ಉತ್ತರ ಪ್ರದೇಶ: ಚಿತ್ರಕೂಟದಲ್ಲಿ ರಾಜ್ಯದ ಮೊದಲ ಹಗ್ಗದ ಮಾರ್ಗ ಉದ್ಘಾಟಿಸಿದ ಯೋಗಿ ಆದಿತ್ಯನಾಥ್

ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಚಿತ್ರಕೂಟದಲ್ಲಿ ರಾಜ್ಯದ ಮೊದಲ ಹಗ್ಗದ ಮಾರ್ಗ ('ರೋಪ್'ವೇ)ವನ್ನು ಶನಿವಾರ ಉದ್ಘಾಟಿಸಿ, ಕಾಮನಾಥ್ ದೇವಾಲಯದಲ್ಲಿ ಪೂಜೆ ಸಲ್ಲಿಸಿದರು.

Published: 14th September 2019 09:56 PM  |   Last Updated: 14th September 2019 09:56 PM   |  A+A-


CM Yogi inaugurates UP's 1st ropeway in Chitrakoot

ಉತ್ತರ ಪ್ರದೇಶ: ಚಿತ್ರಕೂಟದಲ್ಲಿ ರಾಜ್ಯದ ಮೊದಲ ಹಗ್ಗದ ಮಾರ್ಗ ಉದ್ಘಾಟಿಸಿದ ಯೋಗಿ ಆದಿತ್ಯನಾಥ್

Posted By : Srinivas Rao BV
Source : Online Desk

ಚಿತ್ರಕೂಟ: ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಚಿತ್ರಕೂಟದಲ್ಲಿ ರಾಜ್ಯದ ಮೊದಲ ಹಗ್ಗದ ಮಾರ್ಗ ('ರೋಪ್'ವೇ)ವನ್ನು ಶನಿವಾರ ಉದ್ಘಾಟಿಸಿ, ಕಾಮನಾಥ್ ದೇವಾಲಯದಲ್ಲಿ ಪೂಜೆ ಸಲ್ಲಿಸಿದರು.

ಮುಖ್ಯಮಂತ್ರಿ ಸ್ವತಃ ರೋಪ್ ವೇಯಲ್ಲಿ ಕಾಮದ್ ಗರಿಯ ಪರಿಕ್ರಮ ಮಾರ್ಗವನ್ನು ಪ್ರಯಾಣಿಸಿದರು. ಅವರು ಇದೇ ವೇಳೆ ಮಹಿಳೆಯರಿಗೆ ಸೆಣಬಿನ ಚೀಲಗಳನ್ನು ವಿತರಿಸಿ, ಪಾಲಿಥಿನ್ ಅನ್ನು ಬಹಿಷ್ಕರಿಸುವಂತೆ ಮನವಿ ಮಾಡಿದರು. ಆದಿತ್ಯನಾಥ್ ಅವರು ಕಾಮನಾಥ ದೇವಸ್ಥಾನಕ್ಕೆ ಭೇಟಿ ನೀಡಿ ಅಲ್ಲಿ ಪೂಜೆ ಸಲ್ಲಿಸಿದರು. ನಂತರ ಕಾಮದ್;ಗಿರಿಯ ಪರಿಕ್ರಾಮವನ್ನು ಪ್ರಾರಂಭಿಸಿದರು. ಪರಿಕ್ರಾಮದ ಹಾದಿಯಲ್ಲಿರುವ ಎಲ್ಲಾ ದೇವಾಲಯಗಳಲ್ಲೂ ಮುಖ್ಯಮಂತ್ರಿ ಪೂಜೆ ಸಲ್ಲಿಸಿದರು. ಅವರು ಭಾರತ್ ಮಿಲಾಪ್ ದೇವಸ್ಥಾನದಲ್ಲಿ ವಿಶೇಷ ಪೂಜೆ ನೆರವೇರಿಸಿದರು.

Stay up to date on all the latest ರಾಷ್ಟ್ರೀಯ news with The Kannadaprabha App. Download now
facebook twitter whatsapp