಳಿದ್ದಾರೆ.

ಕೃಪಾಶಂಕರ್ ಸಿಂಗ್ ಅವರು ಕಾಂಗ್ರೆಸ್-ಎನ್ ಸಿಪಿ ಮೈತ್ರಿ ಸರ್ಕಾರ 15 ವರ್ಷಗಳ ಕಾಲ ಸಚಿವರಾಗಿ ಸೇವೆ ಸಲ್ಲಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com