ದಾಖಲೆ ಬರೆದ ತೇಜಸ್ ಸ್ವದೇಶಿ ಯುದ್ದ ವಿಮಾನ; 'ಅರೆಸ್ಟ್ ಲ್ಯಾಂಡಿಂಗ್' ಪರೀಕ್ಷೆ ಯಶಸ್ವಿ!

ಡಿಆರ್‌ಡಿಒ ಮತ್ತು ಎಡಿಎ ಇಂದು ಗೋವಾದ ಕಡಲ ಕಿನಾರೆಯಲ್ಲಿ ಇದೇ ಮೊದಲ ಬಾರಿಗೆ ಲೈಟ್ ಕಾಂಬ್ಯಾಟ್ ಏರ್‌ಕ್ರಾಫ್ಟ್ (ನೇವಿ)ಅನ್ನು ಎನ್‌ಎಸ್ ಹನ್ಸಾ ನಲ್ಲಿ ತುರ್ತಾಗಿ ನಿಲುಗಡೆ ಮಾಡುವ ಪ್ರಯೋಗ ಯಶಸ್ವಿಯಾಗಿದೆ.  ಲೈಟ್ ಕಾಂಬ್ಯಾಟ್ ಏರ್‌ಕ್ರಾಫ್ಟ್ (ಎಲ್ಸಿಎ) ಸ್ಥಳೀಯವಾಗಿ ಅಭಿವೃದ್ಧಿಪಡಿಸಲಾಗಿರುವ ತೇಜಸ್ ಯುದ್ಧ ವಿಮಾನಗಳ ನೌಕಾ ಆವೃತ್ತಿಯಾಗಿದೆ.
ನೇವಲ್ ಎಲ್ಸಿಎ ತೇಜಸ್
ನೇವಲ್ ಎಲ್ಸಿಎ ತೇಜಸ್

ಪಣಜಿ: ಡಿಆರ್‌ಡಿಒ ಮತ್ತು ಎಡಿಎ ಇಂದು ಗೋವಾದ ಕಡಲ ಕಿನಾರೆಯಲ್ಲಿ ಇದೇ ಮೊದಲ ಬಾರಿಗೆ ಲೈಟ್ ಕಾಂಬ್ಯಾಟ್ ಏರ್‌ಕ್ರಾಫ್ಟ್ (ನೇವಿ)ಅನ್ನು ಎನ್‌ಎಸ್ ಹನ್ಸಾ ನಲ್ಲಿ ತುರ್ತಾಗಿ ನಿಲುಗಡೆ ಮಾಡುವ ಪ್ರಯೋಗ ಯಶಸ್ವಿಯಾಗಿದೆ.  ಲೈಟ್ ಕಾಂಬ್ಯಾಟ್ ಏರ್‌ಕ್ರಾಫ್ಟ್ (ಎಲ್ಸಿಎ) ಸ್ಥಳೀಯವಾಗಿ ಅಭಿವೃದ್ಧಿಪಡಿಸಲಾಗಿರುವ ತೇಜಸ್ ಯುದ್ಧ ವಿಮಾನಗಳ ನೌಕಾ ಆವೃತ್ತಿಯಾಗಿದೆ.

ತುರ್ತು ಲ್ಯಾಂಡಿಂಗ್ ಅನ್ನು ಯಶಸ್ವಿಯಾಗಿ ಕಾರ್ಯಗತಗೊಳಿಸುವುದರಿಂದ ಭಾರತೀಯ ವಿಮಾನವಾಹಕ ನೌಕೆ ವಿಕ್ರಮಾದಿತ್ಯದಲ್ಲಿ ವಿಮಾನವಾಹಕ  ಲ್ಯಾಂಡಿಂಗ್ ಪ್ರದರ್ಶನವನ್ನು ಕೈಗೊಳ್ಳಲು ದಾರಿಯಾಗಿದೆ ಎಂದು ಅಧಿಕೃತ ಹೇಳಿಕೆ ತಿಳಿಸಿದೆ.

ಭಾರತೀಯ ನೌಕಾಪಡೆಗೆ ಭವಿಷ್ಯದಲ್ಲಿ ವಿಮಾನವಾಹಕ ನೌಕೆಗಳ ಅಗತ್ಯವಿದ್ದು ಐಎನ್‌ಎಸ್ ವಿಕ್ರಾಂತ್ ಸೇರಿದಂತೆ ಹಲವಾರು ಫೈಟರ್ ಜೆಟ್‌ಗಳ ಅಗತ್ಯವೂ ಇದೆ ಮತ್ತೀಗ ಅವುಗಳು ನಿರ್ಮಾಣದ ನಂತರದ ಹಂತ (ಪರೀಕ್ಷಾ ಹಂತ) ದಲ್ಲಿದೆ.

ಈ ವರ್ಷದ ಏಪ್ರಿಲ್ 20 ರಂದು ಆಗಿನ ನೌಕಾಪಡೆಯ ಮುಖ್ಯಸ್ಥ ಅಡ್ಮಿರಲ್ ಸುನಿಲ್ ಲಾಂಬಾ ಐಎಸಿ -1 ಅಥವಾ ಐಎನ್ಎಸ್ ವಿಕ್ರಾಂತ್ ಅವರನ್ನು 2021 ರ ವೇಳೆಗೆ ಭಾರತೀಯ ನೌಕಾಪಡೆಗೆ ಸೇರ್ಪಡಿಸಲಾಗುವುದು ಎಂದು ಹೇಳಿದ್ದರು. ಸಮುದ್ರ ಭಾಗದಲ್ಲಿ ವರ್ಧಿಸುತ್ತಿರುವ ಚೀನಾದ ಸೇನಾಶಕ್ತಿಯನ್ನು ಎದುರಿಸಲು ಮುಂದಿನ ದಿನಗಳಲ್ಲಿ ಹಿಂದೂ ಮಹಾಸಾಗರ ವ್ಯಾಪ್ತಿಯಲ್ಲಿ ಮೂರನೇ ವಿಮಾನವಾಹಕ ನೌಕೆಯನ್ನು ಹೊಂದಲು ನೌಕಾಪಡೆ ಆಶಿಸಿದೆ

