ಗಂಗಾನದಿ ಸುರಕ್ಷತೆಗಾಗಿ ಉಡುಗೊರೆ ಹರಾಜಿಗಿಟ್ಟ ಮೊದಲ ಪ್ರಧಾನಿ ಮೋದಿ: ಪ್ರಹ್ಲಾದ್ ಸಿಂಗ್

ಪ್ರಧಾನಿ ನರೇಂದ್ರ ಮೋದಿ ಅವರಿಗೆ ನೀಡಲ್ಪಟ್ಟ 2,700ಕ್ಕೂ ಅಧಿಕ ಸ್ಮರಣಿಕೆ ಮತ್ತು ವಿವಿಧ ಉಡುಗೊರೆಗಳನ್ನು ಇ-ಹರಾಜು ನಡೆಸಿ ಅದರಿಂದ ಬಂದ ಹಣವನ್ನು ನಮಾಮಿ ಗಂಗಾ ಉಪಕ್ರಮದಡಿ ಗಂಗಾ ನದಿಯ ಸಂರಕ್ಷಣೆಗೆ ಬಳಸಲಾಗುವುದು ಎಂದು ಪ್ರವಾಸೋದ್ಯಮ ಮತ್ತು ಸಂಸ್ಕೃತಿ ಖಾತೆ ಸಚಿವ ಪ್ರಹ್ಲಾದ್ ಸಿಂಗ್ ಪಟೇಲ್ ಶನಿವಾರ ತಿಳಿಸಿದ್ದಾರೆ.
ಕೇಂದ್ರ ಸಚಿವರಿಂದ ಪ್ರಧಾನಿ ಮೋದಿ ಅವರ ಉಡುಗೊರೆಗಳ ಹರಾಜಿಗೆ ಚಾಲನೆ
ಕೇಂದ್ರ ಸಚಿವರಿಂದ ಪ್ರಧಾನಿ ಮೋದಿ ಅವರ ಉಡುಗೊರೆಗಳ ಹರಾಜಿಗೆ ಚಾಲನೆ

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರಿಗೆ ನೀಡಲ್ಪಟ್ಟ 2,700ಕ್ಕೂ ಅಧಿಕ ಸ್ಮರಣಿಕೆ ಮತ್ತು ವಿವಿಧ ಉಡುಗೊರೆಗಳನ್ನು ಇ-ಹರಾಜು ನಡೆಸಿ ಅದರಿಂದ ಬಂದ ಹಣವನ್ನು ನಮಾಮಿ ಗಂಗಾ ಉಪಕ್ರಮದಡಿ ಗಂಗಾ ನದಿಯ ಸಂರಕ್ಷಣೆಗೆ ಬಳಸಲಾಗುವುದು ಎಂದು ಪ್ರವಾಸೋದ್ಯಮ ಮತ್ತು ಸಂಸ್ಕೃತಿ ಖಾತೆ ಸಚಿವ ಪ್ರಹ್ಲಾದ್ ಸಿಂಗ್ ಪಟೇಲ್ ಶನಿವಾರ ತಿಳಿಸಿದ್ದಾರೆ.

ಇದು ಪ್ರತಿಷ್ಠಿತ ಮತ್ತು ಸ್ಮರಣೀಯ ಉಡುಗೊರೆಗಳ ಎರಡನೇ ಸುತ್ತಿನ ಇ- ಹರಾಜು ಆಗಿದ್ದು, ಈ ಪ್ರದರ್ಶನವು ಶನಿವಾರದಿಂದ ಅಕ್ಟೋಬರ್ 3 ರವರೆಗೆ ವೆಬ್ ಪೋರ್ಟಲ್ www.pmmementos.gov.in ನಲ್ಲಿ ನಡೆಯಲಿದೆ ಎಂದು ಅವರು ತಿಳಿಸಿದರು.

ಇಂದಿಲ್ಲಿ, ಪ್ರಧಾನ ಮಂತ್ರಿಗೆ ನೀಡಲ್ಪಟ್ಟ ಉಡುಗೊರೆಗಳ ಎರಡನೇ ಹಂತದ ವಸ್ತಪ್ರದರ್ಶನ ಮತ್ತು ಇ-ಹರಾಜನ್ನು ಉದ್ಘಾಟಿಸಿದ ಪಟೇಲ್, ತಮಗೆ ದೊರೆತ ಎಲ್ಲಾ ಉಡುಗೊರೆಗಳನ್ನು ನಮಾಮಿ ಗಂಗೆಯ ಮೂಲಕ ದೇಶದ ಜೀವಸೆಲೆಯಾಗಿರುವ ಗಂಗಾ ನದಿಯ ಸಂರಕ್ಷಣೆಗೆ ಹರಾಜು ಮಾಡಲು ನಿರ್ಧರಿಸಿದ ದೇಶದ ಮೊಟ್ಟಮೊದಲ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಎಂದು ಬಣ್ಣಿಸಿದರು

ಹರಾಜಿಗಿರುವ ಉಡುಗೊರೆಗಳ ಕನಿಷ್ಟ ಬೆಲೆ 200 ರೂ. ಆಗಿದ್ದರೆ ಗರಿಷ್ಟ 2.5 ಲಕ್ಷ ರೂ. ಇದೆ.

"ನಾನು ಯಾವಾಗಲೂ ನಂಬಿರುವ ಅಭ್ಯಾಸವನ್ನು ಮುಂದುವರಿಸುತ್ತಿದ್ದೇನೆ! ಕಳೆದ ಒಂದು ವರ್ಷದಲ್ಲಿ ನಾನು ಪಡೆದ ಎಲ್ಲಾ ಉಡುಗೊರೆಗಳು ಮತ್ತು ಮೆಮೆಂಟೋಗಳು ಇಂದಿನಿಂದ ಅಕ್ಟೋಬರ್ 3 ರವರೆಗೆ ಹರಾಜಾಗಲಿವೆ. ಈ ಪ್ರದರ್ಶನವು ದೆಹಲಿಯ ಇಂಡಿಯಾ ಗೇಟ್ ಬಳಿಯ ಎನ್‌ಜಿಎಂಎದಲ್ಲಿ ನಡೆಯ;ಲಿದೆ"  ಇ-ಹರಾಜು ವೆಬ್‌ಸೈಟ್‌ ಲಿಂಕ್ ಅನ್ನು ನೀಡಿ ಪ್ರಧಾನಿ ಮೋದಿ ಟ್ವೀಟ್ ಮಾಡಿದ್ದಾರೆ.

ಮೆಮೆಂಟೋಗಳಲ್ಲಿ 576 ಶಾಲುಗಳು, 964 ಅಂಗವಸ್ತ್ರ (ಕರಚೀಫ್) ಮತ್ತು ದೇಶದ ವೈವಿಧ್ಯಮಯ ಮತ್ತು ವರ್ಣರಂಜಿತ ಸಂಸ್ಕೃತಿಯನ್ನು ಚಿತ್ರಿಸುವ ವಿವಿಧ ಜಾಕೆಟ್‌ಗಳು ಸೇರಿವೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com