ಬಿಜೆಪಿಯಿಂದ ಜನಾದೇಶದ ಅಪಾಯಕಾರಿ ದುರುಪಯೋಗ; ಚಳವಳಿಯೊಂದೇ ದಾರಿ: ಸೋನಿಯಾ
ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಗುರುವಾರ ದೇಶದ 'ಕಠೋರ' ಆರ್ಥಿಕ ಪರಿಸ್ಥಿತಿಯ ಬಗ್ಗೆ ಕಳವಳ ವ್ಯಕ್ತಪಡಿಸಿದ್ದು, ಭಾರತೀಯ ಜನತಾ ಪಕ್ಷ ಜನತೆಯ ಆದೇಶವನ್ನು ಅತ್ಯಂತ ಅಪಾಯಕಾರಿ' ರೀತಿಯಲ್ಲಿ ದುರುಪಯೋಗಪಡಿಸಿಕೊಂಡಿದೆ ಎಂದು ಆರೋಪಿಸಿದರು.
Published: 12th September 2019 05:21 PM | Last Updated: 12th September 2019 05:21 PM | A+A A-

ಸೋನಿಯಾ ಗಾಂಧಿ, ಮನಮೋಹನ್ ಸಿಂಗ್
ನವದೆಹಲಿ: ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಗುರುವಾರ ದೇಶದ 'ಕಠೋರ' ಆರ್ಥಿಕ ಪರಿಸ್ಥಿತಿಯ ಬಗ್ಗೆ ಕಳವಳ ವ್ಯಕ್ತಪಡಿಸಿದ್ದು, ಭಾರತೀಯ ಜನತಾ ಪಕ್ಷ ಜನತೆಯ ಆದೇಶವನ್ನು ಅತ್ಯಂತ ಅಪಾಯಕಾರಿ' ರೀತಿಯಲ್ಲಿ ದುರುಪಯೋಗಪಡಿಸಿಕೊಂಡಿದೆ ಎಂದು ಆರೋಪಿಸಿದರು.
ಪಕ್ಷದ ಪ್ರಧಾನ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಸೋನಿಯಾ ಗಾಂಧಿ ಕಾಂಗ್ರೆಸ್ ನಾಯಕರನ್ನು ಉದ್ದೇಶಿಸಿ ಮಾತನಾಡುತ್ತಾ, ಬಿಜೆಪಿ ಸರ್ಕಾರವು ಕಾಂಗ್ರೆಸ್ ನ ಸಂಕಲ್ಪ ಮತ್ತು ತಾಳ್ಮೆಯ ಸ್ಥಿತಿಯನ್ನು ಪರೀಕ್ಷಿಸುತ್ತಿದೆ ಎಂದು ಹೇಳಿದ್ದಾರೆ. ಇದಕ್ಕಾಗಿ ಕೇಂದ್ರ ಸರ್ಕಾರ ಹಾಗೂ ಬಿಜೆಪಿಯನ್ನು ಹಣಿಯಲು ನಮಗುಳಿದಿರುವುದು ಚಳವಳಿಯ ಮಾರ್ಗವೊಂದೇ ಆಗಿದೆ. ಹಾಗಾಗಿ ಪಕ್ಷದ ಕಾರ್ಯಕರತ್ರು, ನಾಯಕರು ಚಳವಳಿ ಕಾರ್ಯಸೂಚಿಯನ್ನು ಕೈಗೆತ್ತಿಕೊಳ್ಳಬೇಕು ಎಂದು ಹೇಳಿದ್ದಾರೆ.
ಮೋದಿ ಸರ್ಕಾರದ ಅಡಿಯಲ್ಲಿ ಪ್ರಜಾಪ್ರಭುತ್ವವು ಅಪಾಯದಲ್ಲಿದೆ ಎಂದು ಅವರು ಹೇಳೀದ ಸೋನಿಯಾ ಸರ್ಕಾರ ಜನತೆಯು ನೀಡಿದ ಜನಾದೇಶವನ್ನು 'ಅತ್ಯಂತ ಅಪಾಯಕಾರಿ' ಶೈಲಿಯಲ್ಲಿ ದುರುಪಯೋಗಪಡಿಸಿಕೊಂಡಿದೆ ಮತ್ತು ದುರುಪಯೋಗಪಡಿಸಿಕೊಳ್ಳುತ್ತಿದೆ. ಎಂದಿದ್ದಾರೆ. ಮಹಾತ್ಮ ಗಾಂಧಿಯವರ 150 ನೇ ಜನ್ಮ ದಿನಾಚರಣೆಯ ತಯಾರಿ ಅಂತಿಮಗೊಳಿಸಲು ದೇಶಾದ್ಯಂತದ ಪಕ್ಷದ ಉನ್ನತ ನಾಯಕರ ಸಭೆಯ ಅಧ್ಯಕ್ಷತೆ ವಹಿಸಿ ಸೋನಿಯಾ ಗಾಂಧಿ ಈ ಹೇಳಿಕೆ ನೀಡಿದ್ದಾರೆ.
