ಹೊಸ ಸಂಚಾರಿ ದಂಡ ತುಂಬಾ ಕಠಿಣವಾಗಿದೆ, ಪಶ್ಚಿಮ ಬಂಗಾಳದಲ್ಲಿ ಜಾರಿಗೊಳಿಸಲ್ಲ: ಮಮತಾ

ಸಂಚಾರಿ ನಿಯಮ ಉಲ್ಲಂಘನೆ ಭಾರೀ ದಂಡ ವಿಧಿಸಲಾಗುತ್ತಿರುವ ಕೇಂದ್ರ ಸರ್ಕಾರದ ನೂತನ ಮೋಟರ್​ ವಾಹನ ಕಾಯ್ದೆನ್ನು ರಾಜ್ಯದಲ್ಲಿ ಜಾರಿಗೊಳಿಸುವುದಿಲ್ಲ ಎಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ....

Published: 11th September 2019 07:07 PM  |   Last Updated: 11th September 2019 07:07 PM   |  A+A-


Mamatha Banerjee

ಮಮತಾ ಬ್ಯಾನರ್ಜಿ

Posted By : Lingaraj Badiger
Source : PTI

ಕೋಲ್ಕತಾ: ಸಂಚಾರಿ ನಿಯಮ ಉಲ್ಲಂಘನೆ ಭಾರೀ ದಂಡ ವಿಧಿಸಲಾಗುತ್ತಿರುವ ಕೇಂದ್ರ ಸರ್ಕಾರದ ನೂತನ ಮೋಟರ್​ ವಾಹನ ಕಾಯ್ದೆನ್ನು ರಾಜ್ಯದಲ್ಲಿ ಜಾರಿಗೊಳಿಸುವುದಿಲ್ಲ ಎಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಬುಧವಾರ ಹೇಳಿದ್ದಾರೆ.

ಹೊಸ ಸಂಚಾರಿ ದಂಡ ತುಂಬಾ ಕಠಿಣವಾಗಿದೆ ಎಂದಿರುವ ತೃಣಮೂಲ ಕಾಂಗ್ರೆಸ್ ಮುಖ್ಯಸ್ಥೆ, ಈ ಕಾಯ್ದೆ ಒಕ್ಕೂಟ ವ್ಯವಸ್ಥೆಗೆ ವಿರುದ್ಧವಾಗಿದೆ ಎಂದು ಹೇಳಿದ್ದಾರೆ.

ನಾವು ಈ ಹಿಂದೆಯೇ ಸಂಸತ್ತಿನಲ್ಲಿ ಮೋಟರ್​ ವಾಹನ ಕಾಯ್ದೆ ತಿದ್ದುಪಡಿಯನ್ನು ವಿರೋಧಿಸಿದ್ದೇವೆ. ಈಗ ಅದನ್ನು ಜಾರಿಗೊಳಿಸಿದರೆ ಸಾಮಾನ್ಯ ಜನರ ಭಾವನೆಗಳಿಗೆ ಧಕ್ಕೆಯಾಗುತ್ತದೆ ಎಂದು ಪಶ್ಚಿಮ ಬಂಗಾಳ ಸಿಎಂ ಹೇಳಿದ್ದಾರೆ.

ಎಲ್ಲಾ ಸಮಸ್ಯೆಗಳಿಗೂ ದಂಡವೇ ಪರಿಹಾರ ಅಲ್ಲ. ಈ ವಿಚಾರವನ್ನು ಮಾನವೀಯ ದೃಷ್ಟಿಯಿಂದಲೂ ನೋಡಬೇಕಾಗುತ್ತದೆ ಎಂದು ದೀದಿ ತಿಳಿಸಿದ್ದಾರೆ.

Stay up to date on all the latest ರಾಷ್ಟ್ರೀಯ news
Poll
Parliament

ಸಂಸತ್ತಿನ ಈ ಮುಂಗಾರು ಅಧಿವೇಶನವು ಪ್ರಜಾಪ್ರಭುತ್ವದ ಕಗ್ಗೊಲೆಗೆ ಸಾಕ್ಷಿಯಾಯಿತೇ?


Result
ಹೌದು
ಇಲ್ಲ
ಗೊತ್ತಿಲ್ಲ
flipboard facebook twitter whatsapp