ನೆರೆಯ ದೇಶ ಭಯೋತ್ಪಾದನೆಯ ಕಾರ್ಖಾನೆ, ಅದರಿಂದಲೇ ಉಪದ್ರವ ಹೆಚ್ಚಳ: ಪಾಕಿಸ್ತಾನಕ್ಕೆ ಮೋದಿ ತಪರಾಕಿ

ಭಯೋತ್ಪಾದನೆಯು ಜಾಗತಿಕ ಸಮಸ್ಯೆಯಾಗಿ   ಪರಿಣಮಿಸುತ್ತಿದೆ ಎಂದು ಪುನರುಚ್ಚರಿಸಿರುವ ಪ್ರಧಾನಿ ನರೇಂದ್ರ ಮೋದಿ, ಇಡೀ ಜಗತ್ತೇ ಭಯೋತ್ಪಾದನೆಯ ವಿರುದ್ಧ ಒಗ್ಗಟ್ಟಾಗಿದೆ ಎಂದು ಹೇಳಿದ್ದಾರೆ.
ನೆರೆಯ ದೇಶ ಭಯೋತ್ಪಾದನೆಯ ಕಾರ್ಖಾನೆಯಾಗಿರುವುದೇ ಉಪದ್ರವ ಹೆಚ್ಚಳಕ್ಕೆ ಕಾರಣ: ಪಾಕಿಸ್ತಾನಕ್ಕೆ ಮೋದಿ ತಪರಾಕಿ
ನೆರೆಯ ದೇಶ ಭಯೋತ್ಪಾದನೆಯ ಕಾರ್ಖಾನೆಯಾಗಿರುವುದೇ ಉಪದ್ರವ ಹೆಚ್ಚಳಕ್ಕೆ ಕಾರಣ: ಪಾಕಿಸ್ತಾನಕ್ಕೆ ಮೋದಿ ತಪರಾಕಿ

ಮಥುರಾ: ಭಯೋತ್ಪಾದನೆಯು ಜಾಗತಿಕ ಸಮಸ್ಯೆಯಾಗಿ   ಪರಿಣಮಿಸುತ್ತಿದೆ ಎಂದು ಪುನರುಚ್ಚರಿಸಿರುವ ಪ್ರಧಾನಿ ನರೇಂದ್ರ ಮೋದಿ, ಇಡೀ ಜಗತ್ತೇ ಭಯೋತ್ಪಾದನೆಯ ವಿರುದ್ಧ ಒಗ್ಗಟ್ಟಾಗಿದೆ ಎಂದು ಹೇಳಿದ್ದಾರೆ.

ಉತ್ತರ ಪ್ರದೇಶದ ಮಥುರಾದಲ್ಲಿ ವಿವಿಧ ಅಭಿವೃದ್ಧಿ ಯೋಜನೆಗಳಿಗೆ ಚಾಲನೆ ನೀಡಿ ಮಾತನಾಡಿದ ಅವರು, “ಒಂದೆಡೆ ಇಡೀ ಜಗತ್ತು ಭಯೋತ್ಪಾದನೆಯನ್ನು ಖಂಡಿಸುತ್ತಿದೆ  ಆದರೆ ಭಾರತದ ನೆರೆಯ ರಾಷ್ಟ್ರ ಭಯೋತ್ಪಾದನೆಯ ಕಾರ್ಖಾನೆಯೇ   ಆಗಿರುವುದರಿಂದ ಗಡಿಯಲ್ಲಿ ಉಪದ್ರವ ಎಲ್ಲೆ ಮೀರುತ್ತಿದೆ” ಎಂದು ಪಾಕಿಸ್ತಾನಕ್ಕೆ ಟಾಂಗ್ ನೀಡಿದರು.

ಬಿಜೆಪಿ ಸರ್ಕಾರದ ಪ್ರವಾಸೋದ್ಯಮ ಅಭಿವೃದ್ಧಿ ನೀತಿಯನ್ನು ಶ್ಲಾಘಿಸಿದ ಪ್ರಧಾನಿ, “ಕಳೆದ 5 ವರ್ಷಗಳಲ್ಲಿ ಬಿಜೆಪಿ ಸರ್ಕಾರದ ಸತತ ಪ್ರಯತ್ನದಿಂದಾಗಿ ಇತ್ತೀಚೆಗೆ ವಿಶ್ವ ಪ್ರವಾಸೋದ್ಯಮ ಹೊರಡಿಸಿರುವ ಶ್ರೇಯಾಂಕದ   ಪಟ್ಟಿಯಲ್ಲಿ ನಾವು 34ನೇ ಸ್ಥಾನದಲ್ಲಿದ್ದೇವೆ ಮತ್ತು ಬಿಜೆಪಿಗೂ ಹಿಂದಿನ ಸರ್ಕಾರದ ಆಡಳಿತದಲ್ಲಿ ಅದು 65ನೇ ಸ್ಥಾನದಲ್ಲಿತ್ತು” ಎಂದು ಹೇಳಿದರು.

ಧಾರ್ಮಿಕ ಪ್ರವಾಸೋದ್ಯಮವನ್ನು ಹೆಚ್ಚಿಸಲು ಬ್ರಿಜ್ ವಲಯದ ಅಭಿವೃದ್ಧಿಗೆ ಯೋಗಿ ಆದಿತ್ಯನಾಥ್ ಸರ್ಕಾರದ ಪ್ರಯತ್ನವನ್ನು ಪ್ರಧಾನಿ ಮೋದಿ ಶ್ಲಾಘಿಸಿದರು. ಇಲ್ಲಿನ ಬೆಳವಣಿಗೆಗಳು ರಾಜ್ಯಕ್ಕೆ ಮಾತ್ರವಲ್ಲ ಇಡೀ ದೇಶಕ್ಕೆ ಪ್ರಯೋಜನವಾಗಲಿದೆ. ಪರಿಸರ ಸಂರಕ್ಷಣೆ ಮತ್ತು ವಿದ್ಯುತ್ ಉಳಿತಾಯ ನವ ಭಾರತವನ್ನು ಬಲಪಡಿಸಲು ಮತ್ತು ನಿರ್ಮಿಸಲು ದಾರಿ ಮಾಡಿಕೊಡುತ್ತದೆ ಎಂದು ಹೇಳಿದರು.

‘ಸ್ವಚ್ಛತೆಯೇ ಸೇವೆ’, ರಾಷ್ಟ್ರೀಯ ಪ್ರಾಣಿ ರೋಗ ನಿಯಂತ್ರಣ ಕಾರ್ಯಕ್ರಮ, ಪ್ರಾಣಿಗಳ ಆರೋಗ್ಯ ಮತ್ತು ಸಂರಕ್ಷಣೆಗೆ ಸಂಬಂಧಿಸಿದ ಹಲವಾರು ಯೋಜನೆಗಳನ್ನು ಬುಧವಾರ ಇಲ್ಲಿ ಪ್ರಾರಂಭಿಸಲಾಗಿದೆ ಇದು ಹೊಸ ಅಭಿವೃದ್ಧಿಯೊಂದಿಗೆ ರಾಜ್ಯದ ಅಭಿವೃದ್ಧಿಯನ್ನು ವೇಗಗೊಳಿಸುತ್ತದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com