ಸಭೆಯಲ್ಲಿ ಮಾಜಿ ಪ್ರಧಾನಿ ಮನಮೋಹನ್ ಸಿಂಗ್, ಅಖಿಲ ಭಾರತ ಕಾಂಗ್ರೆಸ್ ಸಮಿತಿಯ ಪ್ರಧಾನ ಕಾರ್ಯದರ್ಶಿಗಳು ಮತ್ತು ವಿವಿಧ ರಾಜ್ಯಗಳ ಉಸ್ತುವಾರಿಗಳು, ರಾಜ್ಯ ಸರ್ಕಾರದ ಮುಖ್ಯಸ್ಥರು ಮತ್ತು ಕಾಂಗ್ರೆಸ್ ಶಾಸಕಾಂಗ ಪಕ್ಷದ ಮುಖಂಡರು ಭಾಗವಹಿಸಿದ್ದರು. ಆದರೆ ಮಾಜಿ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಸಭೆಯಲ್ಲಿರಲಿಲ್ಲ.
ಸೋನಿಯಾ ಗಾಂಧಿ ಅವರು ದೇಶದಲ್ಲಿ ಚಾಲ್ತಿಯಲ್ಲಿರುವ ಆರ್ಥಿಕ ಪರಿಸ್ಥಿತಿಯ ಬಗ್ಗೆ ಕಳವಳ ವ್ಯಕ್ತಪಡಿಸಿದರು, ನಷ್ಟವು ಹೆಚ್ಚಾಗುತ್ತಿದೆ.ಸರ್ಕಾರ ಜನರ ಸಾಮಾನ್ಯರ ವಿಶ್ವಾಸದೊಡನೆ ಆಟವಾಡುತ್ತಿದೆ.ಆರ್ಥಿಕ ಜಗತ್ತಿನಲ್ಲಿ ಚ್ಚುತ್ತಿರುವ ನಷ್ಟಗಳಿಂದ ಗಮನವನ್ನು ಬೇರೆಡೆ ಸೆಳೆಯಲು ಸರ್ಕಾರವು ಬೇರೆ ಬೇರೆ ಕಾರ್ಯತಂತ್ರ ಬಳಸುತ್ತಿದೆ ಎಂದು ಅವರು ಹೇಳಿದ್ದಾರೆ.
ಮಾಜಿ ಪ್ರಧಾನಿ ಸಿಂಗ್ ಮಾತನಾಡಿ "ನಾವು ಅಪಾಯಕಾರಿಯಾದ ಸುದೀರ್ಘಾವಧಿಯ ಕೆಟ್ಟ ಪರಿಸ್ಥಿತ್ಯಲ್ಲಿದ್ದೇವೆ. ಆರ್ಥಿಕತೆ ಸ್ವಲ್ಪ ಕೆಟ್ತ ಸ್ಥಿತಿಯಿಂದ ಇನ್ನಷ್ಟು ತೀವ್ರ ಕೆಟ್ಟಸ್ಥಿತಿಯತ್ತ ಧಾವಿಸುತ್ತಿದೆ. ಸರ್ಕಾರ ಇದನ್ನು ಅರಿತುಕೊಳ್ಳುತ್ತಿಲ್ಲ ಮತ್ತು ಉದ್ಯೋಗ ಕ್ಷೇತ್ರದಲ್ಲಿ ಇದು ಕೆಟ್ಟ ಪರಿಣಾಮವನ್ನು ಬೀರಲಿದೆ" ಎಂದಿದ್ದಾರೆ
ಸಭೆಯಲ್ಲಿ ಪಂಜಾಬ್ ಮುಖ್ಯಮಂತ್ರಿ ಅಮರಿಂದರ್ ಸಿಂಗ್ ಮತ್ತು ರಾಜಸ್ಥಾನ್ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಮತ್ತು ಪುದುಚೇರಿ ಸಿಎಂ ವಿ ನಾರಾಯಣಸಾಮಿ ಹಾಜರಿದ್ದರೆ, ಮಧ್ಯಪ್ರದೇಶದ ಮುಖ್ಯಮಂತ್ರಿ ಕಮಲ್ ನಾಥ್ ಮತ್ತು ಛತ್ತೀಸ್ ಘಡ ಸಿಎಂ ಭೂಪೇಶ್ ಭಾಗೆಲ್ ಗೈರಾಗಿದ್ದರು.