ಏಕಾದಶಿಯಂದು ಉಡಾವಣೆ ಮಾಡಿದ್ದಕ್ಕೆ ಯುಎಸ್ 'ಮೂನ್ ಮಿಷನ್' ಯಶಸ್ವಿಯಾಯ್ತು: ಆರ್‌ಎಸ್‌ಎಸ್‌ ಮುಖಂಡ ಸಂಭಾಜಿ ಭಿಡೆ 

ಯುಎಸ್ ಬಾಹ್ಯಾಕಾಶ ವಿಜ್ಞಾನಿಗಳು ತಮ್ಮ ಉಪಗ್ರಹವನ್ನು ಚಂದ್ರನಲ್ಲಿಗೆ ಗೆ ಕಳುಹಿಸುವ 39 ನೇ ಪ್ರಯತ್ನದಲ್ಲಿ ಯಶಸ್ವಿಯಾದರು ಏಕೆಂದರೆ ಅವರು ಅದನ್ನು "ಏಕಾದಶಿ" ಯಲ್ಲಿ ಉಡಾವಣೆ ಮಾಡಿದ್ದಾರೆ ಎಂದು ಮಾಜಿ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಕಾರ್ಯಕರ್ತ ಸಂಭಾಜಿ ಭಿಡೆ ಹೇಳಿದ್ದಾರೆ.
ಸಂಭಾಜಿ ಭಿಡೆ
ಸಂಭಾಜಿ ಭಿಡೆ

ಪುಣೆ: ಯುಎಸ್ ಬಾಹ್ಯಾಕಾಶ ವಿಜ್ಞಾನಿಗಳು ತಮ್ಮ ಉಪಗ್ರಹವನ್ನು ಚಂದ್ರನಲ್ಲಿಗೆ ಗೆ ಕಳುಹಿಸುವ 39 ನೇ ಪ್ರಯತ್ನದಲ್ಲಿ ಯಶಸ್ವಿಯಾದರು ಏಕೆಂದರೆ ಅವರು ಅದನ್ನು "ಏಕಾದಶಿ" ಯಲ್ಲಿ ಉಡಾವಣೆ ಮಾಡಿದ್ದಾರೆ ಎಂದು ಮಾಜಿ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಕಾರ್ಯಕರ್ತ ಸಂಭಾಜಿ ಭಿಡೆ ಹೇಳಿದ್ದಾರೆ.

ಚಂದ್ರಯಾನ  2 ಕಾರ್ಯಾಚರಣೆಯ ಭಾರತದ ಲ್ಯಾಂಡರ್ ವಿಕ್ರಮ್ ಸಂಪರ್ಕವನ್ನು ಕಳೆದುಕೊಂಡ ಬಳಿಕ ಇದೀಗ ಲ್ಯಾಂಡರ್ ಚಂದ್ರನ ಅಂಗಳದಲ್ಲಿದೆ ಎಂದು ತಿಳಿದುಬಂದಿದೆ.

ಮಹಾರಾಷ್ಟ್ರದ ದ ಶಿವ ಪ್ರತಿಷ್ಠಾನ ಹಿಂದೂಸ್ತಾನ್ ಮುಖ್ಯಸ್ಥರಾಗಿರುವ ಭಿಡೆ 2018 ಭೀಮಾ-ಕೋರೆಗಾಂವ್ ಹಿಂಸಾಚಾರದ ಪ್ರಕರಣದಲ್ಲಿ ಆರೋಪ ಎದುರಿಸುತ್ತಿದ್ದಾರೆ.

