ವಾಯುಮಾಲಿನ್ಯ ತಡೆಗೆ ಮತ್ತೆ ದೆಹಲಿಯಲ್ಲಿ ಸಮ-ಬೆಸ ಸಂಚಾರಕ್ಕೆ ಚಾಲನೆ: ಸಿಎಂ ಕೇಜ್ರಿವಾಲ್

ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ವಾಯುಮಾಲಿನ್ಯ ಸಮಸ್ಯೆ ನಿಯಂತ್ರಿಸಲು ಮುಂದಾಗಿರುವ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ಮತ್ತೆ ಸಮ-ಬೆಸ ಸಂಚಾರ ವ್ಯವಸ್ಥೆ ಆರಂಭಿಸುವುದಾಗಿ ಶುಕ್ರವಾರ ಹೇಳಿದ್ದಾರೆ.

Published: 13th September 2019 01:28 PM  |   Last Updated: 13th September 2019 01:34 PM   |  A+A-


Representative image

ಸಾಂದರ್ಭಿಕ ಚಿತ್ರ

Posted By : Manjula VN
Source : The New Indian Express

ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ವಾಯುಮಾಲಿನ್ಯ ಸಮಸ್ಯೆ ನಿಯಂತ್ರಿಸಲು ಮುಂದಾಗಿರುವ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ಮತ್ತೆ ಸಮ-ಬೆಸ ಸಂಚಾರ ವ್ಯವಸ್ಥೆ ಆರಂಭಿಸುವುದಾಗಿ ಶುಕ್ರವಾರ ಹೇಳಿದ್ದಾರೆ. 

ಈ ಕುರಿತಂತೆ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿರುವ ಅವರು, ರಾಜಧಾನಿಯಲ್ಲಿ ವಾಯುಮಾಲಿನ್ಯ ಹೆಚ್ಚಾಗುತ್ತಿದ್ದು, ಸಮಸ್ಯೆ ನಿವಾರಣೆಗಾಗಿ ಮತ್ತೆ ಸಮ-ಬೆಸ ಸಂಚಾರ ವ್ಯವಸ್ಥೆಗೆ ಚಾಲನೆ ನೀಡಲಾಗುತ್ತಿದೆ ಎಂದು ಹೇಳಿದ್ದಾರೆ. 

ದೆಹಲಿಯಲ್ಲಿ ವಾಯುಮಾಲಿನ್ಯ ನಿಯಂತ್ರಿಸಲು 7 ಅಂಶಗಳ ಕ್ರಿಯಾ ಯೋಜನೆ ಜಾರಿಗೆ ತರಲಾಗುತ್ತಿದೆ. ಈ ವ್ಯವಸ್ಥೆ ನವೆಂಬರ್ 4ರಿಂದ 15ವರೆಗೂ ಚಾಲ್ತಿಯಲ್ಲಿರಲಿದೆ ಎಂದು ಹೇಳಿದ್ದಾರೆ. 

ಚಳಿಗಾಲದಲ್ಲಿ ಜನತೆಯನ್ನು ಕಾಡುವ ವಾಯುಮಾಲಿನ್ಯ ಅಪಾಯದ ಮಟ್ಟ ತಲುಪುತ್ತದೆ. ಈ ಹಿನ್ನಲೆಯಲ್ಲಿ ನವೆಂಬರ್ ಆರಂಭದಿಂದಲೇ ಸಮ-ಬೆಸ ಸಂಖ್ಯೆಯ ವಾಹನ ಸಂಚಾರವನ್ನು ಪುನಾರಾರಂಭಿಸಲಾಗುವುದು. ವಾಯುಮಾಲಿನ್ಯವನ್ನು ಪ್ರತೀನಿತ್ಯ ಪರಿಶೀಲನೆ ನಡೆಸುತ್ತಿರುವ ಏಕೈಕ ರಾಜ್ಯವೆಂದರೆ ಅದು ದೆಹಲಿ ಮಾತ್ರ. ಸಮ-ಬೆಸ ನಿಯಮವನ್ನು ಇದು ಮೂರನೇ ಬಾರಿಗೆ ಜಾರಿಗೆ ತರಲಾಗುತ್ತಿದೆ ಎಂದು ತಿಳಿಸಿದ್ದಾರೆ. 

ಈ ಹಿಂದೆ ಕೂಡ ಸಮ-ಬೆಸ ಸಂಖ್ಯೆಗಳ ವಾಹನ ಸಂಚಾರ ಕುರಿತು ಕೇಜ್ರಿವಾಲ್ ಅವರು ಯೋಜನೆ ರೂಪಿಸಿದ್ದರು, ಆದರೆ, ಈ ಸಂಬಂಧ ಅನೇಕ ಭಿನ್ನಾಭಿಪ್ರಾಯಗಳಿಂದ ಯೋಜನೆ ಸ್ಧಗಿತಗೊಂಡಿತ್ತು. 

2016ರಲ್ಲಿ ಮೊದಲ ಬಾರಿ ಈ ಯೋಜನೆಯನ್ನು ಜಾರಿಗೆ ತರಲಾಗಿತ್ತು. ಸಮಸಂಖ್ಯೆಯ ನಂಬರ್ ಹೊಂದಿದಂತಹ ವಾಹನಗಳು ಪರ್ಯಾಯ ದಿನ ಸಂಚಾರ ಮಾಡುವ ಈ ಯೋಜನೆ ವಿವಾದಕ್ಕೆ ಕಾರಣವಾಗಿತ್ತು. 

Stay up to date on all the latest ರಾಷ್ಟ್ರೀಯ news with The Kannadaprabha App. Download now
facebook twitter whatsapp