ಹಲವಾರು ವರ್ಷಗಳ ಹಾರಾಟ ಪರೀಕ್ಷೆ ಮತ್ತು ಗೋವಾ ತೀರ ಆಧಾರಿತ ಪರೀಕ್ಷಾ ಸೌಲಭ್ಯದ ನಾಲ್ಕು ಅಭಿಯಾನದ ನಂತರ, ಇಂದು ಎಲ್‌ಸಿಎ (ನೇವಿ) ಫ್ಲೈಟ್ ಟೆಸ್ಟ್ ತಂಡ ಸಿಎಂಡಿ ಜೆಎ ಮೌಲಂಕರ್ (ಮುಖ್ಯ ಟೆಸ್ಟ್ ಪೈಲಟ್), ಕ್ಯಾಪ್ಟನ್ ಶಿವನಾಥ್ ದಹಿಯಾ (ಎಲ್‌ಎಸ್‌ಒ) ಮತ್ತು ಸಿಡಿಆರ್ ಜೆಡಿ ರತುರಿ ( ಪರೀಕ್ಷಾ ನಿರ್ದೇಶಕರು) ಇಂದು ತುರ್ತು ಲ್ಯಾಂಡಿಂಗ್ ಅನ್ನು ಯಶಸ್ವಿಯಾಗಿ ಕಾರ್ಯಗತಗೊಳಿಸಿದರು."ಈ ತುರ್ತು ಲ್ಯಾಂಡಿಂಗ್ ನಿಜವಾದ ಸ್ಥಳೀಯ ಸಾಮರ್ಥ್ಯದ ಪ್ರದರ್ಶನವಾಗಿದೆ. ಮತ್ತು ನಮ್ಮ ವೈಜ್ಞಾನಿಕ ಸಮೂಹದ  ಏರೋನಾಟಿಕಲ್ ಡೆವಲಪ್‌ಮೆಂಟ್ ಏಜೆನ್ಸಿ (ಎಡಿಎ) ಯ ವೃತ್ತಿಪರತೆಯ ಯಶಸ್ಸನ್ನು ಪ್ರದರ್ಶಿಸುತ್ತದೆ ಅಲ್ಲದೆ ಚ್‌ಎಎಲ್ (ಎಆರ್‌ಡಿಸಿ), ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (ಡಿಆರ್‌ಡಿಒ) ಮತ್ತು ಸಿಎಸ್‌ಐಆರ್ ಲ್ಯಾಬ್‌ಗಳ ವಿನ್ಯಾಸ ಮತ್ತು ನಿರ್ಮಾಣ ಸಾಮರ್ಥ್ಯವನ್ನು ಇದು ಸಾಬೀತು ಮಾಡಿದೆ." ಹೇಳಿಕೆಯಲ್ಲಿ ವಿವರಿಸಲಾಗಿದೆ.

ದಾಖಲೆ ಬರೆದ ತೇಜಸ್; 'ಅರೆಸ್ಟ್ ಲ್ಯಾಂಡಿಂಗ್' ಪರೀಕ್ಷೆ ಯಶಸ್ವಿ!
ದೇಶೀಯ ನಿರ್ಮಿತ ಲಘು ಯುದ್ಧ ವಿಮಾನ ’ತೇಜಸ್‌‘ ನಿಗದಿತ ಸ್ಥಳದಲ್ಲಿ ನಿಯಂತ್ರಿತ ಇಳಿಸುವಿಕೆ(ಅರೆಸ್ಟೆಡ್‌ ಲ್ಯಾಂಡಿಂಗ್‌) ಪರೀಕ್ಷೆಯಲ್ಲಿ ಯಶಸ್ವಿಯಾಗಿದೆ.  ಈ ಪರೀಕ್ಷೆಯಲ್ಲಿ ಯಶಸ್ವಿಯಾದ ದೇಶದ ಮೊದಲ ಯುದ್ಧ ವಿಮಾನ ಎಂಬ ಹೆಗ್ಗಳಿಕೆಗೆ ತೇಜಸ್‌ ಪಾತ್ರವಾಗಿದೆ. ನೌಕಾ ಪಡೆ ಕಾರ್ಯಾಚರಣೆಗಳಲ್ಲಿ ಸೇರ್ಪಡೆಯಾಗಲಿರುವ ತೇಜಸ್‌ ಪ್ರಮುಖ ಹಂತವನ್ನು ಪೂರೈಸಿದಂತಾಗಿದೆ.  ವೇಗವಾಗಿ ಹಾರಾಟ ನಡೆಸುವ ಯುದ್ಧ ವಿಮಾನ ಅತ್ಯಂತ ಕಡಿಮೆ ಅಂತರದಲ್ಲಿ ಸುರಕ್ಷಿತವಾಗಿ ಇಳಿಯುವ ಸಾಮರ್ಥ್ಯ ಪರೀಕ್ಷೆ ಇದಾಗಿತ್ತು. ಯುದ್ಧ ನೌಕೆಯಿಂದ ಹಾರುವ ಯುದ್ಧ ವಿಮಾನ ಕಾರ್ಯಾಚರಣೆಯ ಬಳಿಕ ನೌಕೆಯ ನಿಗದಿತ ಸ್ಥಳದಲ್ಲಿ ಇಳಿಯಬೇಕು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com