"ಅಮೆರಿಕಾ ತಮ್ಮ ಬಾಹ್ಯಾಕಾಶ ನೌಕೆಯನ್ನು ಚಂದ್ರನ ಮೇಲ್ಮೈಗೆ 38 ಬಾರಿ ಕಳಿಸಲು ಪ್ರಯತ್ನಿಸಿ ವಿಫಲವಾಗಿದೆ. ಆದರೆ  39 ನೇ ಪ್ರಯತ್ನದಲ್ಲಿ ಯಶಸ್ವಿಯಾದರು. ಉಡಾವಣೆಯನ್ನು "ಏಕಾದಶಿ" ಯಲ್ಲಿ ನಡೆಸಲಾಗಿತ್ತು" ಎಂದು ಸೋಲಾಪುರದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಭಿಡೆ ಹೇಳಿದ್ದಾರೆ."ತಾವು ಅನುಭವಿಸುತ್ತಿರುವ ಸತತ ವೈಫಲ್ಯದ ನಂತರ , ಅಮೆರಿಕದ ವಿಜ್ಞಾನಿಗಳಲ್ಲಿ ಒಬ್ಬರು ಭಾರತೀಯ ವ್ಯವಸ್ಥೆಯಂತೆ "ಸಮಯ ಮಾಪನ" ಅಳವಡಿಸಿಕೊಳ್ಳಿ ಎಂದು ಸಲಹೆ ಇತ್ತರು.ಅದರಂತೆಯೇ ಅಮೆರಿಕನ್ನರು ತಮ್ಮ ಬಾಹ್ಯಾಕಾಶ ನೌಕೆಯನ್ನು ಭಾರತೀಯ ಸಮಯ ಮಾಪನ ವ್ಯವಸ್ಥೆಯನ್ನು ಆಧರಿಸಿ 39 ಪ್ರಯತ್ನದಲ್ಲಿ ಉಡಾವಣೆ ಮಾಡಿದಾಗ ಅದು ಯಶಸ್ವಿಯಾಗಿತ್ತು. ಏಕೆಂದರೆ  ಏಕಾದಶಿ ದಿನದಂದು ಬಾಹ್ಯಾಕಾಶ ನೌಕೆಯನ್ನು ಉಡಾಯಿಸಲಾಯಿತು" ಎಂದು ಭಿಡೆ ಹೇಳಿದರು.

ಏಕಾದಶಿ ಎಂಬುದು ಹಿಂದೂ ಕ್ಯಾಲೆಂಡರ್ ತಿಂಗಳಲ್ಲಿ ಬರುವ ಎರಡು ಪಕ್ಷಗಳಲ್ಲಿನ ಹನ್ನೊಂದನೇ ಚಂದ್ರನ ದಿನವಾಗಿದೆ.ಶುಕ್ಲ ಪಕ್ಷ ಹಾಗೂ ಕೃಷ್ಣ ಪಕ್ಷದ ಹನ್ನೊಂದನೇ ದಿನವನ್ನು ಏಕಾದಶಿ ಎನ್ನಲಾಗುತ್ತದೆ.

ಏಕಾದಶಿಯನ್ನು ಆಧ್ಯಾತ್ಮಿಕ ದಿನವೆಂದು ಪರಿಗಣಿಸಲಾಗುತ್ತದೆ ಮತ್ತು ಇದನ್ನು ಸಾಮಾನ್ಯವಾಗಿ ಉಪವಾಸ ವ್ರತವಾಗಿ ಆಚರಿಸುತ್ತಾರೆ.

ಭಿಡೆ ಅವರಿಗೆ ವಿವಾದಗಳೇನೂ ಹೊಸದಲ್ಲ ಹಿಂದೊಮ್ಮೆ ನಾಸಿಕ್ ನಲ್ಲಿ ಮಾತನಾಡಿದ್ದ ಭಿಡೆ "ನನ್ನ ತೋಟದ ಮಾವಿನ ಹಣ್ಣುಗಳು ಸಾಕಷ್ಟು ಶಕ್ತಿವರ್ಧಕ ಹಾಗೂ ಪುಷ್ಟಿದಾಯಕವಾಗಿದ್ದು ಅದನ್ನು ತಿಂದ ಕೆಲ ಮಹಿಳೆಯರು ಗಂಡು ಮಗುವಿನ ತಾಯಿಯಾಗಿದ್ದಾರೆ "ಎಂದು ಹೇಳಿದ್ದರು..

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com