ಪಿಎಂಸಿ ಬ್ಯಾಂಕ್ ಗೆ ಆರ್ ಬಿಐ ನಿರ್ಬಂಧ, ವಿತ್ ಡ್ರಾ ಮಿತಿ ಗರಿಷ್ಠ 1 ಸಾವಿರ

ಪಂಜಾಬ್ ಮತ್ತು ಮಹಾರಾಷ್ಟ್ರ ಸಹಕಾರಿ ಬ್ಯಾಂಕ್ ಲಿಮಿಟೆಡ್(ಪಿಎಂಸಿ) ಮೇಲೆ ಭಾರತೀಯ ರಿಸರ್ವ್ ಬ್ಯಾಂಕ್ ಹಲವು ನಿರ್ಬಂಧಗಳನ್ನು ವಿಧಿಸಿದ್ದು, ಬ್ಯಾಂಕ್ ಗ್ರಾಹಕರಲ್ಲಿ ಹಾಗೂ ಉದ್ಯಮ ವಲಯದಲ್ಲಿ ತೀವ್ರ ಆತಂಕಕ್ಕೆ ಕಾರಣವಾಗಿದೆ. 
ಪಿಎಂಸಿ ಬ್ಯಾಂಕ್
ಪಿಎಂಸಿ ಬ್ಯಾಂಕ್

ಮುಂಬೈ: ಪಂಜಾಬ್ ಮತ್ತು ಮಹಾರಾಷ್ಟ್ರ ಸಹಕಾರಿ ಬ್ಯಾಂಕ್ ಲಿಮಿಟೆಡ್(ಪಿಎಂಸಿ) ಮೇಲೆ ಭಾರತೀಯ ರಿಸರ್ವ್ ಬ್ಯಾಂಕ್ ಹಲವು ನಿರ್ಬಂಧಗಳನ್ನು ವಿಧಿಸಿದ್ದು, ಬ್ಯಾಂಕ್ ಗ್ರಾಹಕರಲ್ಲಿ ಹಾಗೂ ಉದ್ಯಮ ವಲಯದಲ್ಲಿ ತೀವ್ರ ಆತಂಕಕ್ಕೆ ಕಾರಣವಾಗಿದೆ. 

ಆರ್ ಬಿಐ ಸೂಚನೆಯ ಪ್ರಕಾರ, ಯಾವುದೇ ಉಳಿತಾಯ, ಚಾಲ್ತಿ ಖಾತೆ ಮತ್ತು ಇತರೆ ಠೇವಣಿ ಖಾತೆಗಳಿಂದ ಗ್ರಾಹಕರು ಗರಿಷ್ಠ 1 ಸಾವಿರ ರೂಪಾಯಿ ಮಾತ್ರ ವಿತ್ ಡ್ರಾ ಮಾಡಬುಹುದು ಎಂದು ಪಿಎಂಸಿ ಬ್ಯಾಂಕ್ ಮುಖ್ಯ ವ್ಯವಸ್ಥಾಪಕ ನಿರ್ದೇಶಕ ಯೋಗೇಶ್ ದಯಾಳ್ ಅವರು ತಿಳಿಸಿದ್ದಾರೆ.

ಬಹು-ರಾಜ್ಯ ಸಹಕಾರಿ ಬ್ಯಾಂಕ್ ಎಂದೇ ಖ್ಯಾತಿ ಪಡೆದಿರುವ ಪಿಎಂಸಿ ಬ್ಯಾಂಕ್, ಕರ್ನಾಟಕ, ಮಹಾರಾಷ್ಟ್ರ ದೆಹಲಿ, ಗೋವಾ, ಗುಜರಾತ್, ಆಂಧ್ರ ಪ್ರದೇಶ ಮತ್ತು ಮಧ್ಯ ಪ್ರದೇಶದಲ್ಲಿ ತನ್ನ ಶಾಖೆಗಳನ್ನು ಹೊಂದಿದೆ.

1984ರಲ್ಲಿ ಮುಂಬೈನಲ್ಲಿ ಸ್ಥಾಪನೆಯಾದ ಈ ಸಹಕಾರಿ ಬ್ಯಾಂಕ್ ಈಗ ಆರು ರಾಜ್ಯಗಳಲ್ಲಿ ಒಟ್ಟು 137 ಶಾಖೆಗಳನ್ನು ಹೊಂದಿದೆ ಮತ್ತು ದೇಶದ ಟಾಪ್ 10 ಸಹಕಾರಿ ಬ್ಯಾಂಕ್ ಗಳಲ್ಲಿ ಒಂದಾಗಿದೆ.

ಈ ಸಹಕಾರಿ ಬ್ಯಾಂಕ್ ಯಾವುದೇ ನಗದು ವಿತರಿಸುವುದನ್ನು ನಿರ್ಬಂಧಿಸಿದೆ. ಯಾವುದೇ ಪಾವತಿಯನ್ನು ಸ್ವೀಕರಿಸುವುದ, ಅದರ ಹೊಣೆಗಾರಿಕೆಗಳು ಮತ್ತು ಕಟ್ಟುಪಾಡುಗಳನ್ನು ಹೊರಹಾಕುವಲ್ಲಿ ಅಥವಾ ಯಾವುದೇ ರಾಜಿ ಅಥವಾ ವ್ಯವಸ್ಥೆಗಳಿಗೆ ಪ್ರವೇಶಿಸಿ ಮತ್ತು ಅದರ ಯಾವುದೇ ಆಸ್ತಿ ಅಥವಾ ಸ್ವತ್ತುಗಳನ್ನು ಮಾರಾಟ ಮಾಡುವುದು, ವರ್ಗಾಯಿಸುವುದು ಅಥವಾ ವಿಲೇವಾರಿ ಮಾಡುವುದನ್ನು ನಿರ್ಭಂಧಿಸಲಾಗಿದೆ ಎಂದು ಸೋಮವಾರ ಆರ್‌ಬಿಐ ಅಧಿಸೂಚನೆ ಹೊರಡಸಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com