ಮುಂಬೈ-ಅಹಮದಾಬಾದ್ ನಡುವಿನ ಬುಲೆಟ್‌ ರೈಲಿನ ಪ್ರಯಾಣ ದರ 3000 ರೂ.

ದೇಶದ ಪ್ರಥಮ ಬುಲೆಟ್ ರೈಲು ಮುಂಬೈ ಹಾಗೂ ಅಹಮದಾಬಾದ್ ನಡುವೆ ಸಂಚರಿಸಲಿದ್ದು, ರೈಲಿನ ಪ್ರಯಾಣ ದರ ಸುಮಾರು 3000 ರೂಪಾಯಿ ಆಗುತ್ತದೆ ಎಂದು ನ್ಯಾಷನಲ್ ಹೈ ಸ್ಪೀಡ್ ರೈಲ್ ಕಾರ್ಪೊರೇಶನ್
ಬುಲೆಟ್ ರೈಲು( ಸಂಗ್ರಹ ಚಿತ್ರ)
ಬುಲೆಟ್ ರೈಲು( ಸಂಗ್ರಹ ಚಿತ್ರ)

ನವದೆಹಲಿ: ದೇಶದ ಪ್ರಥಮ ಬುಲೆಟ್ ರೈಲು ಮುಂಬೈ ಹಾಗೂ ಅಹಮದಾಬಾದ್ ನಡುವೆ ಸಂಚರಿಸಲಿದ್ದು, ರೈಲಿನ ಪ್ರಯಾಣ ದರ ಸುಮಾರು 3000 ರೂಪಾಯಿ ಆಗುತ್ತದೆ ಎಂದು ನ್ಯಾಷನಲ್ ಹೈ ಸ್ಪೀಡ್ ರೈಲ್ ಕಾರ್ಪೊರೇಶನ್ ಲಿಮಿಟೆಡ್(ಎನ್ಎಚ್ಎಸ್ಆರ್ ಸಿಎಲ್) ನ ಅಧಿಕಾರಿಗಳು ಗುರುವಾರ ತಿಳಿಸಿದ್ದಾರೆ.

ಮುಂಬೈ ಹಾಗೂ ಅಹಮದಾಬಾದ್ ನಡುವೆ 508 ಕಿ.ಮೀ ಅಂತರವಿದ್ದು, ಈ ಮಾರ್ಗ ನಿರ್ಮಾಣಕ್ಕೆ ಒಟ್ಟು 1,380 ಹೆಕ್ಟೆರ್ ಭೂಮಿಯ ಅಗತ್ಯ ಇದೆ. ಈಗಾಗಲೇ ಶೇ.45ರಷ್ಟು ಅಂದರೆ 622 ಹೆಕ್ಟೆರ್ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳಲಾಗಿದೆ ಎಂದು ಎನ್ಎಚ್ಎಸ್ಆರ್ ಸಿಎಲ್ ವ್ಯವಸ್ಥಾಪಕ ನಿರ್ದೇಶಕ ಅಚಲ್ ಖರೆ ಅವರು ಹೇಳಿದ್ದಾರೆ.

ಮುಂಬೈ-ಅಹಮದಾಬಾದ್ ನಡುವೆ ಬುಲೆಟ್ ರೈಲು ಪ್ರತಿನಿತ್ಯ 70 ಬಾರಿ ಸಂಚರಿಸಲಿದ್ದು, ಒಂದು ಕಡೆಯಿಂದ ಬೆಳಗ್ಗೆ 6ರಿಂದ 12 ಗಂಟೆಯವರೆಗೆ 35 ಬಾರಿ ಸಂಚರಿಸಲಿದೆ. ಪ್ರಯಾಣ ದರ ಸುಮಾರು  3 ಸಾವಿರ ರೂಪಾಯಿ ನಿಗದಿಪಡಿಸಲಾಗುವುದು ಎಂದು ಅವರು ತಿಳಿಸಿದ್ದಾರೆ.

ಇನ್ನು ಈ ಮಾರ್ಗವಾಗಿ ಸಂಚರಿಸುವ ಬುಲೆಟ್ ರೈಲಿನ ವೇಗ ಮೊದಲ ಹಂತದಲ್ಲಿ ಗಂಟೆಗೆ 350 ಕಿ.ಮೀ ಇರಲಿದ್ದು, ನಂತರ 320ಕ್ಕೆ ಕಡಿತಗೊಳ್ಳಲಿದೆ.

ಈ ಮಾರ್ಗವಾಗಿ ಸಂಚರಿಸುತ್ತಿರುವ ತುರಂತೋ ರೈಲಿನ ಪ್ರಥಮ ದರ್ಜೆ ಎ.ಸಿ. ಬೋಗಿಯ ಒಂದು ಸೀಟಿಗೆ 2,200 ರುಪಾಯಿ ಪ್ರಯಾಣ ದರವಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com