ಆಂಧ್ರ ಮಾಜಿ ಸಿಎಂ ಚಂದ್ರಬಾಬು ನಾಯ್ಡು ನಿವಾಸ ತೆರವಿಗೆ ನೋಟಿಸ್

ಬಹುಕೋಟಿ ಮೌಲ್ಯದ ತೆಲುಗುದೇಶಂ ಪಕ್ಷದ ಕಚೇರಿಯನ್ನು ಧ್ವಂಸಗೊಳಿಸಿದ ಬಳಿಕ ಈಗ ಆಂಧ್ರ ಪ್ರದೇಶ ಮಾಜಿ ಮಾಜಿ ಸಿಎಂ ಚಂದ್ರಬಾಬು ನಾಯ್ಡು ಅವರ ಅಧಿಕೃತ ನಿವಾಸಕ್ಕೂ ಕುತ್ತು ಬಂದಿದ್ದು, ಮನೆಯನ್ನು....
ಸಿಎಂ ಚಂದ್ರಬಾಬು ನಾಯ್ಡು
ಸಿಎಂ ಚಂದ್ರಬಾಬು ನಾಯ್ಡು

ಅಮರಾವತಿ: ಬಹುಕೋಟಿ ಮೌಲ್ಯದ ತೆಲುಗುದೇಶಂ ಪಕ್ಷದ ಕಚೇರಿಯನ್ನು ಧ್ವಂಸಗೊಳಿಸಿದ ಬಳಿಕ ಈಗ ಆಂಧ್ರ ಪ್ರದೇಶ ಮಾಜಿ ಮಾಜಿ ಸಿಎಂ ಚಂದ್ರಬಾಬು ನಾಯ್ಡು ಅವರ ಅಧಿಕೃತ ನಿವಾಸಕ್ಕೂ ಕುತ್ತು ಬಂದಿದ್ದು, ಮನೆಯನ್ನು ತೆರವುಗೊಳಿಸುವಂತೆ ಆಂಧ್ರ ಪ್ರದೇಶ ರಾಜಧಾನಿ ಅಭಿವೃದ್ಧಿ ಪ್ರಾಧಿಕಾರ(ಎಪಿಸಿಆರ್ ಡಿಎ) ಶನಿವಾರ ನೋಟಿಸ್ ನೀಡಿದೆ.

ಚಂದ್ರಬಾಬು ನಾಯ್ಡು ಅವರು ವಾಸವಾಗಿರುವ ಉಂದವಳ್ಳಿ ಮನೆ ಲಿಂಗಮನೇನಿ ನಿರ್ಮಾಣ ಸಂಸ್ಥೆಗೆ ಸೇರಿದ್ದು, ಅಕ್ರಮವಾಗಿ ನಿರ್ಮಿಸಿರುವ ಈ ಮನೆಯನ್ನು ಕೂಡಲೇ ತೆರವುಗೊಳಿಸುವಂತೆ ಎಪಿಸಿಆರ್ ಡಿಎ ಮತ್ತೊಂದು ನೋಟಿಸ್ ನೀಡಿದೆ. ಈ ಹಿಂದೆ ಕಳೆದ ಜೂನ್ ನಲ್ಲಿ ಒಂದು ನೋಟಿಸ್ ನೀಡಲಾಗಿತ್ತು. ಆದರೆ ಇದುವರೆಗೂ ಮನೆ ತೆರವುಗೊಳಿಸಿದ ಮಾಜಿ ಸಿಎಂಗೆ ಈಗ ಮತ್ತೊಂದು ನೋಟಿಸ್ ನೀಡಿದ್ದು, ಒಂದು ವೇಳೆ ಈಗಲೂ ತೆರವುಗೊಳಿಸದಿದ್ದರೆ ತಾನೇ ತೆರವುಗೊಳಿಸುವುದಾಗಿ ತಿಳಿಸಿದೆ.

ಸ್ಥಳ ಪರಿಶೀಲನೆ ವೇಳೆ ಕಟ್ಟಡ ನಿರ್ಮಾಣ ನಿಯಮ ಉಲ್ಲಂಘನೆ ಸೇರಿದಂತೆ ಹಲವು ನಿಯಮಗಳನ್ನು ಉಲ್ಲಂಘಿಸಿ ಈ ಕಟ್ಟಡ ನಿರ್ಮಿಸಲಾಗಿದ್ದು, ಅದನ್ನು ಕೂಡಲೇ ತೆರವುಗೊಳಿಸಬೇಕು ಎಂದು ನೋಟಿಸ್ ನಲ್ಲಿ ತಿಳಿಸಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com